‘ಹಿಂದೂ ಎಂದರೆ ದೇಹ, ಹಿಂದುತ್ವ ಅದರ ಜೀವ’: ಸಿದ್ದರಾಮಯ್ಯಗೆ ಹಿಂದುತ್ವದ ಪಾಠ ಮಾಡಿದ ಸಿಟಿ ರವಿ

ರಾಜ್ಯದಲ್ಲಂತೂ ಹಿಂದುತ್ವದ ವಿಚಾರವಾಗಿ ಆಗಿಂದಾಗ್ಗೆ ಸಾಕಷ್ಟು ವಿವಾದಗಳು ಮುನ್ನಲೆಗೆ ಬರುತ್ತವೆ. ರಾಜಕೀಯ ನಾಯಕರಾಗಲಿ, ಅನ್ಯ ಕೋಮಿನ ಮುಖಂಡರುಗಳಾಗಲಿ ಹಿಂದುತ್ವದ ಕುರಿತು ಆಗಾಗ ನಾಲಗೆ ಹರಿಬಿಟ್ಟು ಪೇಚಿಗೆ ಸಿಲುಕುತ್ತಾರೆ. ಕಾಂಗ್ರೆಸ್ ನಾಯಕರಂತೂ ಇದರಲ್ಲಿ ಮುಂಚೂಣಿಯಲ್ಲಿರುತ್ತಾರೆ. ಹಿಂದು ಪದ, ಹಿಂದುತ್ವ, ಹಿಂದೂಗಳು ಎಂದು ಏನೇನೋ ಹೇಳಿಕೆ ಕೊಟ್ಟು, ಜನರ ಆಕ್ರೋಶಕ್ಕೆ ಕಾರಣರಾಗುತ್ತಾರೆ. ಅದರಲ್ಲೂ ಈ ವಿಚಾರವಾಗಿ ಸಿದ್ದರಾಮಯ್ಯನೇ ಹೆಚ್ಚು ಮಾತನಾಡೋದು ಅನ್ಬೋದು. ಇದೀಗ ವಿಪಕ್ಷ ನಾಯಕ ಸಿದ್ದುಗೆ ಆಗಾಗ ಹೊಸ ಹೆಸರುಗಳನ್ನು ನಾಮಕರಣ ಮಾಡುವ, ಬಿಜೆಪಿ ನಾಯಕ ಸಿ ಟಿ ರವಿ ಅವರು ಮಾತಲ್ಲೇ ತಿವಿದು, ಹಿಂದುತ್ವದ ಪಾಠ ಮಾಡಿದ್ದಾರೆ.

‘ಹಿಂದೂ ಎಂದರೆ ದೇಹ, ಹಿಂದುತ್ವ ಎಂದರೆ ಜೀವ, ದೇಹವಿದ್ದು, ಜೀವ ಇಲ್ಲದಿದ್ದರೆ ಏನಾಗುತ್ತೀರಿ ಗೊತ್ತುಂಟಾ ಸಿದ್ದರಾಮಯ್ಯ ಅವರೇ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಸಿದ್ದುಗೆ ಪ್ರಶ್ನಿಸಿದ್ದಾರೆ. ಗುರುವಾರ ಕೋಲಾರ ಲೋಕಸಭಾ ಕ್ಷೇತ್ರದ ಬಿಜೆಪಿ ಎಸ್‌ಸಿ ಮೋರ್ಚಾ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತ ಪ್ರಶ್ನೆಯೊಂದಕ್ಕೆ ಸಿಟಿ ರವಿಯವರು ಉತ್ತರಿಸಿದರು.

ಬಳಿಕ ಮಾತನಾಡಿದ ಅವರು ‘ಈ ಪದವನ್ನು ನಾನು ಬಳಸುತ್ತಿಲ್ಲ; ಜನ ಹೇಳುತ್ತಿದ್ದಾರೆ. ಸಿದ್ದರಾಮಯ್ಯನವರೇ, ಹಿಂದುತ್ವ ಒಪ್ಪಿಕೊಳ್ಳದಿದ್ದರೆ ಅದೇ ಎರಡು ಅಕ್ಷರ ನೀವಾಗುತ್ತೀರಿ. ಆದರೆ, ನೀವು ಅದಾಗಬಾರದು ಎಂಬುದು ನಮ್ಮ ಬಯಕೆ. ಅದಕ್ಕಾಗಿ ಹಿಂದೂ ಆಗಿದ್ದವನು ಹಿಂದುತ್ವ ಒಪ್ಪಿಕೊಳ್ಳಬೇಕು. ಆಗ ಮಾತ್ರ ಜೀವ ಇರುತ್ತೆ’ ಎಂದು ಪರೋಕ್ಷವಾಗಿ ತಿವಿದಿದ್ದಾರೆ.

ಸಿದ್ದರಾಮಯ್ಯ ಅವರು ಕೋಲಾರಕ್ಕೆ ಬಂದಾಗ 1952 ರಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಯಾವ ಪಕ್ಷ ಸೋಲಿಸಿತು ಎಂಬ ಪ್ರಶ್ನೆಯನ್ನು ಕೇಳಬೇಕು. ಇದಕ್ಕೆ ಅವರಿಂದ ಉತ್ತರ ಪಡೆಯಬೇಕು ಎಂದರು. ಈ ವೇಳೆ ಅಂಬೇಡ್ಕರ್ ಅವರ ಸೋಲಿಗೆ ಯಾವ ಪಕ್ಷ ಕಾರಣ ಎಂದು ನೆರೆದಿದ್ದವರನ್ನು ರವಿ, ಪ್ರಶ್ನಿಸಿದಾಗ ಸ್ಥಳದಲ್ಲಿದ್ದ ಜನರು ಕಾಂಗ್ರೆಸ್ ಎಂದು ಕೂಗಿದರು. ಈ ಮೂಲಕ ನೆರೆದಿದ್ದವರ ಗಮನ ಸೆಳೆದರು.

‘ಬಿಜೆಪಿ ರಾಷ್ಟ್ರೀಯತೆ, ಹಿಂದುತ್ವದ ಆಧಾರದ ಮೇಲೆ ರಾಜಕೀಯ ಮಾಡುವ ಪಕ್ಷ. ಹಿಂದುತ್ವ ಪರ ಎಂದರೆ‌ ಮುಸ್ಲಿಮರ ವಿರುದ್ಧ ಅಲ್ಲ. ಭಾರತ ನಮ್ಮದು ಎಂದವರೆಲ್ಲರೂ ಹಿಂದೂಗಳೇ’ ಎಂದ ಅವರು ಬಳಿಕ ತಮ್ಮ ಅಧಿಕಾರಾವಧಿಯಲ್ಲಿ ದೇಶದಲ್ಲಿ ಮತ್ತು ರಾಜ್ಯಗಳಲ್ಲಿ ಎಸ್‌ಸಿಗಳ ಹಿತಾಸಕ್ತಿ ಕಾಪಾಡುವಲ್ಲಿ ಕಾಂಗ್ರೆಸ್ ವಿಫಲವಾದ ಕಾರಣ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

Leave A Reply

Your email address will not be published.