Home Breaking Entertainment News Kannada ಮೊದಲ ದಿನವೇ ಕೆಜಿಎಫ್-2 ದಾಖಲೆ ಬ್ರೇಕ್ ಮಾಡಿದ ‘ಪಠಾಣ್’! ಭರ್ಜರಿ ಎಂಟ್ರಿಯೊಂದಿಗೆ ಮತ್ತೆ ಅಬ್ಬರಿಸಿದ ಬಾಲಿವುಡ್...

ಮೊದಲ ದಿನವೇ ಕೆಜಿಎಫ್-2 ದಾಖಲೆ ಬ್ರೇಕ್ ಮಾಡಿದ ‘ಪಠಾಣ್’! ಭರ್ಜರಿ ಎಂಟ್ರಿಯೊಂದಿಗೆ ಮತ್ತೆ ಅಬ್ಬರಿಸಿದ ಬಾಲಿವುಡ್ ಬಾದ್ ಷಾ!!

Hindu neighbor gifts plot of land

Hindu neighbour gifts land to Muslim journalist

ಆರಂಭದಿಂದಲೂ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್’ ಸಿನಿಮಾ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಆದರೆ ಇದರ ವಿವಾದಗಳನ್ನು ಕಂಡ ಹಲವರು ‘ಪಠಾಣ್’ ಎಡವುದು ಗ್ಯಾರಂಟಿ ಎಂದು ಭಾವಿಸಿದ್ದರು. ಆದರೆ ಈ ಲೆಕ್ಕಾಚಾರವನ್ನು ಉಲ್ಟಾ ಮಾಡಿರುವ ಚಿತ್ರ ಸಕ್ಕತ್ ಧೂಳೆಬ್ಬಿಸಿ, ಬಾಕ್ಸ್ ಆಫೀಸ್ನಲ್ಲಿ ದಾಖಲೆ ನಿರ್ಮಿಸಿದೆ.

ಹಲವು ವರ್ಷಗಳಿಂದ ಸತತ ಸೋಲು ಕಂಡಿದ್ದ ಶಾರುಖ್ ಖಾನ್ ಅವರು ಈಗ ಪಠಾಣ್ ಮೂಲಕ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ್ದು, ತಾವು ಬಾಕ್ಸಾಫೀಸ್ ಸುಲ್ತಾನ ಎಂಬುದನ್ನು ಮತ್ತೆ ಪ್ರೂವ್ ಮಾಡಿದ್ದಾರೆ. ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಮೊದಲ ದಿನವೇ ನಿರೀಕ್ಷೆಗೂ ಮೀರಿ ಕಲೆಕ್ಷನ್ ಮಾಡುತ್ತಿದೆ. ಚಿತ್ರವು ರಿಲೀಸ್ ಆದ ಮೊದಲ ದಿನವೇ ಯಶ್ ನಟನೆಯ ಕೆಜಿಎಫ್ 2′ ಚಿತ್ರದ ಹಿಂದಿ ವರ್ಷನ್ ಮೊದಲ ದಿನ ಮಾಡಿದ್ದ ದಾಖಲೆಯನ್ನು ಮುರಿದಿದೆ!ಪಠಾಣ್’ ಚಿತ್ರ ಫಸ್ಟ್ ಡೇ ಮತ್ತು ಎರಡನೇ ದಿನವೂ ಸೇರಿ ಒಟ್ಟು 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ.

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2′ ಸಿನಿಮಾದ ಹಿಂದಿ ವರ್ಷನ್‌ಗೆ ಉತ್ತರ ಭಾರತದಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಆ ಸಿನಿಮಾ ಮೊದಲ ದಿನ 53.95 ಕೋಟಿ ರೂಪಾಯಿ ಗಳಿಸಿ ಬೀಗಿತ್ತು. ಈಗಪಠಾಣ್’ ಸಿನಿಮಾ ಮೊದಲ ದಿನ 55 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಗಮನ ಸೆಳೆದಿದೆ. ದೇಶಾದ್ಯಂತ ಈ ಚಿತ್ರದ ಸದ್ದು ಜೋರಾಗಿದೆ. ಶಾರುಖ್ ಖಾನ್ ಕೆರಿಯರ್‌ನಲ್ಲಿ ಮತ್ತೆ ದೊಡ್ಡ ಗೆಲುವು ಪಡೆದಿದ್ದಾರೆ. ಅವರ ಗೆಲುವು ಅಭಿಮಾನಿಗಳಿಗೆ ಖುಷಿ ನೀಡಿದೆ. ಶಾರುಖ್‌ ಪಠಾಣ್‌ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಪಠಾಣ್ ಸಿನಿಮಾ ಖ್ಯಾತಿ ವಿಶ್ವದಾದ್ಯಂತ ಎಲ್ಲೆಡೆ ಹರಡಿದ್ದು, ಎಲ್ಲರ ಕಣ್ಣು ಚಿತ್ರದ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ನೆಟ್ಟಿತ್ತು. ಕಳೆದ ವರ್ಷ ಸಾಲು ಸಾಲು ಬಾಲಿವುಡ್ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಸೋಲುತ್ತಿದ್ದವು, ಆದರೀಗ ವರ್ಷದ ಆರಂಭದಲ್ಲೇ ರಿಲೀಸ್ ಆದ ಶಾರುಖ್ ಪಠಾಣ್ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಪಠಾಣ್ ಸಿನಿಮಾ ಬಗ್ಗೆ ಒಳ್ಳೆಯ ವಿಮರ್ಶೆಗಳೇ ಕೇಳಿ ಬರುತ್ತಿವೆ. ಚಿತ್ರ ವಿಮರ್ಶಕ ತರಣ್ ಆದರ್ಶ್ ಅವರು ‘ಪಠಾಣ್’ ಚಿತ್ರಕ್ಕೆ 4.5 ರೇಟಿಂಗ್ ನೀಡಿದ್ದಾರೆ. ಚಿತ್ರವನ್ನು ಬ್ಲಾಕ್ ಬಾಸ್ಟರ್ ಎಂದು ಕರೆದಿದ್ದಾರೆ. ಪಠಾಣ್ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ನೋಡಿ ಎಲ್ಲರೂ ಹುಬ್ಬೇರಿಸುವಂತೆ ಆಗಿದೆ.

ಚಿತ್ರದಲ್ಲಿ ಸಲ್ಮಾನ್ ಖಾನ್ ಅವರ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗೆ ಇಷ್ಟವಾಗಿದೆ. ಸಲ್ಮಾನ್ ಖಾನ್ ಸಣ್ಣ ಪಾತ್ರಕ್ಕೂ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ‘ಪಠಾಣ್’ ಸಿನಿಮಾದ ಕಲೆಕ್ಷನ್ ಏನೇ ಆದ್ರೂ ಈ ಸಿನಿಮಾ ಶಾರುಖ್ ಕೆರಿಯರ್ಗೆ ದೊಡ್ಡ ಬ್ರೇಕ್ ನೀಡಿವುದಂತೂ ಸತ್ಯವಾದ ಮಾತು.