ಮಾಣಿ-ಮೈಸೂರು ರಾಜ್ಯ ಹೆದ್ದಾರಿ ಮರುಡಾಮರೀಕರಣ ಪೂರ್ಣ
ಸುಳ್ಯ: ಸಂಪಾಜೆ ಘಾಟ್ ಮೂಲಕ ಮಂಗಳೂರಿನಿಂದ ಮಡಿಕೇರಿ, ಮೈಸೂರು ಸಂಪರ್ಕಿಸುವ ಮಾಣಿ-ಮೈಸೂರು ರಾಜ್ಯ ಹೆದ್ದಾರಿ ಮಾಣಿಯಿಂದ ಸಂಪಾಜೆವರೆಗಿನ ಮರು ಡಾಮರೀಕರಣ ಕಾರ್ಯ ಪೂರ್ಣಗೊಂಡಿದೆ.
2 ತಿಂಗಳ ಹಿಂದೆ ಕಾಮಗಾರಿಯನ್ನು ಎರಡು ಹಂತದಲ್ಲಿ ಆರಂಭಿಸಲಾಗಿತ್ತು. ಮಾಣಿಯಿಂದ ಜಾಲ್ಸೂರು ವರೆಗಿನ ಕೆಲಸವನ್ನು ರಾಜ್ ಕಮಲ್ ಕನ್ಸ್ಟ್ರಕ್ಷನ್ ಅವರಿಗೆ ವಹಿಸಲಾಗಿತ್ತು ಮತ್ತು ಜಾಲ್ಸೂರ್ ನಿಂದ ಸಂಪಾಜೆ ವರಗಿನ ಕೆಲಸವನ್ನು ಟಿ.ಆರ್. ಇನ್ಫ್ರಾ ಪ್ರಾಜೆಕ್ಟ್ ಅವರಿಗೆ ವಹಿಸಲಾಗಿತ್ತು. ಇದೀಗ ಎರಡು ಹಂತದ ಕಾಮಗಾರಿ ಪೂರ್ಣಗೊಂಡಿದ್ದು ರಸ್ತೆ ಸಂಚಾರಕ್ಕೆ ಸುಸಜ್ಜಿತವಾಗಿದೆ.