BMTC: 1 ರೂ. ಚಿಲ್ಲರೆ ನೀಡಲು ನಿರಾಕರಿಸಿದ ಕಂಡಕ್ಟರ್! ಕೋರ್ಟ್ ಮೆಟ್ಟಿಲೇರಿ 2000 ಗಿಟ್ಟಿಸಿಕೊಂಡ ಪ್ರಯಾಣಿಕ!

BMTC: ಸಾಮಾನ್ಯವಾಗಿ ಲಕ್ಷಾಂತರ ರೂಪಾಯಿ, ಕೋಟ್ಯಂತರ ರೂಪಾಯಿಗಳಿಗೆ ಮೋಸ ಮಾಡಿದವರ ವಿರುದ್ಧ ಕೋರ್ಟಿಗೆ ಹೋಗಿ ದಾವೆ ಹೂಡಿ, ಅದಕ್ಕೆ ನ್ಯಾಯಲಯಗಳು ತಕ್ಕ ಶಾಸ್ತಿ ಮಾಡಿ ತೀರ್ಪನ್ನು ನೀಡಿದ್ದನ್ನು ನೋಡಿದ್ದೀವಿ. ಅಂತೆಯೇ ಇಲ್ಲೊಬ್ಬ ಪ್ರಯಾಣಿಕನೂ ಹಣದ ವಿಚಾರಕ್ಕೆ ಕೋರ್ಟಿಗೆ ಹೋಗಿದ್ದಾನೆ. ಆದರೆ ಆತ ಕೋರ್ಟ್(Court) ಮೆಟ್ಟಿಲೇರಿದ್ದು ಮಾತ್ರ ಕೇವಲ ಒಂದು ರೂಪಾಯಿಗಾಗಿ! ಅರೇ ಇದೇನು ವಿಚಿತ್ರವಪ್ಪ ಅಂದ್ಕೊಳ್ತಿದ್ದೀರಾ? ಹಾಗಿದ್ರೆ ಇಂಟ್ರೆಸ್ಟಿಂಗ್ ಇರೋ ಈ ಸ್ಟೋರಿ ನೋಡಿ.

ಹೌದು, ಬಿಎಂಟಿಸಿ(BMTC) ಪ್ರಯಾಣಿಕನೊಬ್ಬ, ಕಂಡಕ್ಟರ್ ತನಗೆ 1 ರೂ. ಚಿಲ್ಲರೆ ಹಣ ಕೊಡಲಿಲ್ಲ ಎಂದು, ಬಿಎಂಟಿಸಿ (BMTC) ವಿರುದ್ಧ ಗ್ರಾಹಕರ ನ್ಯಾಯಲಯದ ಮೆಟ್ಟಿಲೇರುವ ಮೂಲಕ ಇಲಾಖೆ ಮತ್ತು ಸಿಬ್ಬಂದಿಗೆ ದಂಡದ ಬಿಸಿ ಮುಟ್ಟಿಸಿದ್ದಾರೆ. 2019ರ ಸಪ್ಟೆಂಬರ್ 11ರಂದು ವಕೀಲ ರಮೇಶ್ ನಾಯಕ್ ಎಂಬುವವರು ಬಿಎಂಟಿಸಿ ವೋಲ್ವೋ ಬಸ್ಸಿನಲ್ಲಿ ಶಾಂತಿನಗರದಿಂದ ಮೆಜೆಸ್ಟಿಕ್‍ಗೆ ತೆರಳುತ್ತಿದ್ದರು. ಬಸ್‍ನಲ್ಲಿದ್ದಂತಹ ಲೇಡಿ ಕಂಡಕ್ಟರ್ 29 ರೂ.ಗಳ ಟಿಕೆಟ್ ನೀಡಿದ್ದಾರೆ. ಈ ವೇಳೆ ಪ್ರಯಾಣಿಕ (Passenger) 30 ರೂಪಾಯಿ ನೀಡಿದ್ದಾರೆ. ಕೆಳಗೆ ಇಳಿಯುವ ಸಂದರ್ಭದಲ್ಲಿ 1 ರೂ. ಚಿಲ್ಲರೆ ಕೇಳಿದಾಗ ಕಂಡಕ್ಟರ್ (Conductor) ಚಿಲ್ಲರೆ ಇಲ್ಲ ಎಂದು ಹೇಳಿ ಒಂದು ರೂಪಾಯಿಯನ್ನು ನೀಡಿಲ್ಲ.

