ಟರ್ಕಿ,ಇಸ್ತಾಂಬುಲ್ ಭೂಕಂಪ | 530 ಮಂದಿ ಸಾವು

Share the Article

ಇಸ್ತಾಂಬುಲ್: ಟರ್ಕಿ ಹಾಗೂ ಸಿರಿಯಾದಲ್ಲಿ ಸೋಮವಾರ ಮುಂಜಾನೆ 7.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ನೂರಾರು ಜನರು ಮಲಗಿದ್ದಾಗ ಸಾವನ್ನಪ್ಪಿದ್ದಾರೆ. ಇದೀಗ ಮೃತರ ಸಂಖ್ಯೆ 530ಕ್ಕೆ ಏರಿಕೆಯಾಗಿದೆ.

ಆರೋಗ್ಯ ಸಚಿವಾಲಯ ಹಾಗೂ ಸ್ಥಳೀಯ ಆಸ್ಪತ್ರೆಯ ಪ್ರಕಾರ, ಸಿರಿಯಾದ ಸರಕಾರಿ ನಿಯಂತ್ರಿತ ಪ್ರದೇಶಗಳಲ್ಲಿ ಮತ್ತು ಟರ್ಕಿಶ್ ಪರ ಬಣಗಳ ಹಿಡಿತವಿರುವ ಉತ್ತರದ ಪ್ರದೇಶಗಳಲ್ಲಿ ಕನಿಷ್ಠ 245 ಜನರು ಸಾವನ್ನಪ್ಪಿದ್ದಾರೆ.

ಟರ್ಕಿಯಲ್ಲಿ ಕನಿಷ್ಠ 284 ಜನರು ಸಾವನ್ನಪ್ಪಿದ್ದಾರೆ ಎಂದು ಉಪಾಧ್ಯಕ್ಷ ಫುಟ್ ಒಕ್ಷೇ ಸೋಮವಾರ ಹೇಳಿದ್ದಾರೆ. 2,300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ, ಹಲವಾರು ಪ್ರಮುಖ ನಗರಗಳಲ್ಲಿ ಹುಡುಕಾಟ ಹಾಗೂ ರಕ್ಷಣಾ ಕಾರ್ಯ ಮುಂದುವರೆದಿದೆ ಎಂದು ಹೇಳಿದರು.

Leave A Reply