Home Entertainment ಕುತ್ತಿಗೆ ವರೆಗೂ ಜೀನ್ಸ್ ಪ್ಯಾಂಟ್ ತೊಟ್ಟು ಫೋಟೋ ಫೋಸ್ ನೀಡಿದ ಉರ್ಫಿ! ಉಲ್ಟಾ ಪಲ್ಟಾ ಮಾಡ್ಕೋ...

ಕುತ್ತಿಗೆ ವರೆಗೂ ಜೀನ್ಸ್ ಪ್ಯಾಂಟ್ ತೊಟ್ಟು ಫೋಟೋ ಫೋಸ್ ನೀಡಿದ ಉರ್ಫಿ! ಉಲ್ಟಾ ಪಲ್ಟಾ ಮಾಡ್ಕೋ ಬಂದೋಳ ಕಾಲೆಳೆದ್ರು ನೆಟ್ಟಿಗರು!

Hindu neighbor gifts plot of land

Hindu neighbour gifts land to Muslim journalist

ತಾನು ಧರಿಸುವ ಬಟ್ಟೆಗಳಿಂದಲೇ ಸದಾ ಸುದ್ದಿಯಲ್ಲಿರುವ ಉರ್ಫಿ ಜಾದವ್ ಅವರು ಯಾವ ರೀತಿಯ ಬಟ್ಟೆ ಧರಿಸುತ್ತಾರೆ ಎಂಬುದನ್ನು ಕಲ್ಪನೆ ಮಾಡಲು ಕೂಡ ಸಾಧ್ಯವಿಲ್ಲ. ವಿಚಿತ್ರವಾಗಿ ಡ್ರೆಸ್ ತೊಟ್ಟು ಫೋಟೋ, ವಿಡಿಯೋವನ್ನು ಶೇರ್ ಮಾಡ್ತಾರೆ. ಇದೀಗ ಮತ್ತೊಂದು ವಿಚಿತ್ರವಾದ ಡ್ರೆಸ್ ನೊಂದಿಗೆ ಫೋಟೋಗೆ ಫೋಸ್ ನೀಡಿ, ಎಲ್ಲವೂ ಉಲ್ಟಾ ಪಲ್ಟಾ ಅನೋ ಹಾಗೆ ಮಾಡಿಬಿಟ್ಟಿದ್ದಾರೆ. ಮತ್ತೆ ನೆಟ್ಟಿಗರ ಬಾಯಿಗೆ ಬಿಸಿ ಬಿಸಿ ಸುದ್ದಿ ಕೊಟ್ಟಿದ್ದಾರೆ.

ಗೋಣಿ ಚೀಲ, ಪ್ಲಾಸ್ಟಿಕ್ ಕವರ್, ನೋಟು, ಹೂವುಗಳು ಎಲ್ಲವೂ ಆಯ್ತು ಇದೀಗ ಪ್ಯಾಂಟ್​ನನ್ನು ಟಾಪ್ ಮಾಡಿಕೊಂಡು ವಿಚಿತ್ರವಾಗಿ ಕಾಣಿಸಿಕೊಂಡಿದ್ದಾರೆ. ಉರ್ಫಿ ನೋಡ್ತಿದ್ದಂತೆ ಜನರು ಬೆಚ್ಚಿಬಿದ್ದು, ಬಳಿಕ ಬಿದ್ದು ಬಿದ್ದು ನಕ್ಕಿದ್ದಾರೆ. ಜೀನ್ಸ್ ಪ್ಯಾಂಟನ್ನೇ ಟಾಪ್ ಮಾಡಿಕೊಂಡು ಕ್ಯಾಮೆರಾ ಕಣ್ಣಿಗೆ ಉರ್ಫಿ ಪೋಸ್ ನೀಡಿದ್ದಾರೆ. ನಟಿಯ ಹೊಸ ಲುಕ್ ಎಲ್ಲೆಡೆ ವೈರಲ್ ಆಗುತ್ತಿದೆ. ನಟಿಯ ಅವತಾರಗಳು ಅದೆಷ್ಟೋ ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ. ಹಾಗೆಯೇ ಅನೇಕರ ಆಕ್ರೋಶಕ್ಕೂ ಕಾರಣವಾಗಿದೆ. ಇದೀಗ ಪಬ್ಲಿಕ್‌ ಸ್ಥಳದಲ್ಲಿ ಜೀನ್ಸ್‌ ಪ್ಯಾಂಟನ್ನೇ ಟಾಪ್‌ ಮಾಡಿಕೊಂಡು ಬಂದಿದ್ದಾರೆ.

ಬಿಗ್ ಬಾಸ್ ಒಟಿಟಿಯಿಂದ ಫೇಮಸ್ ಆಗಿರೋ ಉರ್ಫಿ ಜಾವೇದ್ ಸೋಶಿಯಲ್​ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ತನ್ನ ಹೊಸ ಹೊಸ ವಿಡಿಯೋ, ಫೋಟೋಗಳ ಮೂಲಕ ಸಂಚಲನ ಮೂಡಿಸಿದ್ದಾರೆ. ಕಾರಿನಿಂದ ಉರ್ಫಿ ಕೆಳಗಿಳಿಯುತ್ತಿದ್ದಂತೆ ನೆರೆದಿದ್ದವರು ಶಾಕ್ ಆದ್ರೂ ಇದೇನಪ್ಪಾ ಉರ್ಫಿ ಜಾವೇದ್ ಕಾಲಿಗೆ ಹಾಕೋ ಜೀನ್ಸ್‌ನ್ನೇ ಟಾಪ್ ಮಾಡಿಕೊಂಡಿದ್ದಾರೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ರು. ಜೊತೆಗೆ ಇದೆಲ್ಲಾ ಅವತಾರ ಬೇಕಾ ಅಂತಾ ನಟಿಯ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ.

ನನ್ನ ವಿಚಿತ್ರ ಬಟ್ಟೆಗಳನ್ನು ನೋಡಿ ಮುಂಬೈನಲ್ಲಿ ಮುಸ್ಲಿಮರು ನನಗೆ ಮನೆ ಬಾಡಿಗೆ ಕೊಡಲ್ಲ, ಇತ್ತ ಹಿಂದೂಗಳು ನಾನು ಮುಸ್ಲಿಂ ಎಂದು ಮನೆ ಕೊಡಲ್ಲ ಎಂದು ಉರ್ಫಿ ಅಳಲು ತೋಡಿಕೊಂಡಿದ್ರು. ಆದರೂ ಮತ್ತೂ ಅದೇ ಚಾಳಿಯನ್ನು ಅವರು ಮುಂದುವರೆಸುತ್ತಿರುವುದು ವಿಚಿತ್ರವಾಗಿದೆ.