ಬೆಂಗಳೂರು: ಜ್ಯೂನಿಯರ್‌ ಡ್ಯಾನ್ಸರ್‌ ಸಾವು, ವೈದ್ಯರ ವಿರುದ್ಧ ಕುಟುಂಬಸ್ಥರ ಗಂಭೀರ ಆರೋಪ

Share the Article

ಬೆಂಗಳೂರು : ವಾಂತಿ ಭೇದಿಯಿಂದ ಬಳಲುತ್ತಿದ್ದ ಜ್ಯೂನಿಯರ್‌ ಡ್ಯಾನ್ಸರ್‌, ಸಹಕಲಾವಿದೆಯೋರ್ವಳು ಸಾವು ಕಂಡಿದ್ದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಂಚನಾ (15) ಎಂಬ ಬಾಲಕಿ ಬೆಂಗಳೂರಿನ ಎಸ್‌.ಕೆ.ಹೆಲ್ತ್‌ಕೇರ್‌ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂಬ ಕಲಾವಿದೆಯ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಬಟ್ಟೆಯಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಿಂಚನಾ, ಎಸ್​ಎಸ್​ಎಲ್​ಸಿ ಓದುತ್ತಿದ್ದಳು. ಜೊತೆಗೆ ಕೆಲವು ಸಿನಿಮಾಗಳಲ್ಲಿ ಜ್ಯೂನಿಯರ್​ ಡ್ಯಾನ್ಸರ್, ಸಹಕಲಾವಿದೆ ಆಗಿ ಕೆಲಸ ಮಾಡಿದ್ದಳು. ಶೂಟಿಂಗ್​ ಇದ್ದಾಗ ದಿನದ ಲೆಕ್ಕದಲ್ಲಿ ಜ್ಯೂನಿಯರ್​ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದ ಸಿಂಚನಾ ಒಂದು ದಿನ ವಾಂತಿ, ಭೇದಿಯಿಂದ ಬಳಲಿದ್ದಾಳೆ. ಕೂಡಲೇ ಸಿಂಚನಾಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಆದರೆ ತೀವ್ರ ಆರೋಗ್ಯ ಹದಗೆಟ್ಟಿದ್ದು, ಸಿಂಚನಾ ಮೃತಪಟ್ಟಿದ್ದು ವೈದ್ಯರೇ ಇದಕ್ಕೆ ಕಾರಣ ಎಂದು ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಆದರೆ ವೈದ್ಯರು ಹೇಳುವ ಪ್ರಕಾರ, ಮತ್ತೊಂದೆಡೆ ಸಿಂಚನಾ ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ ಎಂದು ಎಸ್​.ಕೆ.ಹೆಲ್ತ್​ಕೇರ್​ ಆಸ್ಪತ್ರೆ ವೈದ್ಯರು ಹೇಳಿಕೆ ನೀಡಿದ್ದಾರೆ. ಈ ಕುರಿತು ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply