ಜಿಯೋ ನೀಡಲಿದೆ ರೈತರಿಗೆ ಸಿಹಿ ಸುದ್ದಿ ! ಹೇಗೆ ಅಂತೀರಾ? ಇಲ್ಲಿದೆ ಕಂಪ್ಲೀಟ್‌ ವಿವರ

ರಿಲಯನ್ಸ್‌ ಜಿಯೋ (Reliance Jio) ಮತ್ತು ಬ್ರಿಟನಿನ ಬಿಪಿ (Bp) ಜಂಟಿ ಸಂಸ್ಥೆಯಾಗಿರುವ ಜಿಯೋ-ಬಿಪಿ, ಎಲೆಕ್ಟ್ರಾನಿಕ್ ವಾಹನಕ್ಕೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ಶ್ರಮಿಸುತ್ತಿದೆ. ಇದೀಗ ಈ ಜಂಟಿ ಉದ್ಯಮವು ಶೇ.20 ರಷ್ಟು ಎಥೆನಾಲ್ ಮಿಶ್ರಣದೊಂದಿಗೆ ಪೆಟ್ರೋಲ್ ಅನ್ನು ಪರಿಚಯಿಸಿದ್ದು, ಕಚ್ಚಾ ತೈಲ ಆಮದು ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಸರ್ಕಾರದ ಒಂದು ಯೋಜನೆಯ ಭಾಗವಾಗಿದೆ.

E-20 ಇಂಧನಕ್ಕೆ ಹೊಂದಿಕೊಳ್ಳುವ ವಾಹನಗಳ ಮಾಲೀಕರು ಆಯ್ದ Jio-BP ಪೆಟ್ರೋಲ್ ಪಂಪ್‌ಗಳಿಂದ ಈ ಇಂಧನವನ್ನು ಖರೀದಿಸಲು ಸಾಧ್ಯವಾಗಲಿದೆ. ಶೀಘ್ರದಲ್ಲೇ ಇದನ್ನು ಇಡೀ ನೆಟ್‌ವರ್ಕ್‌ಗೆ ವಿಸ್ತರಿಸಲಾಗುವುದು ಎಂಬ ಮಾಹಿತಿ ಇದೆ. E-20 ಇಂಧನವು ಶೇ.20 ರಷ್ಟು ಎಥೆನಾಲ್ ಮತ್ತು ಶೇ.80 ರಷ್ಟು ಗ್ಯಾಸೋಲಿನ್ ಇಂದ ಕೂಡಿದೆ ಎಂದು ಕಂಪನಿ ತಿಳಿಸಿದೆ. ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ ಮಾಡುವ ಕಾರ್ಯಕ್ರಮವು ಕಚ್ಚಾ ತೈಲದ ಆಮದನ್ನು ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಇದು ಕಡಿಮೆ ಮಾಡುತ್ತದೆ. ಇದರಿಂದಾಗಿ ದೇಶದ ರೈತರ ಆದಾಯವನ್ನು ಹೆಚ್ಚಿಸುತ್ತದೆ.

ಈ ಬಗ್ಗೆ ಹೇಳಿಕೆ ನೀಡಿರುವ ಕಂಪನಿಯು ‘ಭಾರತದ ಇಂಧನ ಮತ್ತು ಸಾರಿಗೆ ಉದ್ಯಮವು ವೇಗವಾಗಿ ಬೆಳೆಯುತ್ತಿದ್ದು, ಮುಂದಿನ 20 ವರ್ಷಗಳಲ್ಲಿ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಇಂಧನ ಮಾರುಕಟ್ಟೆಯಾಗಿ ಹೊರ ಹೊಮ್ಮಲಿದೆ ಎಂದು ನಿರೀಕ್ಷಿಸಲಾಗಿದೆ’ ಎಂದಿದೆ. ಇದೆ ವಾರದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ನಡೆದ ಇಂಡಿಯಾ ಎನರ್ಜಿ ವೀಕ್-2023 ಕಾರ್ಯಕ್ರಮದಲ್ಲಿ ಶೇ.20 ಎಥೆನಾಲ್ ಮಿಶ್ರಣ ಪೆಟ್ರೋಲ್ ಅನ್ನು ಪರಿಚಯಿಸಿದ್ದಾರೆ. ಇದರ ಮಾರಾಟವು ದೇಶದ 11 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಆಯ್ದ ಪೆಟ್ರೋಲ್ ಪಂಪ್‌ಗಳಲ್ಲಿ ಸೋಮವಾರದಂದು ಪ್ರಾರಂಭವಾಗಿದೆ.

