Instagram-Facebook : ಇನ್ಸ್ಟಾಗ್ರಾಮ್, ಫೇಸ್​​ಬುಕ್​​ಗಳ ಆನ್‌ಲೈನ್‌ ಮೋಸದಿಂದ ಬಚಾವಾಗಿ!

Share the Article

ಇತ್ತೀಚೆಗೆ ಮೋಸಮಾಡುವವರ ಸಂಖ್ಯೆ ಹೆಚ್ಚಾಗಿದೆ. ಕಳೆದ ಬಾರಿ ಯುವಕನೊಬ್ಬ ಐಫೋನ್ 14 ಆರ್ಡರ್ ಮಾಡಿ, ಆತನಿಗೆ ಸಿಕ್ಕಿದ್ದು, ನಕಲಿ ಐಫೋನ್. ಹೀಗೇ ವಂಚಕರು ವಂಚನೆ ಮಾಡಲು ಕಾದು ಕುಳಿತಿರುತ್ತಾರೆ. ಇನ್ನು ಫೇಸ್​​ ಬುಕ್​ ಮತ್ತು ಇನ್ಸ್ಟಾಗ್ರಾಮ್​​ಗಳಲ್ಲಿ ಆಫರ್​​ ಮೇಲೆ ಬಟ್ಟೆಗಳನ್ನು ಆರ್ಡರ್​​ ಮಾಡಿ, ಜೊತೆಗೆ ಪೇಮೆಂಟ್​​ ಕೂಡ ಮಾಡಿ ಮೋಸಹೋದ ಘಟನೆಗಳು ಸಾಕಷ್ಟಿವೆ. ಇಂತಹ ಮೋಸದ ಬಲೆಗೆ ನೀವು ಬೀಳಬಾರದು ಅಂದ್ರೆ ಈ ರೀತಿ ಮಾಡಿ. ಹೇಗೆ? ಇಲ್ಲಿದೆ ನೋಡಿ ಸಲಹೆಗಳು.

ಇನ್ಸ್ಟಾಗ್ರಾಮ್​​ನಿಂದ ವಸ್ತುಗಳನ್ನು ಖರೀದಿಸುವ ಮುನ್ನ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು :

ನೀವು ಇನ್ಸ್ಟಾಗ್ರಾಮ್​​ನಿಂದ ವಸ್ತುಗಳನ್ನು ಖರೀದಿಸುವ ಮುನ್ನ ಆ ಪೇಜ್​​ನಲ್ಲಿ ಅಧಿಕೃತವಾಗಿ ಅಪ್ಲೀಕೇಶನ್​​ ಇದೆಯಾ ಎಂದು ಪರಿಶೀಲಿಸಿ. ಕೇವಲ ಲಿಂಕ್​​ ಬಳಸಿ ಆರ್ಡರ್​​ ಮಾಡಬೇಡಿ. ಲಿಂಕ್ ಬಳಸಿ ಆರ್ಡರ್ ಮಾಡುವುದರಿಂದ ನಿಮಗೆ ಯಾವುದೇಮಾಹಿತಿ ಲಭ್ಯವಾಗುವುದಿಲ್ಲ. ಸಂಪರ್ಕಿಸಲು ನಂಬರ್​​ಗಳೂ ಸಿಗುವುದಿಲ್ಲ. ಇದರಿಂದಾಗಿ ನೀವು ಮೋಸ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಸುಲಭವಾಗಿ ನಿಮಗೆ ಮೋಸಮಾಡಿ ಹಣ ಗಳಿಸುತ್ತಾರೆ.

ಕಡಿಮೆ ಬೆಲೆಗೆ ಬಟ್ಟೆಗಳು, ವಸ್ತುಗಳು ಸಿಗುತ್ತವೆ ಎಂದು ಬೇಗನೆ ಬುಕ್ ಮಾಡಿ, ಮೋಸ ಹೋಗಬೇಡಿ. ಅಗ್ಗಬೆಲೆಗೆ ಆಕರ್ಷಕವಾದ ಬಟ್ಟೆಗಳು ಸಿಗುತ್ತವೆ ಎಂದಾದರೆ ಮೊದಲು ಅದರಲ್ಲಿನ ಕಾಮೆಂಟ್​​ಗಳನ್ನು ಓದಿರಿ. ಸಾಮಾನ್ಯವಾಗಿ ನಕಲಿ ಖಾತೆಗಳನ್ನು ಹೊಂದಿರುವ ಜನರು ಕಾಮೆಂಟ್‌ಗಳಿಗೆ, ಉತ್ಪನ್ನದ ಬಗ್ಗೆ ವಿವರಗಳನ್ನು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ. ಅಲ್ಲದೆ, ಖಾತೆ ನಕಲಿ ಎಂದು ತಿಳಿದಿರುವವರು ಕಾಮೆಂಟ್ ಮಾಡಿರುತ್ತಾರೆ. ನೀವೂ ಕಾಮೆಂಟ್ ಓದಿದರೆ ಸತ್ಯಾಂಶ ತಿಳಿಯುತ್ತದೆ.

