Citroen ec3 : ರೆಡಿಯಾಗಿದೆ 320 ಕಿ.ಮೀ. ಮೈಲೇಜ್‌ ನೀಡುವ ಸಿಟ್ರನ್‌ ಎಲೆಕ್ಟ್ರಿಕ್‌ ಕಾರು!

ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಜನಪ್ರಿಯ ಕಾರು ತಯಾರಕ ಕಂಪನಿಗಳು ಎಲೆಕ್ಟ್ರಿಕ್ ಕಾರು (Electric Car) ಗಳನ್ನು ಬಿಡುಗಡೆಗೊಳಿಸುತ್ತಿದೆ. ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಭರ್ಜರಿ ಬೇಡಿಕೆ ಇದ್ದು ಸಿಟ್ರನ್ ಕಂಪನಿಯು ಕೂಡಾ ಬಹುನೀರಿಕ್ಷಿತ ಇಸಿ3 ಎಲೆಕ್ಟ್ರಿಕ್ (Ec3 electric car) ಕಾರನ್ನು ಅನಾವರಣಗೊಳಿಸಿದೆ. ಹೌದು ಇದೀಗ ಹೊಸ ಇವಿ ಕಾರು ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ.

ಫ್ರೆಂಚ್ ಕಾರು ತಯಾರಕ ಕಂಪನಿಯಾದ ಸಿಟ್ರನ್ ತನ್ನ eC3 ಎಲೆಕ್ಟ್ರಿಕ್ ಕಾರನ್ನು ಇತ್ತೀಚೆಗೆ ಅನಾವರಣಗೊಳಿಸಿದೆ.
ಹೊಸ ಸಿಟ್ರನ್ eC3 ಎಲೆಕ್ಟ್ರಿಕ್ ಕಾರಿನ ಬಿಡುಗಡೆ( launch)ಮತ್ತು ವಿತರಣೆಯು ಮುಂದಿನ ತಿಂಗಳಿನಲ್ಲಿ ನಡೆಯಲಿದ್ದು ಈ ಕಾರು ಟಾಟಾ ಟಿಯಾಗೊ ಇವಿ ಕಾರಿಗೆ ಪೈಪೋಟಿ ನೀಡುತ್ತದೆ. ಸದ್ಯ ಭಾರತಕ್ಕೆ ಫ್ರೆಂಚ್ ಕಾರು ತಯಾರಕರಿಂದ ಮೊದಲ ಎಲೆಕ್ಟ್ರಿಕ್ ವಾಹನವಾಗಿದೆ. ಈ ಹೊಸ ಸಿಟ್ರನ್ eC3 ಎಲೆಕ್ಟ್ರಿಕ್ ಕಾರಿನ ಬೆಲೆಯು ಸೋರಿಕೆಯಾಗಿದೆ. ವರದಿಗಳ ಪ್ರಕಾರ ಎಕ್ಸ್ ಶೋ ರೂಂ ಪ್ರಕಾರ ರೂ. 11.50 ಲಕ್ಷವಾಗಿದೆ.

ಹೊಸ ಸಿಟ್ರನ್ eC3 ಎಲೆಕ್ಟ್ರಿಕ್ ಕಾರು ಲೈವ್ ಮತ್ತು ಫೀಲ್ ಎಂಬ ಎರಡೂ ರೂಪಾಂತರಗಳಲ್ಲಿ ಲಭ್ಯವಿದೆ. ಎರಡೂ ರೂಪಾಂತರಗಳು 29.2kWh ಬ್ಯಾಟರಿ ಪ್ಯಾಕ್‌ನೊಂದಿಗೆ ಪ್ಯಾಕ್ ಮಾಡಲಾಗುವುದು, ಇದು ಮುಂಭಾಗದ ಆಕ್ಸಲ್‌ನಲ್ಲಿ ಅಳವಡಿಸಲಾಗಿರುವ ಎಲೆಕ್ಟ್ರಿಕ್ ಮೋಟರ್‌ಗೆ ಪವರ್ ನೀಡುತ್ತದೆ. ಈ ಮೋಟಾರ್ 57 ಬಿಹೆಚ್‍ಪಿ ಪವರ್ ಮತ್ತು 143 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಲೆಕ್ಟ್ರಿಕ್ (Electric) ಹ್ಯಾಚ್‌ಬ್ಯಾಕ್ 6.8 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 60 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಈ ಎಲೆಕ್ಟ್ರಿಕ್ ಕಾರು 107 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಎರಡು ಡ್ರೈವಿಂಗ್ ಮೋಡ್‌ಗಳನ್ನು ಹೊಂದಿರುತ್ತದೆ. ಇದು ಇಕೋ ಮತ್ತು ಸ್ಟ್ಯಾಂಡರ್ಡ್ ಆಗಿದೆ. ಜೊತೆಗೆ ಪುನರುತ್ಪಾದಕ ಬ್ರೇಕಿಂಗ್ ಸಿಸ್ಟಮ್ ಅನ್ನು ಒಳಗೊಂಡಿದೆ. ಈ ಸಿಟ್ರನ್ eC3 ಎಲೆಕ್ಟ್ರಿಕ್ ಕಾರು ಸಿಂಗಲ್ ಚಾರ್ಜ್‌ನಲ್ಲಿ 320 ಕಿ.ಮೀ ರೇಂಜ್ ಅನ್ನು ನೀಡುತ್ತದೆ ಎಂಡು ಕಾರು ತಯಾರಕರು ತಿಳಿಸಿದ್ದಾರೆ.

