ದೇಶಿಯ ಮಾರುಕಟ್ಟೆಯಲ್ಲಿ ತನ್ನ ಹವಾ ಎಬ್ಬಿಸಲು ಬಂದೇ ಬಿಡ್ತು ನೋಡಿ ಓಲಾS1!!!

ಇಂದಿನ ಕಾಲದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಕೂಡ ವಾಹನಗಳು ಇರೋದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹೆಚ್ಚಳ ಕಂಡುಬರುತ್ತಿರುವ ಹಿನ್ನೆಲೆ ಹೆಚ್ಚಿನವರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಈ ನಡುವೆ ಸ್ಕೂಟರ್ ಗಳಿಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚುತ್ತಿದ್ದು, ಓಲಾ ಕಂಪನಿಗಳು ಕೈಗೆ ಎಟಕುವ ದರದಲ್ಲಿ ಸ್ಕೂಟರ್ ಗಳನ್ನು ಮಾರಾಟ ಮಾಡುತ್ತಿದ್ದು, ಹೀಗಾಗಿ ಹೆಚ್ಚಿನ ಗ್ರಾಹಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಓಲಾ ಕಳೆದ ಕೆಲವು ದಿನಗಳ ಹಿಂದೆ, ಎಸ್S1 ಏರ್ ಹಾಗೂ ಎಸ್S1 ಸ್ಕೂಟರ್‌ಗಳ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದ್ದು ಅದರ ವಿಶೇಷತೆ ಬಗ್ಗೆ ಮಾಹಿತಿ ಇಲ್ಲಿದೆ.

ಓಲಾ ಎಸ್S1 ಏರ್ ಸ್ಕೂಟರ್‌ ವೈಶಿಷ್ಟ್ಯದ ಬಗ್ಗೆ ಗಮನ ಹರಿಸಿದರೆ, ಇದು ಸ್ಮಾರ್ಟ್‌ಫೋನ್ ಕನೆಕ್ಟ್ದ್ 7-ಇಂಚಿನ TFT ಸ್ಕ್ರೀನ್, ಜಿಪಿಎಸ್, ಮ್ಯೂಸಿಕ್ ಪ್ಲೇಬ್ಯಾಕ್, ಸೈಡ್ ಸ್ಟ್ಯಾಂಡ್ ಅಲರ್ಟ್‌, ರಿಮೋಟ್ ಬೂಟ್ ಲಾಕ್/ ಅನ್‌ಲಾಕ್ ನಂತಹ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಓಲಾದ ಎಂಟ್ರಿ ಲೆವೆಲ್ ಎಸ್S1 ಏರ್ ಸ್ಕೂಟರ್‌ ಅಗ್ಗದ ಬೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಇದು 2 kWh, 3 kWh ಹಾಗೂ 4 kWh ಬ್ಯಾಟರಿ ಪ್ಯಾಕ್ ಒಳಗೊಂಡಿದ್ದು ಕ್ರಮವಾಗಿ 85 ಕಿ.ಮೀ, 125 ಕಿ.ಮೀ ಹಾಗೂ 165 ಕಿ.ಮೀ ರೇಂಜ್ ನೀಡಲಿದ್ದು, ಓಲಾ ಎಸ್S1 ಏರ್ ಸ್ಕೂಟರ್‌ನ 4 kWh ಬ್ಯಾಟರಿ ಪ್ಯಾಕ್ ಪಡೆದಿರುವ ಸ್ಕೂಟರ್ ಗರಿಷ್ಠ 85 kmph ಟಾಪ್ ಸ್ವೀಡ್ ಒಳಗೊಂಡಿದೆ.

ಬಹುನೀರಿಕ್ಷಿತ ಓಲಾ ಎಸ್S1 ಕೂಡ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದೆ. 2 kWh ಬ್ಯಾಟರಿ ಪ್ಯಾಕ್, ಹಾಗೂ 3 kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಇದು 8.5 kW ಎಲೆಕ್ಟ್ರಿಕ್ ಮೋಟಾರ್ ನಿಂದ ಚಾಲಿತವಾಗಲಿದೆ. ಚಿಕ್ಕ ಬ್ಯಾಟರಿ ಪ್ಯಾಕ್, 91 km ರೇಂಜ್ ನೀಡಲಿದ್ದು ಅದೇ ರೀತಿ, ದೊಡ್ಡದಾದ ಬ್ಯಾಟರಿ ಪ್ಯಾಕ್ ಹೊಂದಿರುವ ಸ್ಕೂಟರ್ 141 km ರೇಂಜ್ ನೀಡುವ ಸಾಮರ್ಥ್ಯ ಹೊಂದಿದೆ.  ಆಸಕ್ತ ಗ್ರಾಹಕರು, ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡುವ ಮೂಲಕ ರೂ.999 ಪಾವತಿಸಿ, ಬುಕಿಂಗ್ ಮಾ ಈ ಸ್ಕೂಟರ್ ವಿತರಣೆಗಳು ಮಾರ್ಚ್ ತಿಂಗಳಿಂದ ಪ್ರಾರಂಭವಾಗಲಿದ್ದು, ಟೆಸ್ಟ್ ಡ್ರೈವ್ ಹಾಗೂ ವಿತರಣೆಗಳು ಜುಲೈ ನಿಂದ ಶುರುವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