2014ರಲ್ಲಿ ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣವು ಶೇ. 1.5 ರಿಂದ ಶೇ. 10 ಕ್ಕೆ ಏರಿಕೆ ಮಾಡಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಈಗ ನಾವು ಶೇ. 20 ರ ಗುರಿಹೊತ್ತು ಮುಂದೆ ಸಾಗುತ್ತಿದ್ದೇವೆ. ಮೊದಲ ಹಂತದಲ್ಲಿ, ಶೇ. 20 ಎಥೆನಾಲ್ ಮಿಶ್ರಣದೊಂದಿಗೆ ಪೆಟ್ರೋಲ್ ಅನ್ನು 15 ನಗರಗಳಲ್ಲಿ ಬಿಡುಗಡೆ ಮಾಡಲಾಗುವುದು. ಇನ್ನೆರಡು ವರ್ಷಗಳಲ್ಲಿ ಇದನ್ನು ದೇಶಾದ್ಯಂತ ಪರಿಚಯಿಸಲಾಗುವುದು. ಶೇ. 10 ರಷ್ಟು ಎಥೆನಾಲ್ ಅನ್ನು ಪೆಟ್ರೋಲ್‌ನಲ್ಲಿ ಬೆರೆಸುವ ಮೂಲಕ ದೇಶವು 53,894 ಕೋಟಿ ರೂಪಾಯಿಗಳ ವಿದೇಶಿ ವಿನಿಮಯವನ್ನು ಉಳಿತಾಯ ಮಾಡಬಹುದು. ರೈತರಿಗೂ ಇದರ ಲಾಭ ಸಿಗಲಿದ್ದು E-20 (20% ಎಥೆನಾಲ್ ಹೊಂದಿರುವ ಪೆಟ್ರೋಲ್) 11 ರಾಜ್ಯಗಳು/UTಗಳಲ್ಲಿ ಮೂರು PSUಗಳ ಪೆಟ್ರೋಲ್ ಪಂಪ್‌ಗಳಲ್ಲಿ ಪ್ರಸ್ತುತ ಲಭ್ಯವಿದೆ.

ಜೂನ್ 2022 ರಲ್ಲಿ ಐದು ತಿಂಗಳ ಮುಂಚಿತವಾಗಿಯೇ ಪೆಟ್ರೋಲ್‌ನಲ್ಲಿ ಶೇ. 10 ರಷ್ಟು ಎಥೆನಾಲ್ ಮಿಶ್ರಣ ಮಾಡುವ ಗುರಿಯನ್ನು ಭಾರತ ಸಾಧಿಸಿದೆ. ಇದಲ್ಲದೇ, ಇ20 ಪೆಟ್ರೋಲ್ ಒದಗಿಸಲು ನಾವು ಈ ಹಿಂದೆ 2025 ನೇ ವರ್ಷದ ವರಗೆ ಗಡುವು ನೀಡಿದ್ದೇವೆ. ಮೊದಲು ಈ ಗಡುವು 2030 ಆಗಿತ್ತು. ಆದರೆ, ಈಗ E20 ಅನ್ನು ಪ್ರಾಯೋಗಿಕ ಆಧಾರದ ಮೇಲೆ ಗಡುವಿಗಿಂತ ಮುಂಚಿತವಾಗಿ ಪರಿಚಯಿಸಲಾಗಿದೆ ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಹೇಳಿದ್ದಾರೆ.

Leave A Reply

Your email address will not be published.