Reliance Jio : ಕೊಡಗಿನ ತಲಕಾವೇರಿಗೆ ಎಂಟ್ರಿ ನೀಡಿದ ಜಿಯೋ ಟ್ರೂ 4ಜಿ ಡಿಜಿಟಲ್‌ ಲೈಫ್!

ಭಾರತದ ಟೆಲಿಕಾಂ ಕಂಪನಿಗಳಲ್ಲಿ ಅಗ್ರಸ್ಥಾನದಲ್ಲಿರುವ ರಿಲಯನ್ಸ್ ಜಿಯೋ (Reliance Jio) ಇದೀಗ ಕೊಡಗಿನ ತಲಕಾವೇರಿಗೆ ಕಾಲಿಟ್ಟಿದೆ. ಕೊಡಗಿನ ತಲಕಾವೇರಿಯಲ್ಲಿ ಇತ್ತೀಚೆಗೆ ಜಿಯೋ ಟ್ರೂ 4ಜಿ ಡಿಜಿಟಲ್ ಲೈಫ್ ಪರಿಚಯಿಸಿದೆ. ಇದರಿಂದ ಮಕ್ಕಳ ಶಿಕ್ಷಣ, ವಯಸ್ಕರ ವರ್ಕ್ ಫ್ರಮ್ ಹೋಮ್ ಗಳಿಗೆ ಅನುಕೂಲವಾಗಿದೆ.

ಕೊಡಗಿನ ಭಾಗಮಂಡಲದ ಬಳಿಯ ಬ್ರಹ್ಮಗಿರಿ ಬೆಟ್ಟಗಳಲ್ಲಿ ಈ ತಲಕಾವೇರಿ(Tala Kaveri) ಇದೆ. ಇಲ್ಲಿ ಟ್ರೂ 4G ಡಿಜಿಟಲ್ ಲೈಫ್ ಸಂಪರ್ಕ ಸೇವೆಗಳ ಕೊರತೆ ಇತ್ತು. ಇದರಿಂದ ಅಲ್ಲಿನ ಜನರಿಗೆ ಹೊರ ಜಗತ್ತಿನ ಜೊತೆಗೆ ಮೂಲಭೂತವಾದ ಸಂಪರ್ಕ ಕಡಿತವಾಗಿತ್ತು. ಇದೀಗ ಜಿಯೋ ಟ್ರೂ 4ಜಿ ಡಿಜಿಟಲ್ ಲೈಫ್ ಪರಿಚಯಿಸಿದ್ದು, ಇದರಿಂದ ಮಕ್ಕಳ ಶಿಕ್ಷಣ, ವಯಸ್ಕರ ವರ್ಕ್ ಫ್ರಮ್ ಹೋಮ್(work from home) ಗಳಿಗೆ ಅನುಕೂಲವಾಗಿದೆ. ಹಾಗೇ ಮನರಂಜನೆ ವೀಕ್ಷಣೆಯೂ ಲಭ್ಯವಾಗುತ್ತಿದೆ.

ಜಿಯೋದಿಂದ ಸೌರ ಶಕ್ತಿಯನ್ನು ಬಳಸಿಕೊಂಡು ಹಸಿರು ಟವರ್ ನೊಂದಿಗೆ ಈ ಟ್ರೂ 4ಜಿ ಲಭ್ಯವಾಗುತ್ತದೆ. ಸದ್ಯ ರಿಲಯನ್ಸ್ ಜಿಯೋ
ಗ್ರಾಹಕರಿಗೆ ಗುಡ್ ನ್ಯೂಸ್ ನೀಡುತ್ತಲೇ ಇರುತ್ತದೆ. ಹೊಸ ಹೊಸ ರೀಚಾರ್ಜ್ ಪ್ಲ್ಯಾನ್ ಮೂಲಕ ಜನರನ್ನು ಸೆಳೆಯುತ್ತಲೇ ಇವೆ. ಇತ್ತಿಚೆಗೆ ಜಿಯೋ 500 ರೂ. ಗಿಂತ ಕಡಿಮೆ ಬೆಲೆಯ ರೀಚಾರ್ಜ್ ಯೋಜನೆಗಳೊಂದಿಗೆ ಉಚಿತವಾಗಿ ನೆಟ್ಫ್ಲಿಕ್ಸ್ ಚಂದಾದಾರಿಕೆಯನ್ನು ನೀಡಿದ್ದು, ಇದನ್ನು ಜಿಯೋ ಪೋಸ್ಟ್ಪೇಯ್ಡ್ ಪ್ಲಸ್ನೊಂದಿಗೆ ಅಗ್ಗದ ಪ್ಯಾಕೇಜ್ ನ ಮೂಲಕ ನೀಡಿತ್ತು. ಸದ್ಯ ಜಿಯೋ ಡಿಜಿಟಲ್ ಇಂಡಿಯಾಗೆ ಅಗತ್ಯವಿರುವ ವೇಗವರ್ಧಕವಾಗಿದೆ.

ಜಿಯೋ ಗ್ರಾಹಕರಿಗೆ ಹಲವು ಸೇವೆಗಳನ್ನು ಒದಗಿಸಿದ್ದು, ರಾಜ್ಯಾದ್ಯಂತ ತಡೆರಹಿತ ಸಂಪರ್ಕ, ದೃಢ ಮತ್ತು ವ್ಯಾಪಕವಾದ 4ಜಿ ನೆಟ್‌ವರ್ಕ್ ಪ್ರಯೋಜನ ಒದಗಿಸಿದೆ. ಅಲ್ಲದೆ, ಕಡಿಮೆ ಬೆಲೆಯ ರೀಚಾರ್ಜ್ ಪ್ಲ್ಯಾನ್(recharge plan) , ಜಿಯೋ(jio) ಟಿವಿ, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್ ಸೌಲಭ್ಯವನ್ನು ಒದಗಿಸುತ್ತದೆ. ಸದ್ಯ ಕೊಡಗಿನ ತಲಕಾವೇರಿಯಲ್ಲಿ ಜಿಯೋ ಟ್ರೂ 4ಜಿ ಡಿಜಿಟಲ್ ಲೈಫ್ ಪರಿಚಯಿಸಿದ್ದು, ಪ್ರಯೋಜನಕಾರಿಯಾಗಿದೆ.

Leave A Reply

Your email address will not be published.