Oppo Reno 8T 5G : ಭಾರತದಲ್ಲಿ ಬಿಡುಗಡೆಯಾಯಿತು ಒಪ್ಪೋ ರೆನೋ 8T ಸ್ಮಾರ್ಟ್ ಫೋನ್ | 108MP ಕ್ಯಾಮೆರಾ ಹೊಂದಿರೋ ಈ ಸ್ಮಾರ್ಟ್ಫೋನ್ ಬೆಲೆ ಎಷ್ಟು?

ಸ್ಮಾರ್ಟ್ ಜಗತ್ತಿನಲ್ಲಿ ಸ್ಮಾರ್ಟ್’ಫೋನ್ ಗಳಿಗೆ ಬೇಡಿಕೆಗಳು ದಿನೇ ದಿನೇ ಹೆಚ್ಚುತ್ತಲೇ ಇದೆ. ಒಂದಲ್ಲಾ ಒಂದು ಹೊಚ್ಚ ಹೊಸ ಮಾದರಿಯ, ವಿಶೇಷ ಫೀಚರ್ ಒಳಗೊಂಡ ಸ್ಮಾರ್ಟ್’ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲಿದೆ. ಇದೀಗ ಪ್ರತಿಷ್ಟಿತ ಕಂಪನಿಯಾದ ಒಪ್ಪೊ ರೆನೊ 8 ಸರಣಿಯ (Oppo Reno 8 Series) ಸ್ಮಾರ್ಟ್ ಫೋನ್‌ನ ಮತ್ತೊಂದು ಹೊಸ ಮೊಬೈಲ್ ಒಪ್ಪೋ ರೆನೋ 8T 5G ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಲು ರೆಡಿಯಾಗಿದೆ. ಇದರಲ್ಲಿ ಬೆರಗುಗೊಳಿಸುವ 108 ಮೆಗಾಫಿಕ್ಸೆಲ್‌ನ ಆಕರ್ಷಕ ಕ್ಯಾಮೆರಾ ನೀಡಲಾಗಿದ್ದು ಟೆಕ್ ಪ್ರಿಯರಂತು ಫುಲ್ ಫಿದಾ ಆಗೋದ್ರಲ್ಲಿ ಡೌಟೇ ಇಲ್ಲ!! ಹಾಗಾದ್ರೆ, ಈ ಅತ್ಯಾಕರ್ಷಕ ಫೋನಿನ ಬೆಲೆ ಎಷ್ಟಿದೆ? ಇದರ ವಿಶೇಷತೆಯೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ.

ಒಪ್ಪೋ ರೆನೋ 8T 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಸದ್ಯಕ್ಕೆ ಒಂದು ಮಾದರಿಯಲ್ಲಷ್ಟೆ ಬಿಡುಗಡೆ ಆಗಿದೆ. ಒಪ್ಪೋ ರೆನೋ 8T 5G ಸ್ಮಾರ್ಟ್‌ಫೋನ್ 6.7 ಇಂಚಿನ ಮೈಕ್ರೋ-ಕರ್ವ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದ್ದು, 120Hz ರಿಫ್ರೆಶ್ ರೇಟ್‌ನಿಂದ ಕೂಡಿದೆ. ಡ್ರಾಗನ್‌ಟೈಲ್ ಸ್ಟಾರ್2 ಪ್ರೊಟೆಕ್ಷನ್ ಕೂಡ ನೀಡಲಾಗಿದ್ದು, ಬಲಿಷ್ಠವಾದ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 695 5G SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 13 ಆಧಾರಿತ ColorOS 13 ನಲ್ಲಿ ಕಾರ್ಯನಿರ್ವಹಿಸಲಿದೆ.

