ಅಬ್ಬಾಬ್ಬ! ಈ ಚಾಕ್ಲೇಟ್ಗಳ ಬೆಲೆ ಕೇಳಿದ್ರೆನೆ ಗಾಬರಿ ಬೀಳ್ತೀರ? ಇವುಗಳನ್ನೇನಾದ್ರೂ ಪರ್ಚೇಸ್ ಮಾಡೋದಾದ್ರೆ ಆಸ್ತಿಯನ್ನೇ ಮಾರಬೇಕಾಗುತ್ತೆ!
ಚಾಕ್ಲೇಟ್ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಚಿಕ್ಕ ಮಕ್ಕಳಿಂದ ಹಿಡಿದೂ ವಯಸ್ಸಾದ ಮುದಕರಿಗೂ ಕೂಡ ಚಾಕ್ಲೇಟ್ ಅಂದ್ರೆ ಒಂದು ತರ ಸೆಂಟಿಮೇಟ್. ಅದರಲ್ಲೂ ಈಗಂತೂ ತರತರಹದ ಚಾಕ್ಲೇಟ್ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ನೋಡುಗರೆಲ್ಲರಿಗೂ ಬಾಯಲ್ಲಿ ನೀರು ತರಿಸಿಬಿಡುತ್ತವೆ. ಮುಖ್ಯವಾಗಿ ಈ ಚಾಕ್ಲೇಟ್ಗಳು ಯಾರಿಗೆ ಜಾಸ್ತಿ ಉಪಯೋಗ ಆಗುತ್ತಪ್ಪಾ ಅಂದ್ರೆ, ಮೊದಲು ಬರೋ ಉತ್ತರವೇ, ಕಪಲ್ಸ್ ಗಳಿಗೆ. ಹೌದು, ಸದ್ಯ ವ್ಯಾಲಂಟೈನ್ಸ್ ಬೇರೆ ಹತ್ತಿರವಾಗ್ತಿದೆ. ಈ ಹಿನ್ನೆಲೆಯಲ್ಲಿ ಒಳ್ಳೊಳ್ಳೆ ರುಚಿ ರುಚಿಯಾದ ಚಾಕ್ಲೇಟ್ಗಳು ಎಲ್ಲರ ಗಮನ ಸೆಳೀತಿದೆ. ಈಗಲೇ ಚಾಕ್ಲೇಟನ್ನು ಕೊಂಡುಕೊಳ್ಳಲು ಪ್ರೇಮಿಗಳು ಮುಂದಾಗಿದ್ದಾರೆ. ಅಂತೆಯೇ ಸದ್ಯ ಹೊಸದಾಗಿ ಬಂದಿರೋ ಚಾಕ್ಲೇಟ್ಗಳ ಬಗ್ಗೆ ನಾವೀಗ ಪರಿಚಯ ಮಾಡ್ಕೋಡ್ತೀವಿ ನೋಡಿ.
ಅಂದಹಾಗೆ ಸಾಮಾನ್ಯವಾಗಿ ನೀವು ಎಷ್ಟು ರೂಪಾಯಿಯ ಚಾಕ್ಲೇಟ್ ಕೊಂಡ್ಕೊಳ್ಳುತ್ತೀರಾ ಹೇಳಿ? 50, 100, 500 ಹೋಗಲಿ ಹೆಚ್ಚೆಂದರೆ 1000 ರೂಪಾಯಿ ಬೆಲೆಬಾಳೋ ಚಾಕ್ಲೇಟ್ ತಗೊಳ್ತೀರಾ ಅಲ್ವಾ? ತಗೊಳ್ಳದಿದ್ದರೂ ನೋಡಿರ್ತೀರಾ ಅಥವಾ ಅದರ ಬಗ್ಗೆ ಕೇಳಿರ್ತೀರ. ಆದರೆ ಸದ್ಯ ಮಾರುಕಟ್ಟೆಗೆ ಬಂದಿರೋ ಹಾಗೂ ನಾವಿಲ್ಲಿ ಪರಿಚಯ ಮಾಡ್ಕೊಡ್ತಿರೋ ಹೊಸ ಹೊಸ ಮತ್ತು ವಿಶ್ವದ ದುಬಾರಿ ಚಾಕ್ಲೇಟ್ಗಳ ಬೆಲೆ ಕೇಳಿದ್ರೆ ನೀವು ಗಾಬರಿ ಬಿದ್ಬಿಡ್ತೀರಾ! ಯಾಕಂದ್ರೆ ಇವುಗಳಲ್ಲಿ ಒಂದೊಂದು ಚಾಕ್ಲೇಟ್ ಪರ್ಚೇಸ್ ಮಾಡ್ಬೇಕು ಅಂದ್ರೂ ನೀವು, ನಿಮ್ಮ ಆಸ್ತಿನೇ ಮಾರಬೇಕಾಗ್ಬೋದು!
