Infinix Laptop: ಇನ್ಫಿನಿಕ್ಸ್​ ಕಂಪೆನಿಯ ಹೊಸ ಲ್ಯಾಪ್​ಟಾಪ್​ ಭಾರತದಲ್ಲಿ ಬಿಡುಗಡೆ !

ದೇಶದ ಟೆಕ್ನಾಲಜಿ ಮಾರುಕಟ್ಟೆಯಲ್ಲಿ ಡಿವೈಸ್ ತಯಾರಕ ಕಂಪನಿಗಳು ಹೊಚ್ಚ ಹೊಸ ಮಾದರಿಯ ಸಾಧನಗಳನ್ನು ಪರಿಚಯಿಸುತ್ತಿದೆ. ಇದೀಗ ಜನಪ್ರಿಯ ಕಂಪನಿಯಾದ ಇನ್ಫಿನಿಕ್ಸ್​ ಕಂಪೆನಿಯು ತನ್ನ ಬ್ರಾಂಡ್​ನ ಅಡಿಯಲ್ಲಿ ಅತ್ಯಾಕರ್ಷಕ ಫೀಚರನ್ನೊಳಗೊಂಡ, ನವೀನ ಮಾದರಿಯ , ವಿನೂತನ ಶೈಲಿಯ ಲ್ಯಾಪ್ಟಾಪ್ ಅನ್ನು ಬಿಡುಗಡೆ ಮಾಡಿದ್ದು, ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಲು ತಯಾರಾಗಿದೆ. ಈ ಕಂಪನಿಯು ಭಾರತದಲ್ಲಿ ಡಿಸೆಂಬರ್​ 2021 ರಂದು ಲ್ಯಾಪ್​​ಟಾಪ್​ ಮಾರುಕಟ್ಟೆಯನ್ನು ಪ್ರಾರಂಭಿಸಿತು. ಈ ಹಿಂದೆ ಇನ್ಫಿನಿಕ್ಸ್​ ಕಂಪೆನಿ ಹಲವಾರು ಸ್ಮಾರ್ಟ್​​​ಫೋನ್​ಗಳನ್ನು, ಲ್ಯಾಪ್​ಟಾಪ್​ ಅನ್ನು ಬಿಡುಗಡೆ ಮಾಡಿದ್ದು, ಇದೀಗ ಭಾರತದಲ್ಲಿ ಮತ್ತೊಂದು ಲ್ಯಾಪ್​ಟಾಪ್​ ಅನ್ನು ಪರಿಚಯಿಸುತ್ತಿದೆ. ಇದರ ಬ್ಯಾಟರಿ ಫೀಚರ್ ಬೊಂಬಾಟೋ ಬೊಂಬಾಟ್. ಕೈಗೆಟುಕವ ದರದಲ್ಲಿ ಲಭ್ಯವಾಗುವ ಈ ಲ್ಯಾಪ್’ಟಾಪ್ ನ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.

ಇನ್ಫಿನಿಕ್ಸ್​ ಕಂಪೆನಿಯು ಜನಸಾಮಾನ್ಯರ ಕೈಗೆಟಕುವ ಬೆಲೆಯಲ್ಲಿ ಸ್ಮಾರ್ಟ್​​ಫೋನ್​ಗಳನ್ನು, ಲ್ಯಾಪ್​ಟಾಪ್​ಗಳನ್ನು ಬಿಡುಗಡೆ ಮಾಡುವ ಮೂಲಕ ಎಲ್ಲರನ್ನು ಆಕರ್ಷಿಸಿತ್ತು. ಸದ್ಯ ಇದೆ ಕಂಪೆನಿ ಈಗ
ಮತ್ತೊಂದು ಲ್ಯಾಪ್​ಟಾಪ್​’ನೊಂದಿಗೆ ಮಾರುಕಟ್ಟೆಗೆ ಎಂಟ್ರಿಯಾಗಿದೆ. ಈ ಹೊಸ ಲ್ಯಾಪ್ಟಾಪ್ ಅನ್ನು ಇನ್ಫಿನಿಕ್ಸ್​ ಝೀರೋ ಬುಕ್​​ ಅಲ್ಟ್ರಾ ಲ್ಯಾಪ್’ಟಾಪ್​ ಎಂದು ಗುರುತಿಸಲಾಗಿದೆ.

