ಅತಿಕಡಿಮೆ ಬೆಲೆಗೆ ಅತ್ಯುತ್ತಮ ಸ್ಮಾರ್ಟ್ ಫೋನ್ ಲಭ್ಯ | ರೂ.7,000ದ ಒಳಗಿನ ಬಜೆಟ್ ಫ್ರೆಂಡ್ಲಿ ಸ್ಮಾರ್ಟ್ ಫೋನ್ ಗಳು ನಿಮಗಾಗಿ

ಸ್ಮಾರ್ಟ್ ಫೋನ್ ಗಳು ದುಬಾರಿ ಬೆಲೆಯದ್ದೂ ಇವೆ, ಹಾಗೇ ಅಗ್ಗದ ಬೆಲೆಯಲ್ಲೂ ಲಭ್ಯವಾಗುತ್ತವೆ. ನೀವು ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ಖರೀದಿಸಲು ಯೋಚಿಸಿದ್ದರೆ ಇಲ್ಲಿದೆ ನೋಡಿ ರೂ.7,000 ಒಳಗಿನ ಬೆಸ್ಟ್ ಸ್ಮಾರ್ಟ್ ಫೋನ್ ಗಳು. ಇವುಗಳು ಉತ್ತಮ ವೈಶಿಷ್ಟ್ಯದ ಜೊತೆಗೆ ಅತ್ಯುತ್ತಮ ಫೀಚರ್ ಹೊಂದಿದ್ದು, ಈ ಸ್ಮಾರ್ಟ್ ಫೋನ್ ಗಳು ಅಮೆಜಾನ್ ನಲ್ಲಿ ಲಭ್ಯವಾಗುತ್ತದೆ. ಇನ್ನು ಅತಿ ಕಡಿಮೆ ಬೆಲೆಗೆ ಲಭ್ಯವಾಗುವ ಆ ಸ್ಮಾರ್ಟ್ ಫೋನ್ ಗಳು ಯಾವುದು ಎಂದು ನೋಡೋಣ.

 

Micromax in 2C :

ಈ ಫೋನ್ 6.52 ಇಂಚಿನ IPS LCD ಡಿಸ್ಪ್ಲೇಯನ್ನು ಹೊಂದಿದ್ದು, ಬೆಝೆಲ್ ಲೆಸ್ ಡಿಸ್ಪ್ಲೇಯಲ್ಲಿ ಪಂಚ್ ಹೋಲ್ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ, ಈ ಸ್ಮಾರ್ಟ್ ಫೋನ್ 5000mAh Li-ion ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದೆ. 64GB ಸ್ಟೋರೇಜ್ ಇದ್ದು, ಮೆಮೊರಿ ಕಾರ್ಡ್ ಬಳಸಿ 256GB ವರೆಗೆ ವಿಸ್ತರಿಸಬಹುದು. MediaTek Helio P22 ಚಿಪ್ಸೆಟ್ನಲ್ಲಿ 2GHz ಕಾರ್ಟೆಕ್ಸ್ A55 ಕ್ವಾಡ್-ಕೋರ್ ಪ್ರೊಸೆಸರ್ ಅನ್ನು ಇರಿಸಲಾಗಿದ್ದು, 13MP ಮತ್ತು 2MP ಲೆನ್ಸ್ಗಳ ಡ್ಯುಯೆಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಈ ಸ್ಮಾರ್ಟ್ ಫೋನ್ ಬೆಲೆ ಕೇವಲ ₹6,999 ರೂ ಆಗಿದ್ದು, ನೀವು ಇದನ್ನು ಅಮೆಜಾನ್ ನಲ್ಲಿ ಖರೀದಿ ಮಾಡಬಹುದು.

ರಿಯಲ್ ಮಿ C2 :

ಈ ಸ್ಮಾರ್ಟ್ ಫೋನ್ 6.1 ಇಂಚಿನ IPS LCD ಡಿಸ್ಪ್ಲೇಯನ್ನು ಹೊಂದಿದೆ. ಡಿಸ್ಪ್ಲೇಯ ಮೇಲ್ಭಾಗದಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ v3 ಇದೆ. ಹಾಗೇ ಈ ಸ್ಮಾರ್ಟ್ ಫೋನ್ 4000mAh Li-ion ಬ್ಯಾಟರಿಯನ್ನು ಹೊಂದಿದೆ. 16GB ಸ್ಟೋರೇಜ್ ಇದ್ದು, ಇದನ್ನು ಮೆಮೊರಿ ಕಾರ್ಡ್ ಬಳಸಿ 256GB ವರೆಗೆ ವಿಸ್ತರಿಸಲು ಅವಕಾಶವಿದೆ. MediaTek Helio P22 ಚಿಪ್ಸೆಟ್ನಲ್ಲಿ 2GHz ಕಾರ್ಟೆಕ್ಸ್ A53 ಕ್ವಾಡ್-ಕೋರ್ ಪ್ರೊಸೆಸರ್ ಇದೆ. ಕ್ಯಾಮೆರಾ ಬಗ್ಗೆ ಹೇಳೋದಾದ್ರೆ 13MP ಮತ್ತು 2MP ಲೆನ್ಸ್ ಇರುವ ಡ್ಯುಯಲ್ ಕ್ಯಾಮೆರಾ. ಮುಂಭಾಗದಲ್ಲಿ 5MP ಲೆನ್ಸ್ ಇದೆ. ಈ ಸ್ಮಾರ್ಟ್ ಫೋನ್ ಅಮೆಜಾನ್ ನಲ್ಲಿ ಕೇವಲ ₹6,990 ರೂಗಳಿಗೆ ಲಭ್ಯವಾಗುತ್ತದೆ.