ಬಳಿಕ ಇಬ್ಬರಿಗೂ ಈ ವೇಳೆ ಚಿಲ್ಲರೆ ನೀಡದ ಕಂಡಕ್ಟರ್ ವಿರುದ್ಧ ರಮೇಶ್ ನಾಯಕ್(Ramesh Nayak) ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಕಂಡಕ್ಟರ್ ಚಿಲ್ಲರೆ ನೀಡದ್ದರಿಂದ ರಮೇಶ್ ನಾಯಕ್ ಜಿಲ್ಲಾ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿ 15,000 ರೂ. ಪರಿಹಾರ ಕೋರಿದ್ದರು. ಇದೀಗ ನ್ಯಾಯಾಲಯ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 2000 ರೂ. ಪರಿಹಾರ ನೀಡುವಂತೆ ಆದೇಶ ನೀಡಿದೆ. ದೂರುದಾರರ ಕಾನೂನು ಶುಲ್ಕಕ್ಕೆ 1,000 ರೂ. ಪಾವತಿಸುವಂತೆ ನ್ಯಾಯಾಲಯವು ಸೂಚಿಸಿದೆ. ಸದ್ಯ ನ್ಯಾಯಾಲಯ ನೀಡಿರುವ ಆದೇಶದಂತೆ 45 ದಿನಗಳ ಒಳಗಾಗಿ ಪರಿಹಾರ ಮೊತ್ತವನ್ನು ನೀಡದೇ ಹೋದಲ್ಲಿ ವಾರ್ಷಿಕ ರೂ 6,000 ರೂ. ಬಡ್ಡಿದರ ಅನ್ವಯಿಸಬಹುದು ಎಂದು ಸೂಚನೆ ನೀಡಿದೆ.

ನ್ಯಾಯಾಲಯದ ಆದೇಶದ ಪ್ರಕಾರ ಬಸ್ಸಿನ ಕಂಡಕ್ಟರ್ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಚಿಲ್ಲರೆ ನೀಡದೇ ಇರುವುದನ್ನು ಬಿಎಂಟಿಸಿಯ ಕಚೇರಿಗೆ ತಿಳಿಸಿದಾಗಲೂ ಬಾಕಿ ಮೊತ್ತವನ್ನು ನೀಡಲ್ಲ. ಇದು ಗ್ರಾಹಕರ ಹಕ್ಕಿನ ವಿಷಯವಾಗಿ ಮೆಚ್ಚುಗೆ ಹಾಗೂ ಮಾನ್ಯತೆಯನ್ನು ಪಡೆಯುತ್ತಿದೆ. ಅಂತಹ ಸಂದರ್ಭದಲ್ಲಿ ದೂರುದಾರರು ಪರಿಹಾರದ ಮರುಪಾವತಿಗೆ ಅರ್ಹರಾಗಿರುತ್ತಾರೆ ಎಂದು ನ್ಯಾಯಾಲಯ ಹೇಳಿದೆ ಅದೇಶದಲ್ಲಿ ಉಲ್ಲೇಖಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ BMTC, ಚಿಲ್ಲರೆ ಇಲ್ಲದ ಕಾರಣ ಘಟನೆ ನಡೆದಿರಬಹುದು. ಈಗಾಗಲೇ ನ್ಯಾಯಾಲಯ ಈ ಸಂಬಂಧ ಇಲಾಖೆಗೆ ಸೂಚನೆ ನೀಡಿದೆ. ಜೊತೆಗೆ ಘಟನೆಗೆ ಕಾರಣ ಏನು ಎಂಬುವುದನ್ನು ತಿಳಿಯಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಚಿಲ್ಲರೆ ಸಮಸ್ಯೆಯಿಂದ ಇಂತಹ ಘಟನೆಗಳು ನಡೆಯುತ್ತವೆ. ಕೆಲವೊಮ್ಮೆ ಪ್ರಯಾಣಿಕರು ಕೂಡ ಸಹಕಾರ ನೀಡಬೇಕಾಗುತ್ತದೆ ಎಂದು ಬಿಎಂಟಿಸಿ ಎಂಡಿ ಸತ್ಯವತಿ ತಿಳಿಸಿದ್ದಾರೆ.

Leave A Reply

Your email address will not be published.