Home Interesting Airtel recharge plan | ಈ ರಿಚಾರ್ಜ್ ಪ್ಲಾನ್ ತೆಗೆದುಹಾಕಿ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ಕೊಟ್ಟ...

Airtel recharge plan | ಈ ರಿಚಾರ್ಜ್ ಪ್ಲಾನ್ ತೆಗೆದುಹಾಕಿ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ಕೊಟ್ಟ ಏರ್ಟೆಲ್!

Hindu neighbor gifts plot of land

Hindu neighbour gifts land to Muslim journalist

ಟೆಕ್ನಾಲಜಿ ಜಗತ್ತಿನಲ್ಲಿ ಅತೀ ಹೆಚ್ಚು ಕೇಳಿಬರುತ್ತಿರುವ ಪದವೆಂದರೆ ಏರ್ಟೆಲ್. ಅತೀ ವೇಗ ಓಡುತ್ತಿರುವ ಈ ನೆಟವರ್ಕ್ ಪ್ರಪಂಚದಲ್ಲಿ ಭಾರಿ ಸಂಚಲನವನ್ನೇ ಮೂಡಿಸುತ್ತಿದೆ. ಏರ್ಟೆಲ್ ಹೊಸ ಹೊಸ ಯೋಜನೆಗಳನ್ನು ರೂಪಿಸುವುದರ ಮೂಲಕ ಗ್ರಾಹಕರಿಗೆ ಹತ್ತಿರವಾಗುತ್ತಲೇ ಬಂದಿದೆ. ಆದರೆ ಇದೀಗ ಏರ್‌ಟೆಲ್‌ ತನ್ನ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ನೀಡಿದೆ.

ಹೌದು. ಗ್ರಾಹಕರು ಹೆಚ್ಚಾಗಿ ಬಳಕೆ ಮಾಡುತ್ತಿದ್ದ ರೀಚಾರ್ಜ್‌ ಪ್ಲ್ಯಾನ್‌ ಒಂದನ್ನು ತೆಗೆದುಹಾಕಲಾಗಿದೆ. ಏರ್‌ಟೆಲ್ ತನ್ನ 99 ರೂ. ಗಳ ಪ್ರಿಪೇಯ್ಡ್ ಪ್ಲ್ಯಾನ್‌ ಅನ್ನು ಒಂಬತ್ತು ವಲಯಗಳಿಂದ ತೆಗೆದುಹಾಕಿದ್ದು, ಈ ಮೂಲಕ ಹಳೆಯ ರಿಚಾರ್ಜ್ ಪ್ಲಾನ್ ಇನ್ಮುಂದೆ ದೊರೆಯುವುದಿಲ್ಲ. ಈ ಮೊದಲು 99 ರೂ. ಗಳ ಪ್ರಿಪೇಯ್ಡ್ ಪ್ಲ್ಯಾನ್ 79 ರೂ. ಗಳಾಗಿತ್ತು. ಆದರೆ, ಈ ಎರಡು ವರ್ಷಗಳ ಅವಧಿಯಲ್ಲಿ ಬೇಸ್ ಪ್ಲ್ಯಾನ್‌ದರ 150 ರೂ. ಗಳ ಗಡಿ ದಾಟಿದೆ.

ಏರ್‌ಟೆಲ್‌ನಿಂದ ಈಗ ಹೊಸ ಪರ್ಯಾಯ ರೀಚಾರ್ಜ್‌ ಪ್ಲ್ಯಾನ್‌ ಬಿಡುಗಡೆಗೊಳಿಸಿದೆ. ಏರ್‌ಟೆಲ್‌ನಿಂದ 155 ರೂ. ಗಳ ಪ್ಲ್ಯಾನ್‌ 1GB ಡೇಟಾ, ಅನಿಯಮಿತ ವಾಯ್ಸ್‌ ಕಾಲ್‌ ಹಾಗೂ 300 ಎಸ್‌ಎಮ್‌ಎಸ್‌ ಆಯ್ಕೆಯೊಂದಿಗೆ 24 ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದೆ. ಇದರ ಹೆಚ್ಚುವರಿ ಪ್ರಯೋಜನಗಳೆಂದರೆ ಉಚಿತ ಹೆಲೋಟ್ಯೂನ್ಸ್ ಹಾಗೂ ಉಚಿತ ವಿಂಕ್ ಮ್ಯೂಸಿಕ್ ಸೇವೆ ಪಡೆಯಬಹುದಾಗಿದೆ.

ಈ ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ಶುಲ್ಕಗಳ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ. ಆದರೆ, 155 ಕ್ಕಿಂತ ಕಡಿಮೆ ಇರುವ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಬಳಕೆದಾರರು ಹೆಚ್ಚಿನ ಶುಲ್ಕದೊಂದಿಗೆ ರೀಚಾರ್ಜ್ ಮಾಡಬೇಕಿದೆ. ಏರ್‌ಟೆಲ್ ಮುಂಬರುವ ವರ್ಷಗಳಲ್ಲಿ ಪ್ರತಿ ಬಳಕೆದಾರರಿಂದ ತಿಂಗಳಿಗೆ ಸರಾಸರಿ 300 ರೂ.ಗಳ ಆದಾಯ ಪಡೆಯಲು ಉದ್ದೇಶಿಸಲಾಗಿದ್ದು, ಇದನ್ನು ಪಡೆಯಬೇಕು ಎಂದರೆ ಟೆಲಿಕಾಂ ಕ್ರಮೇಣ ಶುಲ್ಕವನ್ನು ಹೆಚ್ಚಿಸುವ ಅನಿವಾರ್ಯತೆ ಇದೆ. ಹೀಗಾಗಿ ಲಾಭದ ದೃಷ್ಟಿಯಿಂದ ಏರ್ಟೆಲ್ 99 ರೂ. ಗಳ ರೀಚಾರ್ಜ್‌ ಪ್ಲ್ಯಾನ್‌ ಅನ್ನು ತೆಗೆದುಹಾಕಿದೆ.