ಇನ್ಫಿನಿಕ್ಸ್​ ಕಂಪೆನಿಯ ಝೀರೋ ಬುಕ್ ಅಲ್ಟ್ರಾ ಲ್ಯಾಪ್‌ಟಾಪ್‌ 15.6 ಇಂಚು ಅಗಲವಾದ ಡಿಸ್‌ಪ್ಲೇಯನ್ನು ಹೊಂದಿದ್ದು, 16:9 ರ ಆಕಾರ ಅನುಪಾತದೊಂದಿಗೆ 1080 x 1920 ಪಿಕ್ಸೆಲ್‌ಗಳ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನು ಈ ಡಿಸ್​​ಪ್ಲೇಯು 400 ನಿಟ್ಸ್​ ಬ್ರೈಟ್‌ನೆಸ್‌ ಮೂಲಕ ಹೆಚ್ಚಿನ ಆಕರ್ಷಣೆಯನ್ನು ಪಡೆದುಕೊಂಡಿದೆ.178 ಡಿಗ್ರಿಗಳವರೆಗೆ ವೀಕ್ಷಣಾ ಫೀಚರ್ಸ್‌ ಅನ್ನು ಪಡೆದುಕೊಂಡಿರುವುದು ಮತ್ತಷ್ಟು ಅನುಕೂಲಕರ ವಿಷಯವಾಗಿದೆ. ಈ ಹೊಸ ಲ್ಯಾಪ್‌ಟಾಪ್‌ 12 ನೇ ಜನ್ ಇಂಟೆಲ್ ಕೋರ್ ಹೆಚ್​ ಸೀರಿಸ್​​ನ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, ಕೋರ್‌ i7 ಮತ್ತು ಕೋರ್‌ i5 ವೇರಿಯಂಟ್‌ನಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇನ್ನು ಇದರಲ್ಲಿರುವ ಎಲ್ಲಾ ವೇರಿಯಂಟ್‌ಗಳೂ ಸಹ 96EU ಐರಿಸ್ ಗ್ರಾಫಿಕ್ಸ್‌ನೊಂದಿಗೆ ಪ್ಯಾಕ್‌ ಆಗಿವೆ.

ಇನ್ಫಿನಿಕ್ಸ್​ ಝೀರೋ ಬುಕ್​ ಅಲ್ಟ್ರಾ ಲ್ಯಾಪ್​ಟಾಪ್​ 32ಜಿಬಿ ರ್‍ಯಾಮ್ ಹಾಗೂ 1ಟಿಬಿವರೆಗಿನ ಇಂಟರ್ನಲ್‌ ಸ್ಟೋರೇಜ್ ಸಾಮರ್ಥ್ಯವಿದ್ದು, ಇದರ ಜೊತೆಗೆ ಹೆಚ್ಚುವರಿ ಎಸ್​​ಎಸ್​​ಡಿ ಸ್ಲಾಟ್ ಅನ್ನು ಸಹ ಪಡೆದುಕೊಂಡಿದೆ. ಈ ಲ್ಯಾಪ್‌ಟಾಪ್‌ನಲ್ಲಿ ವಿಶಿಷ್ಟವಾದ ಹಾರ್ಡ್‌ವೇರ್ ಕೀಯನ್ನು ಸಹ ಸೇರ್ಪಡಿಸಿದ್ದಾರೆ. ಈ ಹೊಸ ಫೀಚರ್​ ಅನ್ನು ಇನ್ಫಿನಿಕ್ಸ್ ಓವರ್‌ಬೂಸ್ಟ್ ಸ್ವಿಚ್ ಎಂದು ಕೂಡಾ ಕರೆಯಲಾಗುತ್ತದೆ. ಈ ಸ್ವಿಚ್‌ಅನ್ನು ಲ್ಯಾಪ್‌ಟಾಪ್‌ನ ಬದಿಯಲ್ಲಿ ನೀಡಲಾಗಿದ್ದು, ಕೇವಲ ಒಂದು ಟಾಗಲ್‌ನೊಂದಿಗೆ ಗರಿಷ್ಠ ಕಾರ್ಯಕ್ಷಮತೆಯನ್ನು ಪಡೆದುಕೊಳ್ಳಬಹುದಾಗಿದೆ. ಈ ಹೊಸ ಲ್ಯಾಪ್ಟಾಪ್ ಮೂರು ವಿಧಾನಗಳನ್ನು ಹೊಂದಿದ್ದು, ಇಕೋ ಮೋಡ್, ಬಾಲ್ ಮೋಡ್ ಮತ್ತು ಓವರ್‌ಬೂಸ್ಟ್ ಮೋಡ್ ಎಂಬ ಆಯ್ಕೆಗಳಿಂದ ಕೂಡಿದೆ.