ಮೊದಲನೆಯಾದಾಗಿ ಲೆ ಚಾಕೊಲೇಟ್ ಬಾಕ್ಸ್: ಲೆ ಚಾಕೊಲೇಟ್ ಬಾಕ್ಸ್ ವಿಶ್ವದ ಅತ್ಯಂತ ದುಬಾರಿ ಚಾಕೊಲೇಟ್ ಬಾಕ್ಸ್ ಆಗಿದೆ. ಇದನ್ನು ಅಮೆರಿಕದ ಲೇಕ್ ಫಾರೆಸ್ಟ್ ಕನ್ಫೆಕ್ಷನ್ಸ್ ತಯಾರಿಸಿದೆ. ಈ ಚಾಕೊಲೇಟ್ ಬಾಕ್ಸ್ ಬೆಲೆ ಎಷ್ಟು ಗೊತ್ತಾ? ಬರೋಬ್ಬರಿ 12 ಕೋಟಿ ರೂಪಾಯಿ. ಆದರೆ ಇದರಲ್ಲಿ ಒಂದು ಟ್ವಿಸ್ಟ್ ಇದೆ. ಏನಪ್ಪಾ ಅಂದರೆ ಬಾಕ್ಸ್ ಒಳಗೆ ಚಾಕೊಲೇಟ್ ಮತ್ತು ಡೈಮಂಡ್ ರಿಂಗ್ ಸಹ ಇರುತ್ತದೆ!
ಫ್ರೋಜನ್ ಹಾಲ್ ಚಾಕೊಲೇಟ್: ಇದು ವಿಶ್ವದ ಎರಡನೇ ಅತ್ಯಂತ ದುಬಾರಿ ಚಾಕೊಲೇಟ್ ಆಗಿದೆ. ಈ ಫ್ರೋಜನ್ ಹಾಲ್ ಚಾಕೊಲೇಟ್ ಅನ್ನು ಕೋಕೋದೊಂದಿಗೆ ಹಾಲನ್ನು ಬೆರೆಸಿ ತಯಾರಿಸಲಾಗುತ್ತದೆ. ಈ ಹಾಲ್ ಚಾಕೊಲೇಟ್ ಬೇಸ್ ಗೋಬ್ಲೆಟ್ ಅನ್ನು ವಜ್ರದಿಂದ ತಯಾರಿಸಲಾಗುತ್ತದೆ. ಅದಕ್ಕೇ ಇದರ ಬೆಲೆ ಸುಮಾರು 20 ಲಕ್ಷ ರೂಪಾಯಿ.
ಗೋಲ್ಡನ್ ಸ್ಪೆಕಲ್ಡ್ ಚಾಕೊಲೇಟ್: ಈ ದುಬಾರಿ ಚಾಕೊಲೇಟ್ ಬಾರ್ ಮೂರು ಅಡಿ ಉದ್ದ, ಎರಡು ಇಂಚು ಅಗಲ, ಮೊಟ್ಟೆಯಂತಹ ಆಕಾರ ಮತ್ತು 100 ಪೌಂಡ್ ತೂಕವಿದೆ. ಇದು ಅತ್ಯಂತ ದುಬಾರಿ ನಾನ್-ಜ್ಯುವೆಲ್ಡ್ ಚಾಕೊಲೇಟ್ ಆಗಿದೆ. ಇದರ ಬೆಲೆ 8 ಲಕ್ಷ ರೂಪಾಯಿ. ಇನ್ನು ಸ್ವಾನೋವ್ಸ್ಕಿ ಸ್ಟಡ್ಡ್ ಅನ್ನೋ ಚಾಕೊಲೇಟ್ ಬಾರ್ ಸುಮಾರು 49 ಚಾಕೊಲೇಟ್ಗಳನ್ನು ಒಳಗೊಂಡಿದೆ. ಇದು ಪ್ರಸ್ತುತ ಮಾರಾಟಕ್ಕೆ ಇಲ್ಲ. ಇದರ ಬೆಲೆಯೂ 8 ಲಕ್ಷ ರೂಪಾಯಿ.
ಅಟ್ಟಿಮೊ ಜ್ಯೂರಿಚ್: ಈ ಚಾಕ್ಲೇಟನ್ನು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ಪ್ರಕಾರ, ಸ್ವಿಟ್ಜರ್ಲ್ಯಾಂಡ್ನ ಜ್ಯೂರಿಚ್ನಲ್ಲಿರುವ ಅಟ್ಟಿಮೊ ಚಾಕೊಲೇಟ್ ಕಂಪನಿಯು ತಯಾರಿಸುತ್ತದೆ. ಇದರ ಬೆಲೆ 6 ಲಕ್ಷದ 83 ಸಾವಿರ ರೂಪಾಯಿ. ITC ಚಾಕ್ಲೇಟ್: ಇದು ಭಾರತೀಯ ಕಂಪನಿಯಾದ ಪ್ರಸಿದ್ಧ ಎಫ್ಎಂಸಿಜಿ ಕಂಪನಿ ಐಟಿಸಿ ಫ್ಯಾಬೆಲ್ಲೆ ಬ್ರ್ಯಾಂಡ್ ಟ್ರಿನಿಟಿ – ಟ್ರಿಪಲ್ಸ್ ಎಕ್ಸ್ಟ್ರಾರ್ಡಿನರಿ ಎಂಬ ಹೆಸರಿನಲ್ಲಿ ಈ ಚಾಕೊಲೇಟ್ ಅನ್ನು ತಯಾರಿಸಿದೆ. ಇದರ ಬೆಲೆ ಕೆಜಿಗೆ 4.3 ಲಕ್ಷ ರೂ.