ಇನ್ನು ಈ ಫೋನ್ ಮನಮೋಹಕ ಕ್ಯಾಮಾರ ಸೆಟ್ ಅಪ್ ಅನ್ನು ಹೊಂದಿದ್ದು, ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್ ನಲ್ಲಿದೆ. ಇದು ಫೋಟೋಗ್ರಫಿಗೆ ಬೆಸ್ಟ್ ಅಂತಾನೇ ಹೇಳ್ಬೋದು. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ಸ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ ಸೆಲ್ಫಿ ಕ್ಯಾಮೆರಾವು 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯವನ್ನು ಒಳಗೊಂಡಿದೆ. ಈ ಕ್ಯಾಮೆರಾದಲ್ಲಿ HDR, ಬೊಕೆ ಪ್ಲೇರ್ ಪೋರ್ಟ್ರೇಟ್ ಮತ್ತು ಡ್ಯುಯಲ್-ವ್ಯೂ ವಿಡಿಯೋದಂತಹ ಫೀಚರ್ಸ್‌ಗಳನ್ನು ನೀಡಲಾಗಿದೆ.

ಇನ್ನು ಬ್ಯಾಟರಿ ಸಾಮರ್ಥ್ಯವನ್ನು ನೋಡುವುದಾದರೆ, ಒಪ್ಪೋ ರೆನೋ 8T 5G ಸ್ಮಾರ್ಟ್‌ಫೋನ್ 4,800mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದಕ್ಕೆ ತಕ್ಕಂತೆ 67W ಸೂಪರ್‌ವೂಕ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಕಂಪನಿ ಹೇಳುವ ಪ್ರಕಾರ ಈ ಫೋನ್ ಅನ್ನು ನೀವು 0 ರಿಂದ 100% ಬ್ಯಾಟರಿ ಚಾರ್ಜ್ ಮಾಡಲು, ಕೇವಲ 45 ನಿಮಿಷಗಳು ಸಾಕಂತೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿದೆ. ಉಳಿದಂತೆ ವೈ-ಫೈ 5 ಮತ್ತು ಬ್ಲೂಟೂತ್ 5.1 ವಾಯ‌ರ್’ಲೆಸ್ ಸಂಪರ್ಕವನ್ನು ಪಡೆದುಕೊಂಡಿದೆ.

ಈ ಸೂಪರ್ ಡೂಪರ್ ಸ್ಮಾರ್ಟ್’ಫೋನ್ 8GB RAM ಮತ್ತು 128GB ಸ್ಟೋರೇಜ್ ಅನ್ನು ಹೊಂದಿದೆ. ಹಾಗಾಗಿ ಈ ರೂಪಾಂತರಕ್ಕೆ 29,999ರೂ. ನಿಗದಿ ಮಾಡಲಾಗಿದೆ. ಈ ಫೋನ್ ಇದೇ ಬರುವ ಫೆಬ್ರವರಿ 10 ರಿಂದ ಪ್ರಸಿದ್ಧ ಇ ಕಾಮರ್ಸ್ ಜಾಲತಾಣವಾದ ಫ್ಲಿಪ್‌ಕಾರ್ಟ್, ಒಪ್ಪೋ ಸ್ಟೋರ್ ಮತ್ತು ಇತರ ರಿಟೇಲ್ ಸ್ಟೋರ್‌ಗಳ ಮೂಲಕ ಲಭ್ಯವಿದೆ. ಮೊದಲ ಸೇಲ್ ಪ್ರಯುಕ್ತ ಬಂಪರ್ ಆಫರ್ ಕೂಡಾ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ ಅನ್ನು ಕೋಟಕ್ ಬ್ಯಾಂಕ್, ಎಚ್‌ಡಿಎಫ್‌ಸಿ, ಯೆಸ್ ಬ್ಯಾಂಕ್ ಮತ್ತು ಎಸ್‌ಬಿಐ ಕಾರ್ಡ್‌ಗಳ ಮೂಲಕ ಖರೀದಿಸುವ ಗ್ರಾಹಕರು ಶೇ. 10 ರಷ್ಟು ತ್ವರಿತ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.

Leave A Reply

Your email address will not be published.