ಲಾವಾ X3 2022 :

ಲಾವಾ ಸ್ಮಾರ್ಟ್ಫೋನ್ 6.5 ಇಂಚಿನ IPS LCD ಹೊಂದಿದ್ದು, ಡಿಸ್ಪ್ಲೇಯು 81.76 % ಸ್ಕ್ರೀನ್-ಟು-ಬಾಡಿ ಇದೆ. ಈ ಸ್ಮಾರ್ಟ್ ಫೋನ್ ಮುಂಭಾಗದಲ್ಲಿ 5MP ಕ್ಯಾಮೆರಾ ಹಾಗೂ ಹಿಂಭಾಗದಲ್ಲಿ 8MP ಕ್ಯಾಮೆರಾವನ್ನು ಹೊಂದಿದೆ. 3GB RAM ಮತ್ತು MediaTek Helio A22 ಚಿಪ್ಸೆಟ್ನೊಂದಿಗೆ ಕಾನ್ಫಿಗರ್ ಮಾಡಲಾಗಿದ್ದು, PowerVR GE8300 ಜಿಪಿಯುನೊಂದಿಗೆ ಈ ಫೋನ್ ಬರುತ್ತದೆ. ಹಾಗೇ 2GHz ವೇಗದಲ್ಲಿ ಕಾರ್ಯನಿರ್ವಹಿಸುವ ಆಕ್ಟಾ-ಕೋರ್ ಕಾರ್ಟೆಕ್ಸ್ A53 ಪ್ರೊಸೆಸರ್ ಇದ್ದು, 4000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇದರ ಬೆಲೆ ಕೂಡ ₹6,999 ರೂ ಆಗಿದೆ.

Samsung Galaxy A03 Core :

6.5 ಇಂಚಿನ PLS TFT LCD ಡಿಸ್ಪ್ಲೇಯನ್ನು ಹೊಂದಿರುವ ಈ ಸ್ಮಾರ್ಟ್ ಫೋನ್ ಅದ್ಭುತ ಫೀಚರ್ ನೊಂದಿಗೆ ಲಭ್ಯವಾಗಲಿದೆ. ಒಂದೇ 8MP f/2.0 ಪ್ರೈಮರಿ ಕ್ಯಾಮೆರಾವನ್ನು LED ಫ್ಲ್ಯಾಶ್ ಮತ್ತು ಆಟೋಫೋಕಸ್ನೊಂದಿಗೆ ಹಿಂಭಾಗದಲ್ಲಿ ಇರಿಸಿದೆ. ಮುಂಭಾಗದಲ್ಲಿ 5MP f/2.2 ಸೆಲ್ಫಿ ಕ್ಯಾಮೆರಾ ಇದ್ದು, 2GB RAM ಮತ್ತು ಆಕ್ಟಾ-ಕೋರ್ ಕಾರ್ಟೆಕ್ಸ್ A55 ಪ್ರೊಸೆಸರ್ ಅನ್ನು 1.6GHz ನ ಅತ್ಯಧಿಕ ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ಸ್ಯಾಮ್ಸಂಗ್ ಸ್ಮಾರ್ಟ್ಫೋನ್ನಲ್ಲಿ ಬೃಹತ್ 5000mAh Li-ion ಬ್ಯಾಟರಿ ಸಾಮರ್ಥ್ಯ ಇರಿಸಿದೆ. ಈ ಫೋನ್ ಕೇವಲ ₹6,990 ರೂಗಳಿಗೆ ಲಭ್ಯವಾಗಲಿದೆ.

Tecno Spark Go 2022 :

ಇದು 6.52 ಇಂಚಿನ IPS LCD ಅನ್ನು ಹೊಂದಿದ್ದು, ಬೆಜೆಲ್-ಲೆಸ್ ಡಿಸ್ಪ್ಲೇಯು ವಾಟರ್ಡ್ರಾಪ್ ನಾಚ್ನೊಂದಿಗೆ ಬರುತ್ತದೆ. ಇದರ 13MP f/1.8 ಮುಖ್ಯ ಶೂಟರ್ನಿಂದ ಕೂಡಿದ್ದು, ಎಲ್ಇಡಿ ಫ್ಲ್ಯಾಶ್ನೊಂದಿಗೆ ಮುಂಭಾಗದಲ್ಲಿ 8MP ಪ್ರೈಮರಿ ಕ್ಯಾಮೆರಾ ಇದೆ. ಆಕ್ಟಾ-ಕೋರ್ ಪ್ರೊಸೆಸರ್ ಅನ್ನು 1.8GHz ನ ಅತ್ಯಧಿಕ ವೇಗದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಪಡೆದಿದೆ. 2GB RAM ಹೊಂದಿದೆ. Tecno Spark Go 2022 ಅನ್ನು 5000mAh Li-po ಮಾದರಿಯ ಸೆಲ್ನೊಂದಿಗೆ ಲೋಡ್ ಮಾಡಲಾಗಿದೆ. ಅಮೆಜಾನ್ ಸೇಲ್ ನಲ್ಲಿ ಕೇವಲ ₹6,999 ರೂ ಲಭ್ಯ.

Leave A Reply

Your email address will not be published.