Fire-Boltt Quantum : ಸ್ಪೋರ್ಟ್ಸ್ ಪ್ರಿಯರಿಗಾಗಿ ಬಿಡುಗಡೆಗೊಂಡಿದೆ ಅಲ್ಟ್ರ ಸೂಪರ್‌ ವಾಚ್‌, ಇದರ ವೈಶಿಷ್ಟ್ಯ ಅನೇಕ!

ಟೆಕ್ನಾಲಜಿ ಮಾರುಕಟ್ಟೆಗಳಲ್ಲಿ ಇತ್ತೀಚೆಗೆ ಭಾರೀ ಮುಂಚೂಣಿಯಲ್ಲಿರುವ ಸಾಧನಗಳೆಂದರೆ ಅದು ಸ್ಮಾರ್ಟ್​​ವಾಚ್​ (Smartwatch) ಗಳು. ಅದೇ ರೀತಿ ಮಾರಕಟ್ಟೆಯಲ್ಲಿ ಈ ಸಾಧನಗಳಿಗೆ ಭಾರೀ ಬೇಡಿಕೆಯೂ ಇದೆ. ಇದನ್ನೆಲ್ಲಾ ಗಮನಿಸಿದ ಕೆಲವೊಂದು ಟೆಕ್​ ಕಂಪನಿಗಳು ಹೊಸ ವಿನ್ಯಾಸದೊಂದಿಗೆ ಸ್ಮಾರ್ಟ್​​ವಾಚ್​ಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ. ಇದೀಗ ಭಾರತದ ಜನಪ್ರಿಯ ಸ್ಮಾರ್ಟ್‌ವಾಚ್ ಬ್ರ್ಯಾಂಡ್‌ಗಳಲ್ಲಿ ಒಂದಾದ ಫೈರ್ ಬೋಲ್ಟ್ (Fire-Boltt) ವಿನೂತನ ಮಾದರಿಯ ಫೈರ್ ಬೋಲ್ಟ್ ಕ್ವಾಂಟಮ್ (Fire-Boltt Quantum) ಸ್ಮಾರ್ಟ್‌ವಾಚ್ ಅನ್ನು ಪರಿಚಯಿಸಿದೆ. ಇದು ನೀರು, ಧೂಳು ಹಾಗೂ ತುಕ್ಕು ನಿರೋಧ ಗುಣಲಕ್ಷಣಗಳನ್ನು ಹೊಂದಿರುವುದರ ಜೊತೆಗೆ ಬಹು-ಕ್ರೀಡಾ ವಿಧಾನಗಳೊಂದಿಗೆ ಬಂದಿರುವ ಈ ಹೊಸ ಸ್ಮಾರ್ಟ್‌ವಾಚ್ ಸ್ಪೋರ್ಟ್ಸ್ ಪ್ರಿಯರಿಗೆ ಅಚ್ಚು ಮೆಚ್ಚು ಆಗೋದ್ರಲ್ಲಿ ಸಂದೇಹವಿಲ್ಲ. ಹಾಗಾದರೆ, ಈ ಹೊಚ್ಚ ಹೊಸ ‘Fire-Boltt Quantum’ ಸ್ಮಾರ್ಟ್‌ವಾಚ್ ಹೇಗಿದೆ ಮತ್ತು ಲಭ್ಯತೆ ಕುರಿತಂತೆ ಹೆಚ್ಚು ಮಾಹಿತಿ ತಿಳಿಯೋಣ ಬನ್ನಿ.

ಈ ನೂತನ Fire-Boltt Quantum’ ಸ್ಮಾರ್ಟ್‌ವಾಚ್ 1.28 ಇಂಚಿನ HD ಡಿಸ್‌ಪ್ಲೇ ಯ, 240×240 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದ್ದು, ಪ್ರೀಮಿಯಂ ವಿನ್ಯಾಸದಲ್ಲಿ ಬಿಡುಗಡೆಯಾಗಿದೆ. ಇದರಲ್ಲಿ SpO2 ಮಾನಿಟರಿಂಗ್, ಡೈನಾಮಿಕ್ ಹಾರ್ಟ್‌ಬೀಟ್‌ ಟ್ರ್ಯಾಕಿಂಗ್, ಸ್ತ್ರೀ ಆರೋಗ್ಯ ಟ್ರ್ಯಾಕರ್ ಮತ್ತು ಸ್ಲೀಪಿಂಗ್ ಟ್ರ್ಯಾಕ್‌ ಅನ್ನು ಕೂಡ ಟ್ರ್ಯಾಕ್​ ಮಾಡುತ್ತದೆ. ಇನ್ನು ದೈಹಿಕ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು ಸ್ಪೋರ್ಟ್ಸ್‌ ಮೋಡ್‌ಗಳನ್ನು ಹೊಂದಿದ್ದು, 50 ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಬೆಂಬಲಿಸುತ್ತದೆ. ಈ ಸ್ಮಾರ್ಟ್‌ವಾಚ್ ಗೆಸ್ಚರ್ ಕಂಟ್ರೋಲ್ ಬೆಂಬಲವನ್ನು ಸಹ ಹೊಂದಿದ್ದು, ಇದರಿಂದ ಸ್ಮಾರ್ಟ್‌ವಾಚ್ ಬಳಕೆದಾರರು ತಮ್ಮ ಮಣಿಕಟ್ಟನ್ನು ಮೇಲಕ್ಕೆ ಎತ್ತಿದ ತಕ್ಷಣವೇ ಇದರ ಡಿಸ್‌ಪ್ಲೇ ಆನ್‌ ಆಗಲಿದೆ.

