Pradhan Mantri Shram Yogi Mandhan | 60 ವರ್ಷದ ಮೇಲಿನ ಕಾರ್ಮಿಕರಿಗಾಗಿಯೇ ಇರುವ ಈ ಯೋಜನೆಯಡಿ ಪಡೆಯಿರಿ ತಿಂಗಳಿಗೆ 3 ಸಾವಿರ ಪಿಂಚಣಿ!
ಸರ್ಕಾರವು ಕಾರ್ಮಿಕರಿಗಾಗಿ ಹಲವಾರು ಯೋಜನೆಗಳನ್ನು ರೂಪಿಸುತ್ತಲೇ ಬಂದಿದ್ದು, ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡುವುದೇ ಈ ಯೋಜನೆಗಳ ಗುರಿಯಾಗಿದೆ. ಅದರಂತೆ ಇದೀಗ ಸರ್ಕಾರವು 60 ವರ್ಷ ಮೇಲಿನ ಕಾರ್ಮಿಕರಿಗೆ ಸಹಾಯ ಮಾಡಲೆಂದೆ ಹೊಸ ಪಿಂಚಣಿಯನ್ನು ಪರಿಚಯಿಸಿದೆ.
ಅದುವೇ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಶ್ರಮ ಯೋಗಿ ಮಂಧನ್ ಯೋಜನೆ. ಈ ಯೋಜನೆಯಡಿ ಸರ್ಕಾರವು 60 ವರ್ಷ ವಯಸ್ಸಿನ ಕಾರ್ಮಿಕರಿಗೆ ಮಾಸಿಕ ಪಿಂಚಣಿ ನೀಡುತ್ತದೆ. ಈ ಯೋಜನೆಯಡಿ ಹೂಡಿಕೆ ಮಾಡುವ ಪ್ರತಿ ಕಾರ್ಮಿಕರು 60 ವರ್ಷಗಳನ್ನ ಪೂರೈಸಿದ ನಂತರ ಪ್ರತಿ ತಿಂಗಳು ರೂ.3,000 ಪಿಂಚಣಿ ಪಡೆಯಬಹುದು.
ಈ ಯೋಜನೆಗೆ ಸೇರಲು ನೀವು 18 ರಿಂದ 60 ವರ್ಷ ವಯಸ್ಸಿನವರಾಗಿರಬೇಕು. ಅಂದಹಾಗೆ ಈ ಯೋಜನೆಯು ಮಾಸಿಕ ಆದಾಯ 15,000 ರೂಪಾಯಿಗಿಂತ ಕಡಿಮೆ ಇರುವವರು, ಟೈಲರ್ಗಳು, ಚಮ್ಮಾರರು, ರಿಕ್ಷಾ ಚಾಲಕರು, ಮನೆಗೆಲಸದವರು ಮುಂತಾದ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರು ಈ ಯೋಜನೆ ಲಾಭ ಪಡೆಯಬಹುದು. ಆದಾಯ ತೆರಿಗೆ ಪಾವತಿಸುವ ವ್ಯಕ್ತಿಗಳು ಈ ಯೋಜನೆಯನ್ನ ಪಡೆಯಲು ಸಾಧ್ಯವಿಲ್ಲ. EPFO, NPS, NSIC ಚಂದಾದಾರರು ಈ ಯೋಜನೆಯ ಪ್ರಯೋಜನವನ್ನ ಪಡೆಯಲು ಸಾಧ್ಯವಿಲ್ಲ.
ಈ ಯೋಜನೆಗೆ ಆನ್ಲೈನ್ ಮತ್ತು ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. www.maandhan.in ಗೆ ಭೇಟಿ ನೀಡುವ ಮೂಲಕ ನೀವು ಈ ಯೋಜನೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು . ಅರ್ಜಿ ನಮೂನೆಯನ್ನ ಭರ್ತಿ ಮಾಡಲು, ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಈ ಮೂಲಕ ಅರ್ಜಿ ಭರ್ತಿ ಗೊಳಿಸಬಹುದು. ಹಾಗೆಯೇ, ಸಾಮಾನ್ಯ ಸೇವಾ ಕೇಂದ್ರಕ್ಕೆ ಹೋಗಿ ಆಫ್ಲೈನ್ ಅರ್ಜಿಯನ್ನು ನೀಡಬಹುದು.
ಈ ಯೋಜನೆಯನ್ನ ಪಡೆಯಲು ರೂ.55 ರಿಂದ ರೂ. 200 ಠೇವಣಿ ಇಡಬೇಕು. ಇದರಲ್ಲಿ ಶೇ 50ರಷ್ಟು ಫಲಾನುಭವಿಗಳು ಹಾಗೂ ಶೇ 50ರಷ್ಟು ಸರ್ಕಾರದಿಂದ ವಂತಿಗೆ ಪಡೆಯಲಾಗುತ್ತದೆ. ಪಿಂಚಣಿದಾರರು ಮೃತ ಪಟ್ಟರೇ ಅವರ ಪತ್ನಿ ಅಥವಾ ಪತಿ ಪಿಂಚಣಿ ಮೊತ್ತವನ್ನ ಪಡೆಯುತ್ತಾರೆ. ಈ ಸಂದರ್ಭದಲ್ಲಿ ಪ್ರತಿ ಪಿಂಚಣಿದಾರರು ವರ್ಷಕ್ಕೆ 36,000 ರೂಪಾಯಿ ಪಿಂಚಣಿ ಪಡೆಯುತ್ತಾರೆ. ಈ ಯೋಜನೆಯನ್ನ ಪಡೆಯಲು ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.