ವಸ್ತುಗಳನ್ನು ಬುಕ್ ಮಾಡುವಾಗ ಕ್ಯಾಶ್​​ ಆನ್​​ ಡೆಲಿವರಿ ಆಯ್ಕೆ ಮಾಡಿ. ನಕಲಿ ಖಾತೆಗಳಾಗಿದ್ದರೆ ಕ್ಯಾಶ್​​ ಆನ್​​ ಡೆಲಿವರಿ ಆಯ್ಕೆಗಳಿರುವುದಿಲ್ಲ. ಅಲ್ಲದೆ, ಕ್ಯಾಶ್​​ ಆನ್​​ ಡೆಲಿವರಿ ಆಯ್ಕೆ ಮಾಡಿದರೆ ವಸ್ತುಗಳು ನಿಮಗೆ ತಲುಪದಿದ್ದರೂ, ನೀವು ಮೋಸ ಹೋಗುವುದಿಲ್ಲ. ಈ ರೀತಿ ಮುಂಜಾಗ್ರತೆ ವಹಿಸಿದರೆ ಮೋಸ ಹೋಗುವುದರಿಂದ ತಪ್ಪಿಸಿಕೊಳ್ಳಬಹುದು.

ಸೋಷಿಯಲ್ ಮೀಡಿಯಾದಿಂದ ವಸ್ತುಗಳನ್ನು ಖರೀದಿಸುವ ಮುನ್ನ ಮಾರಾಟಗಾರರ ಆಸಕ್ತಿಯನ್ನು ಪರಿಶೀಲಿಸಿ. ನಿಜವಾದ ಮಾರಾಟಗಾರನು ಉತ್ಪನ್ನದ ಬಗೆಗಿನ ಎಲ್ಲಾ ಅಗತ್ಯ ಮಾಹಿತಿ ನೀಡಿರುತ್ತಾನೆ. ಆದರೆ ನಕಲಿ ಖಾತೆದಾರರು ನಿಮ್ಮ ಇನ್‌ಬಾಕ್ಸ್‌ಗೆ ಸ್ಪ್ಯಾಮ್ ಮಾಡಬಹುದು. ವಸ್ತು, ಬಟ್ಟೆಗಳನ್ನು ಖರೀದಿಸಿ ಎಂದು ಹೆಚ್ಚು ಬಾರಿ ಹೇಳಬಹುದು. ಇವುಗಳು ನಕಲಿ ಖಾತೆಗಳಾಗಿರುತ್ತವೆ. ಇವನ್ನೆಲ್ಲಾ ಸರಿಯಾಗಿ ಪರೀಕ್ಷಿಸುವುದು ಉತ್ತಮ.

ಇನ್ಸ್ಟಾಗ್ರಾಮ್​​ನಲ್ಲಿ ಮನೆಯಿಂದಲೇ ಸಣ್ಣ ಮಟ್ಟದಲ್ಲಿ ವ್ಯಾಪಾರ ಪ್ರಾರಂಭಿಸಿದವರಿದ್ದರೆ, ಅವರಿಂದ ಖರೀದಿಸಿ. ಇದು ಉತ್ತಮ, ಹಾಗೇ ಇಲ್ಲಿ ನಿಮಗೆ ಉತ್ತಮ ಗುಣಮಟ್ಟದ ಬಟ್ಟೆಗಳು ಸಿಗುತ್ತವೆ. ಮೋಸದ ಸಾಧ್ಯತೆಯೂ ಕಡಿಮೆ. ಇಲ್ಲಿ ಅವರ ಪೂರ್ಣ ವಿಳಾಸ, ಹಾಗೂ ಸಂಪರ್ಕ ಸಂಖ್ಯೆಯನ್ನು ಹಾಕಿರುತ್ತಾರೆ. ಜೊತೆಗೆ ಕ್ಯಾಶ್​ ಆನ್​​ ಡೆಲಿವರಿ ಆಯ್ಕೆಗಳೂ ಕೂಡ ಇರುತ್ತದೆ. ಹಾಗಾಗಿ ಮೋಸ ಹೋಗುವ ಸಾಧ್ಯತೆ ಇರುವುದಿಲ್ಲ. ಇವೆಲ್ಲಾ ಅಂಶಗಳನ್ನು ಇನ್ಸ್ಟಾಗ್ರಾಮ್ ನಿಂದ ಬಟ್ಟೆ, ವಸ್ತುಗಳನ್ನು ಖರೀದಿಸುವಾಗ ನೆನಪಿಟ್ಟುಕೊಳ್ಳಿ.

Leave A Reply