ಹೆಣ್ಣು ಮಕ್ಕಳಿಗೂ ಬದನೆಕಾಯಿಗೂ ಏನು ಸಂಬಂಧ ? ಪಾಸಿಟಿವ್ ಆಗಿ ಥಿಂಕ್ ಮಾಡಿ, ಈ ಪೋಸ್ಟ್ ಓದಿ ನೋಡಿ !

ಬದನೆಕಾಯಿ ಹೆಣ್ಣು ಮಕ್ಕಳಿಗೆ ಇಷ್ಟ. ಹೆಣ್ಣುಮಕ್ಕಳಿಗೆ ಮತ್ತು ಬದನೆಕಾಯಿಗೂ ಏನು ಸಂಬಂಧ ಎನ್ನುವ ಪ್ರಶ್ನೆ ಎತ್ತಿದ ಕೂಡಲೇ ಒಂದು ಸಣ್ಣ ನಗು ಮನದಲ್ಲಿ ಮೂಡಿದರೆ- ಯಸ್ ನಿಮ್ಮಲ್ಲಿ ಒಂದಿಷ್ಟು ಕ್ರೇಜಿ ಇಮ್ಯಾಜಿನೇಷನ್ ಇದೆ ಅಂತ ಖುಷಿಯಿಂದ ಡಿಕ್ಲೇರ್ ಮಾಡಿಬಿಡಬಹುದು. ಆಗ ಬದನೆಕಾಯಿಯ ಬಗೆಗಿನ ಯೋಚನೆ ಬದಿಗೆ ಸರಿದು ಗಮನ ಬೇರೆತ್ತಲೋ ಹೋದೀತು. ಅದಿರಲಿ, ಈಗ ನಾವು ನಿಜಕ್ಕೂ ಹೇಳ ಹೊರಟಿರುವುದು ಬದನೆಕಾಯಿ ಎಂಬ ತರಕಾರಿಯ ಕುರಿತೇ !

ಬದನೆ ಪೌಷ್ಟಿಕಾಂಶಗಳ ಗಣಿ. ಬದನೆಕಾಯಿಯ ಆರೋಗ್ಯದ ಲಾಭಕಾರಿ ಅಂಶಗಳನ್ನು ನೀವೊಮ್ಮೆ ಗಮನಿಸಿದರೆ ಮುಂದೆಂದೂ ” ಅದ್ರಲ್ಲೇನಿದೆ ಬದ್ನೇ ಕಾಯಿ ” ಎನ್ನುವ ಸಮಾಯ ಡೈಲಾಗ್ ಬಳಸೋದೇ ಇಲ್ಲ. ಆರೋಗ್ಯದ ದೃಷ್ಟಿಯಿಂದ ಹೆಣ್ಣುಮಕ್ಕಳಿಗಂತೂ ಬದನೆಕಾಯಿ ತುಂಬಾನೇ ಒಳ್ಳೆಯದು. ಬದನೆಕಾಯಿಯಲ್ಲಿ ಇರುವ ಉತ್ತಮ ಪೋಷಕಾಂಶಗಳು ಅತ್ಯಗತ್ಯವಾಗಿ ಹೆಣ್ಣುಮಕ್ಕಳಿಗೆ ಬೇಕಾಗಿರುವುದರಿಂದ, ಇದನ್ನು ಹೆಣ್ಣುಮಕ್ಕಳು ಇಷ್ಟಪಟ್ಟು ತಿನ್ನಬೇಕು. ಬದನೆ ಕಾಯಿಯಲ್ಲಿ ಹೇರಳ ಪ್ರಮಾಣದ ಕಬ್ಬಿಣದ ಅಂಶ ಇದೆ. ಇದು ದೇಹಕ್ಕೆ ಇಮ್ಯೂನಿಟಿಯನ್ನು ಕೊಡುತ್ತದೆ. ಅಲ್ಲದೆ ಹೃದಯದ ಆರೋಗ್ಯಕ್ಕೆ ಬದನೆ ಕಾಯಿ ತುಂಬಾ ಒಳ್ಳೆಯದು. ಬದನೇಕಾಯಿ ಕೆಟ್ಟ ಕೊಲೆಸ್ಟರೋಲ್ ಅನ್ನು ಬದಿಗಿರಿಸಿ, ಒಳ್ಳೆಯ ಕೊಲೆಸ್ಟರೋಲ್ ಅನ್ನು ಹೆಚ್ಚಿಸಬಲ್ಲುದು.