ಕ್ಯಾಡ್ಬರಿ ವಿಸ್ಪಾ ಗೋಲ್ಡ್ ಚಾಕೊಲೇಟ್: ಇದು ನಮಗೆ ತಿಳಿದಿರುವ ಕ್ಯಾಡ್ಬರಿ. ಈ ಕ್ಯಾಡ್ಬರಿ ವಿಸ್ಪಾ ಗೋಲ್ಡ್ ಚಾಕೊಲೇಟ್ ಬೆಲೆ 1 ಲಕ್ಷ 30 ಸಾವಿರ ರೂ. ಆಗಿದೆ. ರಾಯಲ್ ಬುಕ್ ಚಾಕೊಲೇಟ್, ಇದು ಸುಂದರವಾದ ಬುಕ್ ಮಾದರಿಯ ಚಾಕೊಲೇಟ್ ಆಗಿದೆ. ಪ್ರೇಮಿಗಳು ನೀಡುವ ಅತ್ಯಂತ ಜನಪ್ರಿಯ ಉಡುಗೊರೆ ಚಾಕೊಲೇಟ್ ಕೂಡ ಆಗಿದೆ. ಇದರ ಬೆಲೆ ಒಂದು ಲಕ್ಷ ರೂಪಾಯಿಗೂ ಹೆಚ್ಚು. ಗೋಲ್ಡ್ ಮತ್ತು ಡೈಮಂಡ್ ಚಾಕೊಲೇಟ್: ಕೊಕೊ ಗೌರ್ಮೆಟ್ ರಾಯಲ್ ಕಲೆಕ್ಷನ್ ಕಂಪನಿ ಈ ಚಾಕೊಲೇಟ್ಗಳನ್ನು ತಯಾರಿಸುತ್ತದೆ. ಈ ಚಾಕಲೇಟ್ ಬೆಲೆ ಸುಮಾರು ಒಂದು ಲಕ್ಷ ರೂಪಾಯಿ.ಮೈಕೆಲ್ ಕ್ಲೂಜೆಲ್ ಬಾಕ್ಸ್: ಈ ಚಾಕೊಲೇಟ್ ಬಾಯಲ್ಲಿ ನೀರೂರಿಸುತ್ತದೆ. ಈ ಚಾಕೊಲೇಟ್ ಬಾಕ್ಸ್ 48 ಚಾಕೊಲೇಟ್ಗಳನ್ನು ಒಳಗೊಂಡಿದೆ. ಇದರ ಬೆಲೆ 71 ಸಾವಿರದ 200 ರೂ. ಆಗಿದೆ.
ಒಟ್ನಲ್ಲಿ ಚಿನ್ನ, ಬೆಳ್ಳಿ ವಜ್ರದ ಬೆಲೆಗಳುನ್ನು ಕೇಳಿಯೇ ನಾವೆಲ್ಲರೂ ಒಮ್ಮೊಮ್ಮೆ ಶಾಕ್ ಆಗ್ತೇವೆ. ಆದ್ರೆ ಈ ಚಾಕ್ಲೇಟ್ ಬೆಲೆ ಕೂಡ ಅವುಗಳನ್ನು ಮೀರಿಸುವಷ್ಟು ದುಬಾರಿಯಾಗಿದೆ ಅಂದ್ರೆ ನಂಬೋಕೂ ಸಾಧ್ಯವಿಲ್ಲ. ಕೊಂಡುಕೊಂಡ ಕೆಲವೇ ಕ್ಷಣಗಳಲ್ಲಿ ಕರಗಿ ಮಾಯವಾಗುವ ಈ ಚಾಕ್ಲೇಟ್ ಬೆಲೆಗಳು ಕೂಡ ಕೋಟಿ ದಾಟಿದೆ ಎಂದರೆ ಅದು ವಿಪರ್ಯಾಸ! ಇವುಗಳನ್ನು ಕೊಂಡುಕೊಳ್ಳೋದು ಬಿಡಿ, ಮುಟ್ಟಲೂ ಕೂಡ ನಮ್ಮಿಂದ ಸಾಧ್ಯವಿಲ್ಲ ಅನ್ಬೋದು!