Government Scheme : ಸುಕನ್ಯಾ ಸಮೃದ್ಧಿ ಯೋಜನೆ ಕುರಿತು ಮೋದಿ ನೀಡಿದ್ರು ಬಿಗ್ ಅಪ್ಡೇಟ್!
ಕೇಂದ್ರ ಸರ್ಕಾರದ ಹಲವು ಯೋಜನೆಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯು ಒಂದಾಗಿದೆ. ಇದು ಹೆಣ್ಣುಮಕ್ಕಳಿಗಾಗಿ ಜಾರಿಗೆ ತಂದ ಯೋಜನೆಯಾಗಿದ್ದು, ಹೆಣ್ಣು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಈ ಯೋಜನೆಯನ್ನು ನಡೆಸಲಾಗುತ್ತಿದೆ. ಇದೀಗ ಸುಕನ್ಯಾ ಸಮೃದ್ಧಿ ಯೋಜನೆ ಕುರಿತು ನರೇಂದ್ರ ಮೋದಿ ಬಿಗ್ ಅಪ್ಡೇಟ್ ನೀಡಿದ್ದಾರೆ.
ಸುಕನ್ಯಾ ಸಮೃದ್ಧಿ ಯೋಜನೆಯು ಹೆಣ್ಣು ಮಗುವಿನ ಅನುಕೂಲಕ್ಕಾಗಿ ಸರ್ಕಾರದ ಬೆಂಬಲಿತ ಸಣ್ಣ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯು ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯ ಒಂದು ಭಾಗವಾಗಿದೆ.
ಸುಕನ್ಯಾ ಸಮೃದ್ಧಿ ಖಾತೆಯ ಅವಧಿಯು 21 ವರ್ಷಗಳು ಆಗಿದ್ದು, ಸರ್ಕಾರವು ಈ ಯೋಜನೆಯ ಅಡಿಯಲ್ಲಿ ಬಡ್ಡಿದರಗಳನ್ನು ತ್ರೈಮಾಸಿಕ ಆಧಾರದ ಮೇಲೆ ಘೋಷಿಸುತ್ತದೆ. ಹಾಗೇ 2022-23 ಹಣಕಾಸು ವರ್ಷದ Q4 ಬಡ್ಡಿದರಗಳನ್ನು ವಾರ್ಷಿಕ 7.6% ಕ್ಕೆ ನಿಗದಿಪಡಿಸಲಾಗಿದೆ.
ಸುಕನ್ಯಾ ಸಮೃದ್ಧಿ ಯೋಜನಾ ಖಾತೆಯನ್ನು ತೆರೆಯಲು ಇರಬೇಕಾದ ಅರ್ಹತೆಗಳು ?
• ಹೆಣ್ಣು ಮಗುವಿನ ಪೋಷಕರು ಮಾತ್ರ ಈ ಖಾತೆಯನ್ನು ತೆರೆಯಬಹುದಾಗಿದೆ.
• ಹೆಣ್ಣು ಮಗುವಿಗೆ ವಯಸ್ಸು 10 ವರ್ಷಕ್ಕಿಂತ ಕಡಿಮೆ ಇರಬೇಕು.
• ಆಕೆಯ ಹೆಸರಿನಲ್ಲಿ ಒಂದು ಖಾತೆಯನ್ನು ಮಾತ್ರ ತೆರೆಯಬಹುದಾಗಿದೆ.
• ಅಲ್ಲದೆ, ಒಂದು ಕುಟುಂಬದಲ್ಲಿ ಎರಡು ಸುಕನ್ಯಾ ಸಮೃದ್ಧಿ ಯೋಜನಾ ಖಾತೆಗಳನ್ನು ಮಾತ್ರ ತೆರೆಯಬಹುದು.
• ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ಬಹು ಖಾತೆಗಳನ್ನು ತೆರೆಯಲು ಅನುಮತಿ ಇರಲಿದೆ.