Rohini Sindhuri : ರೂಪ-ರೋಹಿಣಿ ರಂಪಕ್ಕೆ ಸರ್ಕಾರ ಎಂಟ್ರಿ! ಇಬ್ಬರಿಗೂ ನೋಟಿಸ್ ನೀಡಿ ಮಾಧ್ಯಮದೆದುರು ಬರದಂತೆ ಖಡಕ್ ಎಚ್ಚರಿಕೆ!

IAS Rohini Sindhuri: ಐಪಿಎಸ್(IPS) ಅಧಿಕಾರಿ ರೂಪ.ಡಿ(Roopa D) ಹಾಗೂ ಐಎಎಸ್(IAS) ಅಧಿಕಾರಿ ರೋಹಿಣಿ ಸಿಂಧೂರಿಯವರೇ(Rohini Sindhuri) ನಿಮ್ಮಿಬ್ಬರ ಬೀದಿ ಜಗಳದಿಂದ ಸರ್ಕಾರಕ್ಕೆ ಮುಜುಗರ ಉಂಟಾಗಿದೆ. ನೀವು ಮಾಧ್ಯಮಗಳ ಮುಂದೆ ಆರೋಪ, ಪ್ರತ್ಯಾರೋಪ ಮಾಡಿಕೊಂಡು ಕಿತ್ತಾಡೋದು ಸರಿಯಲ್ಲ. ನೀವಿಬ್ಬರೂ ಅಖಿಲ ಭಾರತ ಸೇವಾ(AIS) ನಿಯಮಕ್ಕೆ ಬದ್ಧರಾಗಿರಬೇಕು. ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಇಬ್ಬರೂ ಮಹಿಳಾ ಅಧಿಕಾರಿಗಳಿಗೆ ನೋಟಿಸ್ ಖಡಕ್ ಎಚ್ಚರಿಕೆ ನೀಡಿದೆ.

 

ರೋಹಿಣಿ ಸಿಂಧೂರಿ (IAS Rohini Sindhuri) ಮತ್ತು ಡಿ. ರೂಪಾ ರಾಜ್ಯ ಸರ್ಕಾರ(State Government)ದ ಸೇವಾ ನಿಯಮಗಳನಿಯಮವನ್ನು ಮೀರಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಈ ಇಬ್ಬರೂ ಅಧಿಕಾರಿಗಳ ಈ ವರ್ತನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.

ಈ ಕುರಿತಂತೆ ಇಂದು ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಜೇಮ್ಸ್ ತಾರಕನ್(Jeams Tarakan) ಅವರು ಐಪಿಎಸ್ ಅಧಿಕಾರಿ ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸಿಎಂ ಬೊಮ್ಮಾಯಿ ಅವರ ಸೂಚನೆ ಮೇರೆಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಅವರು ಐಪಿಎಸ್ ರೂಪ ಹಾಗೂ ಐಎಎಸ್ ರೋಹಿಣಿ ಸಿಂಧೂರಿ ಅವರಿಗೆ ನೀಡಿರುವಂತ ನೋಟಿಸ್ ನಲ್ಲಿ ನಿಮ್ಮ ದೂರುಗಳನ್ನು ಸರ್ಕಾರದ ಮುಂದೆ ಹೇಳಿ. ಅದರನ್ನು ಬಿಟ್ಟು ಬಹಿರಂಗವಾಗಿ ಆರೋಪ-ಪ್ರತ್ಯಾರೋಹ ಮಾಡುತ್ತಿರೋದು ಸರಿಯಲ್ಲ. ಇದು ಮುಂದುವರೆಯಬಾರದು ಎಂದು ಎಚ್ಚರಿಸಲಾಗಿದೆ.

ಇನ್ನೊಬ್ಬ ಸರ್ಕಾರ ಅಧಿಕಾರಿಯ ವಿರುದ್ಧ ಆರೋಪ ಮಾಡಲು ಮಾಧ್ಯಮವನ್ನು ಬಳಕೆ ಮಾಡಿದ್ದೀರಿ, ನಿಮಗೆ ಆರೋಪ ಮಾಡಲು ಸೂಕ್ತ ವೇದಿಕೆ ಇದೆ. ಆದರೆ ಅದನ್ನು ಬಿಟ್ಟು ನೀವು ಮಾಧ್ಯಮ ಮುಂದೆ ಹೋಗಿದ್ದೀ ರಿ. ನಿಮ್ಮ ಈ ಕ್ರಮ ರಾಜ್ಯ ಸರ್ಕಾರಕ್ಕೆ ಮುಜುಗರ ತಂದಿದೆ. ಅಲ್ಲದೆ ನಿಮ್ಮ ವರ್ತನೆ ಭಾರತೀಯ ಸರ್ವೀಸ್ ನಿಯಮಗಳ ಉಲ್ಲಂಘನೆಯಾಗಿದೆ. ಇನ್ನು ಮುಂದೆ ಯಾವುದೇ ರೀತಿಯ ಆರೋಪಗಳಿದ್ದರೂ ಸಕ್ಷಮ‌ ಪ್ರಾಧಿಕಾರದ ಮುಂದೆ ಮಾಡಬಹುದು. ಅದು ಬಿಟ್ಟು ಮಾಧ್ಯಮಗಳ ಮುಂದೆ ಹೋಗಿದ್ದೀರಿ. ಹೀಗಾಗಿ ಇನ್ನು ಮುಂದೆ ಮಾಧ್ಯಮಗಳ ಮುಂದೆ ಹೋಗಬಾರದು ಎಂದು ಖಡಕ್ ಸೂಚನೆ ನೀಡಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಇಲಾಖೆಯಿಂದ ಈ ನೋಟಿಸ್ ಜಾರಿ ಮಾಡಲಾಗಿದೆ.

Leave A Reply

Your email address will not be published.