Vitamin D Deficiency: ಎಚ್ಚರ, ನಿಮ್ಮ ದೇಹದ ಮೇಲೆ ಸೂರ್ಯನ ಬೆಳಕು ಬೀಳದೇ ಇದ್ದರೆ ಈ ಅಪಾಯ ಖಂಡಿತ!
Vitamin D Deficiency: ದೇಹಕ್ಕೆ ವಿಟಮಿನ್ ಅತ್ಯಗತ್ಯ. ಹಲವು ಪೌಷ್ಟಿಕಾಂಶಯುಕ್ತ ಆಹಾರಗಳ ಮೂಲಕವೂ ದೇಹಕ್ಕೆ ವಿಟಮಿನ್ ದೊರಕುತ್ತದೆ. ಆದರೆ ವಿಟಮಿನ್ ಡಿ (Vitamin D Deficiency) ಸೂರ್ಯನ ಬೆಳಕಿನಿಂದ(Sun Light) ದೇಹಕ್ಕೆ ಸಿಗುವಂತದ್ದು, ಅದು ದುಡ್ಡು ಕೊಟ್ಟು ಕೊಳ್ಳುವಂತದ್ದಲ್ಲ, ಹಾಗೇ ಸಿಗದೇ ಇರುವಂತದ್ದೂ ಅಲ್ಲ. ಆದರೂ ಕೆಲವರಿಗೆ ಸೂರ್ಯನ ಎದುರು ಮೈ ಒಡ್ಡೋದಿಕ್ಕೆ ಅಸಡ್ಡೆ. ತಿಳಿದಿರಲಿ, ದೇಹದಲ್ಲಿ ವಿಟಮಿನ್ ಡಿ ಕೊರತೆ ಉಂಟಾದರೆ, ಸಾಕಷ್ಟು ತೊಂದರೆಗಳು ಎದುರಾಗುತ್ತೆ. ದೇಹದ ಮೂಳೆಗಳು ಸರಿಯಾಗಿ ಬೆಳವಣಿಗೆ ಆಗಬೇಕು ಅಂದ್ರೆ ಅದಕ್ಕೆ ವಿಟಮಿನ್ ಡಿ ಅತ್ಯಾವಶ್ಯಕ. ಅಲ್ಲದೆ, ಇದು ರೋಗನಿರೋಧಕ(immunity) ವ್ಯವಸ್ಥೆಯನ್ನು ಬಲಪಡಿಸುತ್ತದೆ. ಹಾಗಾಗಿ ನಮ್ಮ ದೇಹಕ್ಕೆ ಪ್ರತಿದಿನ 10-20 ಮೈಕ್ರೋಗ್ರಾಂಗಳಷ್ಟು ಈ ವಿಟಮಿನ್ ಡಿ (Vitamin D) ಅಗತ್ಯವಾಗಿ ಬೇಕು. ಇನ್ನು ನಿಮ್ಮ ದೇಹದಲ್ಲಿ ವಿಟಮಿನ್ ಡಿ ಕೊರತೆ ಆದಾಗ ನಿಮಗೆ ಕೆಲವು ಸೂಚನೆಗಳು ಸಿಗುತ್ತವೆ. ಯಾವುದು? ನೋಡೋಣ.
ಬೆನ್ನು ನೋವು : ಇದರ ಕೊರತೆ ಬೆನ್ನು ನೋವಿಗೆ ಕಾರಣವಾಗುತ್ತದೆ. ದೇಹ ಭಾಗಗಳು ಸರಿಯಾಗಿ ಕೆಲಸ ಮಾಡಲು ಜೀವಸತ್ವಗಳು ಮತ್ತು ಖನಿಜಗಳು ಬಹಳ ಮುಖ್ಯ. ಅವುಗಳ ಕೊರತೆ ದೇಹದ ಕಾರ್ಯ ನಿರ್ವಹಣೆಗೆ ಅಡಚಣೆ ಉಂಟು ಮಾಡುತ್ತದೆ. ಇದರ ಕೊರತೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದರ ಕೊರತೆಯಿಂದ ನಿರಂತರ ಬೆನ್ನು ನೋವು ಕಾಣಿಸಿಕೊಳ್ಳಬಹುದು. ವಿಟಮಿನ್ ಡಿ ಕ್ಯಾಲ್ಸಿಯಂ ಹೀರಿಕೊಳ್ಳುವ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಈ ಮೂಲಕ ಮೂಳೆಗಳನ್ನು ಬಲಪಡಿಸುತ್ತದೆ. ಸಂಧಿವಾತ, ಸ್ನಾಯು ನೋವು ಮತ್ತು ನಿರಂತರ ಬೆನ್ನು ನೋವು ಇರುವವರು ವಿಟಮಿನ್ ಡಿ ಕೊರತೆ ಹೊಂದಿರುತ್ತಾರೆ.
ಖಿನ್ನತೆ ಉಂಟಾಗುವುದು : ವಿಟಮಿನ್ ಡಿ ಕೊರತೆ ಉಂಟಾದರೆ ಖಿನ್ನತೆ ಕಾಡುವುದು. ಸದ್ಯ ಈ ಸಮಸ್ಯೆ ವಯಸ್ಕರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಅಲ್ಲದೆ, ಕೆಲವರಿಗೆ ಮಳೆಗಾಲದಲ್ಲಿ ಖಿನ್ನತೆ ಉಂಟಾಗುತ್ತದೆ. ಇದಕ್ಕೆ ಕಾರಣ ಸೂರ್ಯನ ಕಿರಣಗಳು ಹೆಚ್ಚಾಗಿ ಆ ಸಮಯದಲ್ಲಿ ದೇಹದ ಮೇಲೆ ಬೀಳದಿರುವುದು. ಸೂರ್ಯನ ಕಿರಣ ಮಾತ್ರವಲ್ಲದೆ, ವಿಟಮಿನ್ ಡಿ ಇರುವ ಆಹಾರಗಳನ್ನು ತಿನ್ನುವ ಮೂಲಕ ವಿಟಮಿನ್ ಡಿ ಕೊರತೆಯನ್ನು ನೀಗಿಸಬಹುದು.
ಹೆಚ್ಚು ಆಯಾಸ :ಇದರ ಕೊರತೆಯಿಂದ ಆಗಾಗ ಆಯಾಸವಾದಂತೆ ಭಾಸವಾಗುತ್ತದೆ. ಹಲವು ಆರೋಗ್ಯ ಸಮಸ್ಯೆಗಳು ಶುರುವಾಗುತ್ತದೆ, ಶಕ್ತಿ ಕುಂಠಿತಗೊಳ್ಳುತ್ತದೆ. ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅಲ್ಲದೆ, ವಿಟಮಿನ್ ಡಿ ಕೊರತೆಯ ಉಂಟಾದರೆ, ತಲೆನೋವು, ನಿದ್ರೆಯ ಕೊರತೆ ಮತ್ತು ನಿರಂತರ ಮೂಳೆ ನೋವಿನಿಂದ ಹೆಚ್ಚು ಆಯಾಸ ಉಂಟಾಗುವುದು ಇವೆಲ್ಲಾ ಸಮಸ್ಯೆಗಳು ಕಾಡುತ್ತದೆ.
ಗಾಯ ಗುಣವಾಗುವಿಕೆ : ವಿಟಮಿನ್ ಡಿ ಕೊರತೆಯ ಲಕ್ಷಣಗಳಲ್ಲಿ ಇದೂ ಒಂದು. ಇದು ಗಾಯವನ್ನು ಗುಣಪಡಿಸುವ ದೇಹದ ಸಾಮರ್ಥ್ಯವನ್ನು ಹೆಚ್ಚು ಮಾಡುತ್ತದೆ. ಆದರೆ, ವಿಟಮಿನ್ ಡಿ ಕೊರತೆ ಇದ್ದರೆ ಗಾಯಗಳು ಬೇಗನೆ ಗುಣವಾಗೋದಿಲ್ಲ. ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ ಮೂಲಕ ದೇಹದಲ್ಲಿ ವಿಟಮಿನ್ ಡಿ ಕೊರತೆ ಉಂಟಾಗಿದೆ ಎಂಬುದು ತಿಳಿಯಬಹುದು. ಹಾಗಾಗಿ ಸ್ವಲ್ಪ ಬಿಡುವು ಮಾಡಿಕೊಂಡು ಬೆಳಗ್ಗಿನ ಸಮಯ ನಿಮ್ಮ ದೇಹವನ್ನು ಸೂರ್ಯನ ಎದುರು ಮೈ ಒಡ್ಡಿ. ಇದರಿಂದ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.