ಹುಣಸೂರಿನಲ್ಲಿ ಭೀಕರ ಅಪಘಾತ | ಪುತ್ತೂರಿನ ಯುವಕ ಗಂಭೀರ!

Share the Article

ಪುತ್ತೂರು: ಬೈಕ್‌ ಮತ್ತು ಲಾರಿ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್‌ ಸವಾರ ಸರ್ವೆ ಗ್ರಾಮದ ರ೦ಜಲಾಡಿ ನಿವಾಸಿ ಗಂಭೀರ ಗಾಯಗೊಂಡಿರುವ ಘಟನೆ ಮೈಸೂರು ಸಮೀಪದ ಹುಣಸೂರು ಬಳಿ ಫೆ.4ರಂದು ಬೆಳಿಗ್ಗೆ ನಡೆದಿದೆ. ರೆಂಜಲಾಡಿ ನಿವಾಸಿ ಮಹಮ್ಮದ್‌ ಕುಂಞ ಎಂಬವರ ಪುತ್ರ ಸಾಬಿತ್ ಗಂಭೀರ ಗಾಯಗೊಂಡ ಯುವಕ.

ಸಾಬಿತ್ ಅವರು ತನ್ನ ಎಫ್‌ ಝಡ್ ಬೈಕ್‌ ಮೂಲಕ ಬೆಳಗ್ಗಿನ ಜಾವ ಕಾರ್ಯ ನಿಮಿತ್ತ ಬೆಂಗಳೂರಿಗೆ ಹೊರಟಿದ್ದು ಹುಣಸೂರು ಸಮೀಪ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಲಾರಿಗೆ ಬೈಕ್‌ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ ಸವಾರ ಸಾಬಿತ್‌ ರಸ್ತೆಗೆ ಎಸೆಯಲ್ಪಟ್ಟಿದ್ದು ಅವರ ಕಾಲಿಗೆ ಗಂಭೀರ ಗಾಯವಾಗಿದೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆ್ಯಂಬುಲೆನ್ಸ್ ಮೂಲಕ ಮಂಗಳೂರಿನ ಖಾಸಗೀ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Leave A Reply