ಗೃಹಿಣಿಯರೇ, ನಿಮ್ಮ ಮುಖ ಹಾಲಿನ ಕೆನೆಯಂತೆ ಮೃದು ಮತ್ತು ಹೊಳಪಿನಂತಾಗಬೇಕೆ? ಯಾಕೆ ಇದನ್ನು ಟ್ರೈ ಮಾಡಬಾರದು?
Skin care: ಸುಂದರವಾಗಿ ಕಾಣಬೇಕು, ಕಾಂತಿಯುತ ಚರ್ಮ ಹೊಂದಬೇಕು ಅನ್ನೋದು ಎಲ್ಲಾ ಮಹಿಳೆಯರ ಆಸೆ. ತಮ್ಮ ತ್ವಚೆಯ ಕಾಂತಿ ಹೆಚ್ಚಿಸಲು ಹಲವಾರು ಕಸರತ್ತುಗಳನ್ನು ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಬೇರೆ ಬೇರೆ ಕ್ರೀಮ್ ಗಳನ್ನು ಹಚ್ಚಿ ಚಂದ ಕಾಣಲು ಯತ್ನಿಸುತ್ತಾರೆ. ಆದರೆ ಅವುಗಳನ್ನು ಬಳಸಿದ ನಂತರವೂ ನಿಮ್ಮ ಚರ್ಮಕ್ಕೆ ಯಾವುದೇ ಪ್ರಯೋಜನ ಲಭಿಸುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ನೀವು ಯೋಚಿಸುತ್ತೀರಿ. ಇದರೊಂದಿಗೆ ಎಷ್ಟೇ ಕೆಲಸಗಳಿದ್ದರೂ ಕೂಡ ಅದರ ಮಧ್ಯೆ ತ್ವಚೆಯ ಆರೈಕೆ (Skin care) ತುಂಬಾನೇ ಮುಖ್ಯವಾಗುತ್ತದೆ.
ಇದಕ್ಕಾಗಿ ಬೆಳಗ್ಗೆ ಎದ್ದ ತಕ್ಷಣ ತಣ್ಣಿರಿನಿಂದ ಮುಖ ತೊಳೆದು ಫೇಸ್‌ವಾಷ್ ಮಾಡಿ ಮುಖದ ಮೇಲಿರೋ ಎಣ್ಣೆಯ ಅಂಶ, ಡೆಡ್ ಸ್ಕಿನ್, ಪೋರ್ಸ್, ಕೊಳಕುಗಳನ್ನು ತೊಲಗಿಸಿ. ಆನಂತರ ನಿಮ್ಮ ಮನೆಯಲ್ಲೇ ಲಭ್ಯವಾಗೋ ಈ ಮೂರು ವಸ್ತುಗಳನ್ನು ಬಳಸಿ ಹೊಳೆಯುವ, ಕಾಂತಿಯುತವಾದ ತ್ವಚೆ ನಿಮ್ಮದಾಗಿಸಿ.
1. ಜೇನುತುಪ್ಪ: ಬೆಳಗ್ಗಿನ ಜಾವ ಜೇನುತುಪ್ಪದ ಮೂಲಕ ಮುಖಕ್ಕೆ ಸರಿಯಾಗಿ ಹದಿನೈದು ನಿಮಿಷ ಮಸಾಜ್ ಮಾಡಿ ನಂತರ ಹದಾ ಬಿಸಿನೀರಿನಿಂದ ಮುಖ ತೊಳೆಯಿರಿ. ಆನಂತರ ಒಂದು ತುಂಡು ಲಿಂಬೆಹನ್ಣನ್ನು ತೆಗೆದುಕೊಂಡು ಮುಖದ ತುಂಬಾ ಹಚ್ಚಿರಿ. ಆನಂತರ ಅದನ್ನು ಒಣಗಲು ಬಿಡಿ. ಜೇನುತುಪ್ಪವು ನಿಮ್ಮ ಮುಖದ ಬೇಡವಾದ ಕೂದಲನ್ನು ತೊಲಗಿಸುತ್ತದೆ. ಮತ್ತು ಚರ್ಮದ ಬಣ್ಣವನ್ನು ವೃದ್ಧಿಸುತ್ತದೆ.