ಇನ್ನು ಈ ಹೊಸ ಲ್ಯಾಪ್ಟಾಪ್ ನ ಬ್ಯಾಟರಿ ಫೀಚರ್ಸ್ ಬಗ್ಗೆ ನೋಡುವುದಾದರೆ, ಇನ್ಫಿನಿಕ್ಸ್​ ಝೀರೋ ಬುಕ್​ ಅಲ್ಟ್ರಾ 70Whr ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದ್ದು, ಈ ಬ್ಯಾಟರಿಯನ್ನು ಒಮ್ಮೆ ಫುಲ್​ ಚಾರ್ಜ್‌ ಮಾಡಿದ್ರೆ ಬರೋಬ್ಬರಿ 10 ದಿನಗಳ ಕಾಲ ನಿರಂತರವಾಗಿ ಬಳಕೆ ಮಾಡಬಹುದಾಗಿದೆ. ಹಾಗೆಯೇ ಇದರೊಂದಿಗೆ 96W ಪೋರ್ಟಬಲ್ ಹೈಪರ್ ಚಾರ್ಜರ್ ಲಭ್ಯವಾಗಲಿದ್ದು, ಈ ಮೂಲಕ ಪೂರ್ಣ ಚಾರ್ಜ್‌ ಮಾಡಲು ಕೇವಲ ಎರಡು ಗಂಟೆಯ ಅವಧಿ ಸಾಕು.

ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್‌ಟಾಪ್‌ ನಾಲ್ಕು ಕಾನ್ಪಿಗರೇಶನ್​​ ಆಯ್ಕೆಯಲ್ಲಿ ಖರೀದಿ ಮಾಡಬಹುದಾಗಿದೆ. ಇದರಲ್ಲಿ ಕೋರ್ i5 ಕಾನ್ಫಿಗರೇಶನ್ ಆಯ್ಕೆ ಇರುವ ಹಾಗೂ 16ಜಿಬಿ ರ್‍ಯಾಮ್ ಮತ್ತು 512 ಜಿಬಿ ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಇರುವ ಲ್ಯಾಪ್‌ಟಾಪ್ ಬೆಲೆ 49,990 ರೂಪಾಯಿಗಳು ಎಂದು ನಿಗದಿ ಮಾಡಲಾಗಿದೆ. ಹಾಗೆಯೇ ಕೋರ್ i7 ಕಾನ್ಫಿಗರೇಶನ್ ಆಯ್ಕೆ ಇರುವ 16ಜಿಬಿ ರ್‍ಯಾಮ್ ಮತ್ತು 512ಜಿಬಿ ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯದ ಲ್ಯಾಪ್‌ಟಾಪ್‌ ಅನ್ನು 64,990 ರೂಪಾಯಿಗಳಲ್ಲಿ ಖರೀದಿಸಬಹುದು.

Leave A Reply

Your email address will not be published.