ಹಾರ್ಮೋನ್ ಇಂಬ್ಯಾಲೆನ್ಸ್ ಆಗಿ ಗರ್ಭ ಧರಿಸುವ ವಿಚಾರದಲ್ಲಿ ತೊಂದರೆ ಆಗುತ್ತಾ ಇದೆ ಅಂದರೆ ಕಡ್ಡಾಯವಾಗಿ ನೀವು ವಾರಕ್ಕೊಮ್ಮೆಯಾದರೂ ಬದನೆ ತಿನ್ನಬೇಕು.
ಪ್ರತಿ ತಿಂಗಳು ಕೂಡ ಹೆಣ್ಣು ಮಕ್ಕಳಿಗೆ ದೇಹದಲ್ಲಿ ಇರುವ ಕೆಟ್ಟ ರಕ್ತದ ಅಂಶ ಹೊರ ಹೋಗುತ್ತದೆ. ರಕ್ತ ಬಸಿದು ಹೋಗುವ ಕಾರಣ ಇದರಿಂದ ದೇಹಕ್ಕೆಸುಸ್ತು ಆಗುತ್ತದೆ. ಆಗಾಗ್ಗ ತಲೆ ಸುತ್ತು ಕೂಡಾ ಬರಬಹುದು. ಅಂತವರಿಗೆ ಇದು ರಕ್ತಹೀನತೆಯನ್ನು ಕಡಿಮೆ ಮಾಡಬಲ್ಲುದು. ಹಾಗಾಗಿ ಹೆಣ್ಣು ಮಕ್ಕಳು ಬದನೆಕಾಯಿಯನ್ನು ಸೇವಿಸುತ್ತಾ ಬಂದರೆ ಹೊಸ ರಕ್ತ ಕಣಗಳ ಉತ್ಪಾದನೆ ಹೆಚ್ಚಾಗುತ್ತದೆ. ಹೆಣ್ಣು ಮಕ್ಕಳ ತಿಂಗಳ ಹೊಟ್ಟೆ ನೋವು ಕೂಡಾ ಉಪಶಮನ ಮಾಡಬಲ್ಲ ಗುಣ ಬದನೆಕಾಯಿಯಲ್ಲಿದೆ.

ಎಗ್ ಪ್ಲಾಂಟ್ ಅಂತ ಕರೆಸಿಕೊಳ್ಳುವ ಈ ಹಣ್ಣು- ತರಕಾರಿ ಹಾರ್ಮೋನ್ ಅಸಮತೋಲನವನ್ನು ನಿಯಂತ್ರಿಸುವ ಗುಣವನ್ನು ಹೊಂದಿದೆ. ಪೌಷಿಕಾಂಶಗಳ ಆಗರವಾಗಿರುವ ಈ ಹಣ್ಣು, ವಿಟಮಿನ್ ಕೆ, ವಿಟಮಿನ್ ಇ ಜತೆಗೆ ಪೊಟ್ಯಾಸಿಯಂ ಮತ್ತು ಕ್ಯಾಲ್ಶಿಯಂ ನಿಂದ ಸಮೃದ್ಧ. ಮುಟ್ಟು ಅದ ಸಮಯದಲ್ಲಿ ಬದನೆಕಾಯಿ ಸೇವನೆ ಮಾಡಿದರೆ ನಿಶಕ್ತಿ ಕಡಿಮೆ ಆಗುತ್ತದೆ. ಎಲ್ಲ ರೀತಿಯ ಸೋಂಕುಗಳ ವಿರುದ್ಧ ಹೋರಾಡಲು ಬದ್ನೇ ಕಾಯಿ ಸಹಾಯ ಮಾಡುತ್ತದೆ. ಬದನೆಕಾಯಿ ಸೇವನೆಯಿಂದ ನಮ್ಮ ಬೇಡವಾದ ಬೊಜ್ಜು ಕರಗಿಸಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಕಣ್ಣೀರ ಆರೋಗ್ಯ ವರ್ಧಕ, ಮುಖದ ಸೌಂದರ್ಯ ಉತ್ತೇಜಕ, ಎಲುಬಿನ ಅರೋಗ್ಯವನ್ನು ಹೆಚ್ಚಿಸುವ ಮತ್ತು ದೇಹ ತೂಕವನ್ನು ಹತೋಟಿಯಲ್ಲಿಡುವ ಗುಣಗಳು ಬದನೆಕಾಯಿಯಲ್ಲಿದೆ. ಅಲ್ಲದೆ, ಕೂದಲಿನ ಅರೋಗ್ಯ ಹೆಚ್ಚಿಸುವ ಮತ್ತು ಡಿಪ್ರೆಶನ್ ಅನ್ನು ಬಾರದಂತೆ ತಡೆಯುವ ಔಷಧೀಯ ಗುಣಗಳು ಬದನೆಕಾಯಲ್ಲಿದೆ.

ಇದರಲ್ಲಿರುವ ಹಲವಾರು ಪೋಷಕಾಂಶಗಳ ಉಪಸ್ಥಿತಿಯು ನಿಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸಲು ಮತ್ತು ಆರೋಗ್ಯಕರ ಚಯಾಪಚಯವನ್ನು ಉತ್ತೇಜಿಸಲು ಸೂಕ್ತವಾದ ಆಹಾರವಾಗಿದೆ. ಅದೇನೇ ಇದ್ದರೂ, ಅನೇಕ ಜನರು ಬದನೆಗೆ ಅಲರ್ಜಿಯನ್ನು ಹೊಂದಿರುತ್ತಾರೆ ಮತ್ತು ಆದ್ದರಿಂದ ಇದು ಪ್ರಯೋಜನಕಾರಿಯಾಗಿದ್ದರೂ ಸಹ ಅವರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಅವರು ಬಿಳಿಬದನೆ ತಿನ್ನುವ ಮೊದಲು ಜಾಗ್ರತೆಯಾಗಿರಬೇಕು. ಬದನೆಯ ವಿವಿಧ ಪಾಕವಿಧಾನಗಳನ್ನು ಪ್ರಯತ್ನಿಸಬಹುದು ಮತ್ತು ಬದನೆಕಾಯಿಯ ಅಸಂಖ್ಯ ಆರೋಗ್ಯ ಪ್ರಯೋಜನಗಳನ್ನು ಆನಂದಿಸಬಹುದು.

Leave A Reply

Your email address will not be published.