ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಮಹತ್ತರ ಹೇಳಿಕೆ | ವಿಶ್ವಕಪ್ ಬಗ್ಗೆ ಏನು ಹೇಳಿದ್ರು ಗೊತ್ತಾ ?

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಅತ್ಯುತ್ತಮ ಆಟಗಾರ. 2022 ರಲ್ಲಿ ಬಾಬರ್ ಉತ್ತಮ ಪ್ರದರ್ಶನ ನೀಡಿದ್ದಾರೆ.
ಇದೀಗ ಬಾಬರ್ ವಿಶ್ವಕಪ್ ತಂಡದ ಭಾಗವಾಗಿ, ಐಸಿಸಿ ಪಂದ್ಯಾವಳಿಯನ್ನು ಗೆಲ್ಲಬೇಕು ಎಂದಿದ್ದಾರೆ. 2022 ಲಿಲ್ಲಿ ಉತ್ತಮ‌ ಪ್ರದರ್ಶನ ನೀಡಿದ್ದು, 2023ರಲ್ಲಿ ಪಾಕಿಸ್ತಾನಕ್ಕಾಗಿ ಬಾಬರ್ ಐಸಿಸಿ ಪಂದ್ಯಾವಳಿಯನ್ನು ಗೆಲ್ಲುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ನಾಯಕ ಬಾಬರ್ ಅಜಮ್ ಎರಡು ಬಾರಿ ICC ‘ಏಕದಿನ ವರ್ಷದ ಆಟಗಾರ’ ಎನಿಸಿಕೊಂಡಿದ್ದಾರೆ. ಈ ಬಾರಿ ಅವರು ಪಾಕಿಸ್ತಾನಕ್ಕೆ ಐಸಿಸಿ ವಿಶ್ವಕಪ್ ಪ್ರಶಸ್ತಿಯನ್ನು ತಂದುಕೊಡುವ ಮೂಲಕ ಅತ್ಯುತ್ತಮ ನಾಯಕನಾಗಲು ಬಯಸುತ್ತಿದ್ದಾರೆ.

2022 ರ ವರ್ಷದ ಐಸಿಸಿ ಪುರುಷರ ಕ್ರಿಕೆಟಿಗ ಎಂದು ಘೋಷಿಸಲ್ಪಟ್ಟ ನಂತರ ಪಾಕಿಸ್ತಾನದ ನಾಯಕ ಬಾಬರ್ ಆಜಮ್ ‘ಸರ್ ಗಾರ್ಫೀಲ್ಡ್ ಸೋಬರ್ಸ್ ಟ್ರೋಫಿ’ಯನ್ನು ಪಡೆದರು. ಬಾಬರ್ ಅಜಮ್ ಕಳೆದ 24 ತಿಂಗಳಲ್ಲಿ 50 ಓವರ್‌ಗಳ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಬಾಬರ್ 2021 ಮತ್ತು 2022 ರ ICC ಪುರುಷರ ODI ವರ್ಷದ ಆಟಗಾರ. ಇವರು ಒಂಬತ್ತು ಪಂದ್ಯಗಳಲ್ಲಿ 679 ರನ್ ಗಳಿಸಿದರು. ಆ ಎಂಟು ಇನ್ನಿಂಗ್ಸ್‌ಗಳಲ್ಲಿ ಅವರು 50 ಕ್ಕಿಂತ ಹೆಚ್ಚಿನ ಸ್ಕೋರ್‌ಗಳನ್ನು ದಾಖಲಿಸಿದ್ದಾರೆ. ಜುಲೈ 2021 ರಿಂದ ಅವರು ODI ಆಟಗಾರರ ಶ್ರೇಯಾಂಕದಲ್ಲಿ ನಂ. 1 ಸ್ಥಾನದಲ್ಲಿದ್ದಾರೆ. ಮತ್ತು ಕಳೆದ ಎರಡು ವರ್ಷಗಳಿಂದ ODI ವರ್ಷದ ಆಟಗಾರ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಪಂದ್ಯದ ಬಗ್ಗೆ ಮಾತನಾಡಿದ ಬಾಬರ್ ಅಜಮ್, ”ವಿಶ್ವಕಪ್ ತಂಡದ ಭಾಗವಾಗಿ ಮತ್ತು ಪಂದ್ಯಾವಳಿಯನ್ನು ಗೆಲ್ಲುವುದು ನನ್ನ ಗುರಿ ಮತ್ತು ಆಸೆಯಾಗಿದೆ. ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಅದನ್ನು ಗೆಲ್ಲಬೇಕು. ವಿಶ್ವಕಪ್ ಗೆಲ್ಲುವುದು ನನ್ನ ಗುರಿ,‌ ಕನಸು ” ಎಂದು ಹೇಳಿದರು.

ಏಪ್ರಿಲ್ ಮತ್ತು ಮೇ ಅಂತ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಸರಣಿ, ಅಫ್ಘಾನಿಸ್ತಾನದ ಮೂರು ಪಂದ್ಯಗಳ ಪ್ರವಾಸ ಮತ್ತು ಏಷ್ಯಾ ಕಪ್‌ನ 2023ಕ್ಕೆ ಪಾಕಿಸ್ತಾನ ಭರ್ಜರಿ ಸಿದ್ಧತೆ ನಡೆಸುತ್ತಿದೆ.

Leave A Reply

Your email address will not be published.