ಈ ತಿಂಗಳು ಮತ್ತೆ ಆಫ್ರಿಕಾದಿಂದ ಭಾರತಕ್ಕೆ ಬರಲಿವೆ 13 ಚೀತಾ! ಪ್ರತಿವರ್ಷವೂ ಒಂದೊಂದು ಡಜನ್ ಚೀತಾ ಕಳಿಸುವುದಾಗಿ ಉಭಯ ರಾಷ್ಟ್ರಗಳು ಒಪ್ಪಂದ!

ಕಳೆದ ವರ್ಷದ ಸೆ.17ರಂದು ಪ್ರಧಾನಿ ಮೋದಿಯವರ ಹುಟ್ಟುಹಬ್ಬದಂದು ನಮೀಬಿಯಾದಿಂದ ಭಾರತಕ್ಕೆ ಕರೆತಂದ 8 ಚೀತಾಗಳು ಭಾರತದ ವಾತಾವರಣಕ್ಕೆ ಹೊಂದಿಕೊಂಡ ಬೆನ್ನಲ್ಲೇ ಹಾಗೂ ಚೀತಾ ಸ್ಥಳಾಂತರ ಯೋಜನೆಯ ಭಾಗವಾಗಿ 2ನೇ ಹಂತದ ಚೀತಾಗಳು ಭಾರತಕ್ಕೆ ಬರಲು ಸಜ್ಜಾಗಿವೆ. ಫೆ.18ರಂದು 12 ಚೀತಾಗಳು ಆಫ್ರಿಕಾದಿಂದ ಭಾರತಕ್ಕೆ ಬರಲಿವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಹೌದು, ಫೆಬ್ರವರಿ ತಿಂಗಳ ವೇಳೆಗೆ ಭಾರತವು 12 ಚೀತಾಗಳನ್ನು ಪಡೆಯಲು ನಿರ್ಧರಿಸುವ ತಿಳುವಳಿಕೆ ಒಪ್ಪಂದ(MoU)ಕ್ಕೆ ಉಭಯ ದೇಶಗಳು ಸಹಿ ಹಾಕಿವೆ.
ತಿಳುವಳಿಕೆ ಒಪ್ಪಂದದ ಪ್ರಕಾರ, ಮೊದಲ ಹಂತದಲ್ಲಿ ಒಂದು ಡಜನ್ ಚೀತಾಗಳನ್ನು 2023ರ ಫೆಬ್ರವರಿ ತಿಂಗಳಲ್ಲಿ ದಕ್ಷಿಣ ಆಫ್ರಿಕಾದಿಂದ ತರಿಸಲಾಗುತ್ತದೆ. ಕಳೆದ ವರ್ಷದ ಸೆಪ್ಟೆಂಬರ್‌ ತಿಂಗಳಲ್ಲಿ ನಮೀಬಿಯಾದಿಂದ ಮಧ್ಯ ಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾದ ಎಂಟು ಚೀತಾಗಳೊಂದಿಗೆ ಈ ಹನ್ನೆರಡು ಚೀತಾಗಳು ಸೇರಿಕೊಳ್ಳುತ್ತವೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರು, ಈ ಒಪ್ಪಂದವನ್ನು ‘ಪ್ರಾಜೆಕ್ಟ್‌ ಚೀತಾ ಯೋಜನೆಯನ್ನು ಉತ್ತೇಜಿಸುವ ಬೆಳವಣಿಗೆ’ ಎಂದು ಬಣ್ಣಿಸಿದ್ದಾರೆ. ‘ಪ್ರಕೃತಿ ಪ್ರಿಯರಿಗೆ ಇದು ಹೆಮ್ಮೆಯ ವಿಷಯ. ದೂರಗಾಮಿ ಸಂರಕ್ಷಣಾ ಪರಿಣಾಮಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಚೀತಾಗಳ ಸಂಖ್ಯೆಯನ್ನು ಮರುಸ್ಥಾಪಿಸುವುದು ಪ್ರಮುಖ ಆದ್ಯತೆಯಾಗಿದೆ’ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಮತ್ತೊಂದೆಡೆ ಇದೇ ವಿಚಾರವಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ದಕ್ಷಿಣ ಆಫ್ರಿಕಾದ ಅರಣ್ಯ, ಮೀನುಗಾರಿಕೆ ಮತ್ತು ಪರಿಸರ ಸಚಿವಾಲಯದ ಮಾಧ್ಯಮ ಉಸ್ತುವಾರಿ ಅಲ್ಬಿ ಮೋಡಿಸ್ ಅವರು, ‘ಅತಿಯಾದ ಬೇಟೆ ಮತ್ತು ಆವಾಸಸ್ಥಾನದ ಅವನತಿಯಿಂದಾಗಿ ಈ ಸಾಂಪ್ರದಾಯಿಕ ಪ್ರಭೇದವು ದೇಶದಲ್ಲಿ ಅಳಿವಿನ ಅಂಚಿನಲ್ಲಿದೆ. ಹೀಗಾಗಿ ಚೀತಾಗಳನ್ನು ದೇಶದಲ್ಲಿ ಮರುಪರಿಚಯಿಸಲು ಇದೊಂದು ಉಪಕ್ರಮವಾಗಿದೆ. ಇದಕ್ಕೆ ಅನುಗುಣವಾಗಿ ಭಾರತ ಸರ್ಕಾರದಿಂದ ಸ್ವೀಕರಿಸಿದ ಮನವಿಯನ್ನು ಅನುಸರಿಸಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.

ಅಲ್ಲದೆ ಭಾರತ ಸರ್ಕಾರವೂ ಈ ಕುರಿತು ಮಾತನಾಡಿ ಚಿರತೆಯ ಸಂಖ್ಯೆಯನ್ನು ಮರುಸ್ಥಾಪಿಸುವುದು ಭಾರತದ ಪ್ರಮುಖ ಆದ್ಯತೆಯಾಗಿದೆ. ಉಳಿದಂತೆ ಇದು ಕೆಲ ದೂರಗಾಮಿ ಸಂರಕ್ಷಣಾ ಪರಿಣಾಮಗಳನ್ನು ಹೊಂದಿದೆ. ಭಾರತದಲ್ಲಿ ಚಿರತೆ ಪಾತ್ರವನ್ನು ಮರುನಿರ್ಮಾಣ ಮಾಡುವುದು ಸೇರಿದಂತೆ ಹಲವಾರು ಪರಿಸರ ಸಂಬಂಧಿತ ಉದ್ದೇಶಗಳನ್ನು ಈ ಯೋಜನೆ ಹೊಂದಿದೆ. ಫೆಬ್ರವರಿಯಲ್ಲಿ 12 ಚಿರತೆಗಳನ್ನು ಆಮದು ಮಾಡಿಕೊಂಡ ಬಳಿಕ, ಮುಂದಿನ ಎಂಟರಿಂದ 10 ವರ್ಷಗಳವರೆಗೆ ಪ್ರತಿ ವರ್ಷವೂ ತಲಾ 12 ಚಿರತೆಗಳನ್ನು ಸ್ಥಳಾಂತರಿಸುವ ಯೋಜನೆ ಇದೆ ಎಂದು ಸರ್ಕಾರದ ಅಧಿಕೃತ ಹೇಳಿಕೆ ತಿಳಿಸಿದೆ.

Leave A Reply

Your email address will not be published.