ಈ ಖತರ್ನಾಕ್ ಲೇಡಿ ಗಂಡನನ್ನು ಕೊಲ್ಲಲು ಕಣ್ಣಿನ ಹನಿಗಳನ್ನು ಬಳಸಿದಳು | ಕಣ್ಣ ಹನಿಯಲ್ಲಿ ಜೀವ ಹೋಗುತ್ತಾ..ಈ ವರದಿ ನೋಡಿ…

Share the Article

ಇಲ್ಲೊಂದು ಖತರ್ನಾಕ್ ಮಹಿಳೆಯೊಬ್ಬಳು ತನ್ನ ಗಂಡನ ಕೆಟ್ಟ ಚಟಗಳನ್ನು ತಾಳಲಾರದೆ ,ಆತನನ್ನು ರೋಗಿಯನ್ನಾಗಿ ಮಾಡಬೇಕೆನ್ನುವ ಪ್ಲಾನ್‌ನಲ್ಲಿ ಆತನ ಪ್ರಾಣವನ್ನೇ ತೆಗೆದು ಬಿಟ್ಟಿದ್ದಾಳೆ.

ಈ ನಡೆದಿರುವುದು ಘಟನೆ ಅಮೆರಿಕಾದಲ್ಲಿ.ಗಂಡನನ್ನೇ ಮುಗಿಸಿದ ಈ ಚಾಲಾಕಿ ಹೆಣ್ಣಿನ ಹೆಸರು ಲಾನಾ ಸ್ಟೀವನ್(53 ವ.,) ಇವಳ ಗಂಡನ ಹೆಸರು ಕ್ಲೆಟನ್ ಸ್ಟೀವನ್(64 ವ.).

ಲಾನಾ ಸ್ಟೀವನ್ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ಆದರೆ ಈಕೆಯ ಗಂಡ ಮಿಲೆನಿಯ‌ರ್.ವ್ಯಾಪಾರ ಮಾಡಿ ಕೋಟ್ಯಾಂತರ ಹಣವನ್ನು ಸಂಪಾದನೆ ಮಾಡುತ್ತಿದ್ದ.

ಕ್ಲೆಟನ್ ಹಣ ಸಂಪಾದನೆಯೊಂದಿಗೆ ಈತನಿಗೆ ಕೆಟ್ಟಚಟಗಳು ಇತ್ತು. ಇದರಿಂದ ಬೇಸತ್ತ ಹೆಂಡತಿ ಲಾನಾ ಪ್ರತಿದಿನ ಬೆಳಿಗ್ಗೆ ಗಂಡ ಕಾಫಿ ಕುಡಿಯುವ ಲೋಟಕ್ಕೆ ತನ್ನ ಕಣ್ಣಿನ ಹನಿಗಳನ್ನು ಹಾಕುತ್ತಿದ್ದಳು. ಈಕೆಯ ಕಣ್ಣಿನ ಹನಿಗಳೇ ಆತನಿಗೆ ವಿಷವಾಗಿ ಆತ ಹೃದಯಾಘಾತದಿಂದ ಮೂರೇ ಭೂಲೋಕಕ್ಕೆ ಟಾಟಾ ಹೇಳಿದ್ದಾನೆ.

ಕಣ್ಣು ಕೆಂಪಾದಾಗ ಹಾಕುವ ಐ ಡ್ರಾಪ್‌ನಲ್ಲಿ ಇರುವ ವಿಸಿನ್ ಎಂದು ಕರೆಯಲಾಗುವ ಕೆಮಿಕಲ್ ಅನ್ನು ಈಕೆ ಬಳಸಿ ತನ್ನ ಗಂಡನನ್ನು ಮುಗಿಸಿದ್ದಾಳೆ. ಪ್ರತಿದಿನ ಗಂಡ ಕಾಫಿ ಕುಡಿಯುವಾಗ ಈಕೆ ಕಣ್ಣಿಗೆ ಏ ಡ್ರಾಪ್ಸ್ ಬಿಟ್ಟುಕೊಂಡು ನಂತರ ಕಣ್ಣಿನ ಹನಿಗಳನ್ನು ಗಂಡ ಕುಡಿಯುತ್ತಿದ್ದ ಕಾಫಿಗೆ ಹಾಕುತ್ತಿದ್ದಳು. ಆದರೆ ಈಕೆಗೆ ಆ ಕೆಮಿಕಲ್ ಗಂಡನ ಜೀವ ತೆಗೆಯುತ್ತದೆ ಎಂಬ ಅರಿವಿರಲಿಲ್ಲ. ಅವನು ಹಾಸಿಗೆ ಹಿಡಿಯುತ್ತಾನೆ ಎಂದು ಅಂದುಕೊಂಡಿದ್ದಳು.ಆದರೆ ನಡೆದಿದ್ದೇ ಬೇರೆ.

Leave A Reply