ಬ್ಲೂಟೂತ್‌ ಕಾಲಿಂಗ್ ಬೆಂಬಲಿಸುವ ಈ ಸ್ಮಾರ್ಟ್‌ಫೋಚ್ ಸ್ಕ್ರೀನ್ ಮೂಲಕ ಫೋನ್ ಕರೆಗಳನ್ನು ಮಾಡಲು, ಸ್ವೀಕರಿಸಲು, ಡಯಲ್ ಮಾಡಿದ ಸಂಖ್ಯೆಗಳನ್ನು ಪ್ರದರ್ಶಿಸುವುದು ಮಾತ್ರವಲ್ಲದೇ ಡಯಲ್ ಮಾಡಿದ ಸಂಖ್ಯೆಗಳನ್ನು ಸೇವ್ ಮಾಡುವ ಆಯ್ಕೆ ಹೊಂದಿದೆ. ಆಂಡ್ರಾಯ್ಡ್ 5.0 ಮತ್ತು ಐಒಎಸ್ 9.0 ಅಥವಾ ಅದಕ್ಕಿಂತ ಹೆಚ್ಚಿನ ಚಾಲನೆಯಲ್ಲಿರುವ ಸ್ಮಾರ್ಟ್‌ಫೋನ್‌ಗಳೊಂದಿಗೆ ಹೊಂದಿಕೊಳ್ಳುವ ಈ ಸ್ಮಾರ್ಟ್‌ವಾಚ್ ಬ್ಲೂಟೂತ್ ವಿ 5.1 ಬೆಂಬಲ ಪಡೆದಿದೆ. ಇದರೊಂದಿಗೆ ಪ್ರಮುಖ ಫೀಚರ್ಸ್‌ ಆದ ಗೂಗಲ್‌ ಅಸಿಸ್ಟೆಂಟ್‌ (google assistant) ಹಾಗೂ ಸಿರಿ (siri) ಗೆ ಸಹ ಸಪೋರ್ಟ್​ ಆಗುತ್ತದೆ.

ಇನ್ನು ಈ ಸ್ಮಾರ್ಟ್‌ವಾಚ್‌ನ ಸುರಕ್ಷತೆಗಾಗಿ, ನೀರು ಮತ್ತು ಧೂಳು ಹಾಗೂ ತುಕ್ಕು ನಿರೋಧ ಗುಣಲಕ್ಷಣಗಳನ್ನು ಹೊಂದಿರುವುದರಿಂದ, IP67 ರೇಟಿಂಗ್ ಅನ್ನು ಪಡೆದಿರುವುದು ಮತ್ತಷ್ಟು ವಿಶೇಷವಾಗಿದೆ. ಇನ್ನುಳಿದಂತೆ, ಮ್ಯೂಸಿಕ್‌ ಮತ್ತು ರಿಮೋಟ್ ಕ್ಯಾಮೆರಾ ಕಂಟ್ರೋಲ್‌, ಅಲಾರಾಂ, ಟೈಮರ್ ಮತ್ತು ಹವಾಮಾನ ಮುನ್ಸೂಚನೆ ಒದಗಿಸಲಿದೆ.

Fire-Boltt Quantum ಸ್ಮಾರ್ಟ್‌ವಾಚ್ 350mAh ಸಾಮರ್ಥ್ಯದ ಬ್ಯಾಟರಿ (Battery) ಬ್ಯಾಕ್‌ಅಪ್‌ ಹೊಂದಿದೆ. ಈ ಸ್ಮಾರ್ಟ್​ವಾಚ್​ ಅನ್ನು ಒಮ್ಮೆ ಫುಲ್​ ಚಾರ್ಜ್​ ಮಾಡಿದ್ರೆ 7 ದಿನಗಳವರೆಗೆ ನಿರಂತರವಾಗಿ ಬಳಕೆ ಮಾಡಬಹುದಾಗಿದೆ. ಹಾಗೂ ಬ್ಲೂಟೂತ್‌ ಕಾಲ್‌ ಆಕ್ಟಿವ್‌ ಮಾಡಿದ್ದರೆ ಎರಡು ದಿನಗಳ ಬ್ಯಾಕ್‌ಅಪ್‌ ಬ್ಯಾಟರಿ ಇದ್ದು, ಇದು ಎರಡು ಗಂಟೆಗಳ ಅವಧಿಯಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗಿಲಿದೆ.

Fire-Boltt Quantum ಸ್ಮಾರ್ಟ್‌ವಾಚ್ ಭಾರತದಲ್ಲಿ 2,999 ರೂಪಾಯಿಗಳಷ್ಟು ಬೆಲೆ ನಿಗದಿ ಮಾಡಲಾಗಿದೆ. ಬಿಡುಗಡೆಯಾಗಿರುವ ಹೊಸ Fire-Boltt Quantum’ ಸ್ಮಾರ್ಟ್‌ವಾಚ್ ಅನ್ನು ಖರೀದಿ ಮಾಡುವ ಪ್ಲ್ಯಾನ್​ನಲ್ಲಿದವರು ಅಧಿಕೃತ ಫೈರ್-ಬೋಲ್ಟ್ ಹಾಗೂ ಅಮೆಜಾನ್‌ (Amazon) ವೆಬ್ಸೈಟ್ ಮೂಲಕ ಖರೀದಿ ಮಾಡಬಹುದಾಗಿದೆ. ಇನ್ನು ಈ ಸ್ಮಾರ್ಟ್​​ವಾಚ್​ ಕಪ್ಪು, ಹಸಿರು, ನೀಲಿ ಹಾಗೂ ಕಪ್ಪು ಮತ್ತು ಕೆಂಪು ಬಣ್ಣದ ನಾಲ್ಕು ಆಯ್ಕೆಗಳಲ್ಲಿ ಖರೀದಿ ಮಾಡುವ ಅವಕಾಶವಿದೆ.

Leave A Reply

Your email address will not be published.