ಈ ಸಿಟ್ರನ್ eC3 (Citroen ec3) ಎಲೆಕ್ಟ್ರಿಕ್ ಕಾರಿನಲ್ಲಿ ಎರಡು ಚಾರ್ಜಿಂಗ್ ಆಯ್ಕೆಗಳು ಲಭ್ಯವಾಗಲಿದೆ. ಇದು DC ಫಾಸ್ಟ್ ಚಾರ್ಜರ್ ಮತ್ತು 3.3kW ಆನ್‌ಬೋರ್ಡ್ AC ಚಾರ್ಜರ್ ಒಳಗೊಂಡಿದೆ. ಇದರಲ್ಲಿ ಮೊದಲಿನ ಬ್ಯಾಟರಿ ಪ್ಯಾಕ್ ಅನ್ನು 57 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದಷ್ಟು ಚಾರ್ಜ್ ಮಾಡಬಹುದು, ಎರಡನೆಯದು ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ ಮಾಡಲು10.5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಕಂಪನಿಯು ಬ್ಯಾಟರಿ ಪ್ಯಾಕ್‌ನಲ್ಲಿ 7 ವರ್ಷ/1,40,000ಕಿಮೀ ವಾರಂಟಿ, ಎಲೆಕ್ಟ್ರಿಕ್ ಮೋಟರ್‌ನಲ್ಲಿ 5 ವರ್ಷ/1,00,000 ವಾರಂಟಿ ಮತ್ತು ವಾಹನದ ಮೇಲೆ 3 ವರ್ಷ/1,25,000ಕಿಮೀ ವಾರಂಟಿಯನ್ನು ಒದಗಿಸುತ್ತಿದೆ.

ಸಿಟ್ರನ್ eC3 ವೈಶಿಷ್ಟ್ಯಗಳು :

• ಹೊಸ ಈ ಸಿಟ್ರನ್ eC3 ಎಲೆಕ್ಟ್ರಿಕ್ ಕಾರು ಟಾಪ್ ರೂಪಾಂತರವು 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ.
• ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಸಂಪರ್ಕವನ್ನು ಹೊಂದಿದೆ.
• ಎತ್ತರ ಹೊಂದಾಣಿಕೆ ಡ್ರೈವರ್ ಸೀಟ್, ನಾಲ್ಕು-ಸ್ಪೀಕರ್ ಆಡಿಯೊ ಸಿಸ್ಟಮ್, ಸಂಪರ್ಕಿತ ಕಾರ್ ಟೆಕ್, ಡ್ಯುಯಲ್ ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್) ಜೊತೆಗೆ ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಮತ್ತು ಇನ್ನೂ ಹಲವು ಫೀಚರ್ಸ್ ಗಳನ್ನು ಹೊಂದಿವೆ.
• ಈ ಕಾರಿಗಾಗಿ ಮೂರು ಹೊಸ ಡ್ಯುಯಲ್-ಟೋನ್ ಬಣ್ಣದ ಆಯ್ಕೆಗಳು ಪೋಲಾರ್ ವೈಟ್ ರೂಫ್ ಅನ್ನು ಹೊಂದಿವೆ.
• ಜೊತೆಗೆ ಕಾರಿನ ಬಾಡಿಯ ಬಹುತೇಕ ಭಾಗವು ಝೆಸ್ಟಿ ಆರೆಂಜ್, ಪ್ಲಾಟಿನಂ ಗ್ರೇ, ಸ್ಟೀಲ್ ಗ್ರೇ ಬಣ್ಣವನ್ನು ಒಳಗೊಂಡಿದೆ.
• ಇನ್ನು ಸದ್ಯ ಪೋಲಾರ್ ವೈಟ್ ಸರೌಂಡ್‌ಗಳು ಮತ್ತು ರೂಫ್ ಅನ್ನು ಸಾಮಾನ್ಯ C3ಯ ಕಸ್ಟಮ್ ಕಾರುಗಳ ಜೊತೆಗೆ ಹೊಸ ಎಲೆಕ್ಟ್ರಿಕ್ ಕಾರಿಗೂ 13 ಬಾಹ್ಯ ಬಣ್ಣ (exterior colour) ಸಂಯೋಜನೆಗಳು, 3 ಪ್ಯಾಕ್‌ಗಳು ಮತ್ತು 47 ಕಸ್ಟಮೈಸೇಶನ್‌ಗಳಲ್ಲಿ ನೀಡಲಾಗುತ್ತದೆ.
• ಪೋಲಾರ್ ವೈಟ್ ಬಣ್ಣವು ಡೋರ್ ಗಳನ್ನೂ ಸುತ್ತುವರೆದಿರುವುದನ್ನು ಕಾಣಬಹುದು. ಇದರಿಂದ ಇC3 ಎಲೆಕ್ಟ್ರಿಕ್ ಕಾರನ್ನು ಸುಲಭವಾಗಿ ಗುರುತಿಸಬಹುದು.

ಸದ್ಯ ಈ ಹೊಸ eC3 ಎಲೆಕ್ಟ್ರಿಕ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದು ಯಾವುದೇ ಅಧಿಕೃತ ಸಿಟ್ರನ್ ಡೀಲರ್‌ಶಿಪ್‌ನಲ್ಲಿ ಅಥವಾ ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಪ್ರಿ-ಬುಕ್ಕಿಂಗ್ ಮಾಡಬಹುದಾಗಿದೆ.

Leave A Reply

Your email address will not be published.