2.ಹಾಲಿನ ಮಸಾಜ್: ನೀವು ಬೆಳಗ್ಗೆ ಎದ್ದ ತಕ್ಷಣ ಮುಖ ಸ್ವಚ್ಛಗೊಳಿಸಿ ತಣ್ಣಗಿನ ಹಾಲಿನಿಂದ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ. ಕೆಲ ಹೊತ್ತು ಹಾಗೇ ಇಟ್ಟು ನಂತರ ತಣ್ಣಿರಿನಿಂದ ಮುಖವನ್ನು ತೊಳೆಯಿರಿ. ಇದರಿಂದ ನಿಮ್ಮ ಮುಖದ ಚರ್ಮ ಮೃದು ಮತ್ತು ಕೋಮಲವಾಗುತ್ತದೆ. ಇದಿಷ್ಟೇ ಅಲ್ಲ, ಹಾಲಿನ ಮಸಾಜ್ ಮಾಡುವುದರಿಂದ ಕಪ್ಪು ಕಲೆಗಳನ್ನು ತೊಲಗಿಸಲು ಕೂಡ ಸಹಾಯ ಮಾಡುತ್ತದೆ.
3. ಸ್ಟ್ರಾಬೆರಿ ಹಣ್ಣು: ಸ್ಟ್ರಾಬೆರಿ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಅಧಿಕವಾಗಿದೆ. ಇದನ್ನು ಸೇವಿಸುವುದರಿಂದ ಆರೋಗ್ಯಕರ ಲಾಭಗಳಿದೆ. ಇದು ಚರ್ಮದ ಸುಕ್ಕು ಮತ್ತು ಕಣ್ಣಿನ ಸುತ್ತ ಇರುವ ಕಲೆಯನ್ನು ತೊಲಗಿಸುತ್ತದೆ. ಸ್ಟ್ರಾಬೆರಿಯನ್ನು ಹಾಗೇ ತಿನ್ನಲು ಜನ ಇಷ್ಟವಾಗುವುದಿಲ್ಲ. ಹೀಗಾಗಿ ಜ್ಯೂಸ್ ಅಥವಾ ಫ್ರೂಟ್ ಸಲಾಡ್ ಮುಖಾಂತರ ಸೇವಿಸಬಹುದು.
ಇನ್ನು ಲಿಂಬೆಹಣ್ಣಿನಿಂದ ಅನೇಕ ಆರೋಗ್ಯಕರ ಲಾಭಗಳಿದೆ ಅನ್ನೋದು ನಮಗೆ ಗೊತ್ತಿದೆ. ಅದರ ಬದಲಿಗೆ ಟೊಮೆಟೋ ಹಣ್ಣಿನ ಜ್ಯೂಸ್ ಕೂಡ ನೀವು ಮುಖಕ್ಕೆ ಹಚ್ಚಬಹುದು. ಇದರಿಂದ ನಿಮ್ಮ ಚರ್ಮ ಹೊಳೆಯುತ್ತದೆ ಮತ್ತು ಮೃದುವಾಗುತ್ತದೆ. ಆದರೆ ಸಿಟ್ರಿಕ್‌ಯುಕ್ತ ವಸ್ತುಗಳನ್ನು ಮುಖಕ್ಕೆ ಹಚ್ಚುವಾಗ ಹುಷಾರಾಗಿರಿ. ಯಾಕೆಂದರೆ ಕೆಲವು ಜನರ ಚರ್ಮಕ್ಕೆ ಇದು ಸೂಕ್ತವಲ್ಲ ಉರಿ, ತುರಿಕೆಯಂತಹ ಸಮಸ್ಯೆಗಳು ಉಂಟಾಗುತ್ತದೆ.
ನೋಡಿದ್ರಲ್ಲ ಮನೆಯಲ್ಲ ಸಿಗುವ ವಸ್ತುಗಳಿಂದ ನಮ್ಮ ಅಂದವನ್ನು ಹೇಗೆ ಹೆಚ್ಚಿಸಬಹುದು ಅನ್ನೊದನ್ನ. ಯಾವುದೇ ವಸ್ತುವಾಗಲಿ ಬಳಸುವಾಗ ಜಾಗರೂಕತೆಯಿಂದರಿ ನಿಮ್ಮ ಚರ್ಮಕ್ಕೆ ಸೂಕ್ತ ಎನಿಸಿದರೆ ಮಾತ್ರ ಅದರ ಬಳಕೆಯನ್ನು ಮುಂದುವರಿಸಿ.