kWh ಬ್ಯಾಟರಿ ಪ್ಯಾಕ್ ಹೊಂದಿರುವ ಸ್ಕೂಟರ್ 99 ಕೆಜಿ ತೂಕ ಹೊಂದಿದ್ದು, 3 kWh ಬ್ಯಾಟರಿ ಪ್ಯಾಕ್ ಇರುವ ಸ್ಕೂಟರ್ 103 ಕೆಜಿ ತೂಕವಿದೆ. ಅದೇ ರೀತಿ,  4 kWh ಬ್ಯಾಟರಿ ಪ್ಯಾಕ್ ಪಡೆದಿರುವ ಓಲಾ ಎಸ್S1 ಏರ್ ಸ್ಕೂಟರ್‌ 107 ಕೆಜಿ ತೂಕವಿದೆ. ಈ ಸ್ಕೂಟರ್ ರೂಪಾಂತರಗಳಿಗೆ ಅನುಗುಣವಾಗಿ ಬೇರೆ-ಬೇರೆ ಬೆಲೆಯನ್ನು ಒಳಗೊಂಡಿದ್ದು, ಕ್ರಮವಾಗಿ ರೂ.84,999, ರೂ.99,999 ಮತ್ತು ರೂ.1,09,999 ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿವೆ.

ಓಲಾದ ಎಂಟ್ರಿ ಲೆವೆಲ್ ಸ್ಕೂಟರ್ ಎಸ್1 ಏರ್, ಬೇರೆ ಕಂಪನಿ ಸ್ಕೂಟರ್ ಗಳಿಗಿಂತ ಅತ್ಯಂತ ಕಡಿಮೆ ಬೆಲೆಗೆ ಖರೀದಿಗೆ ಲಭ್ಯವಿದ್ದು,  ಇದು ಭಾರತದಲ್ಲಿ ಹೊಸ ಗ್ರಾಹಕರನ್ನು ಆಕರ್ಷಿಸುವ ಸಾಧ್ಯತೆ ದಟ್ಟವಾಗಿದೆ. ಇದರ ಜೊತೆಗೆ ಓಲಾದ ಮೂರು ಸ್ಕೂಟರ್ ಗಳು, ಎಥರ್ 450, ಟಿವಿಎಸ್ ಐಕ್ಯೂಬ್ ಹಾಗೂ ವಿದಾ V1 ಸ್ಕೂಟರ್ ಗಳಿಗೆ  ಸ್ಪರ್ಧೆ ನೀಡಲಿದೆ ಎನ್ನಲಾಗುತ್ತಿದೆ.

ದೇಶದ ಮಾರುಕಟ್ಟೆಯಲ್ಲಿರುವ ಓಲಾದ ಟಾಪ್ ಎಂಡ್ ಮಾದರಿಯಾಗಿರುವ ಎಸ್1 ಪ್ರೊ, ರೂ.1,29,999 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ಇದು 4 kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 181 km ರೇಂಜ್ ನೀಡಲಿದೆ. ಎಸ್1 ಪ್ರೊ ನಲ್ಲಿರುವ 8.5 kW ಎಲೆಕ್ಟ್ರಿಕ್ ಮೋಟಾರ್ 16 kmph ಟಾಪ್ ಸ್ವೀಡ್ ಹೊಂದಿದ್ದು,ಏಕೋ, ನಾರ್ಮಲ್ ಹಾಗೂ ಸ್ಪೋರ್ಟ್ಸ್  ಮೂರು ರೈಡಿಂಗ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಓಲಾ ಎಸ್1 ಟಾಪ್ ಸ್ವೀಡ್ , ಇದರ 2 kWh ಬ್ಯಾಟರಿ ಪ್ಯಾಕ್ ಹೊಂದಿರುವ ಸ್ಕೂಟರ್ 90 kmph ಹಾಗೂ 3 kWh ಬ್ಯಾಟರಿ ಪ್ಯಾಕ್ ಪಡೆದಿರುವ ಸ್ಕೂಟರ್ 95 kmph ಟಾಪ್ ಸ್ವೀಡ್ ಹೊಂದಿದೆ. ಅಗ್ಗದ ಬೆಲೆಯಲ್ಲಿ ಸ್ಕೂಟರ್ ಲಭ್ಯವಾಗಲಿದ್ದು, ಬ್ಯಾಟರಿ ಪ್ಯಾಕ್ ಅನುಗುಣವಾಗಿ ರೂ.99,999 ಹಾಗೂ ರೂ.1,09,999 (ಎರಡು ಬೆಲೆಗಳು ಎಕ್ಸ್ ಶೋರೂಂ ಆಧರಿಸಿವೆ) ದರದಲ್ಲಿ ಖರೀದಿಗೆ ಲಭ್ಯವಿದೆ.

Leave A Reply

Your email address will not be published.