Astrology Tips: ಮನೆಯ ಈ ದ್ವಾರದಿಂದ ಹಲ್ಲಿ ಬಂದರೆ ಅಷ್ಟೈಶ್ವರ್ಯ ನಿಮ್ಮ ಪಾಲಿಗೆ ಖಂಡಿತ!
ಹಲ್ಲಿಗಳು ತುಂಬಾ ವಿಷಪೂರಿತವಾದುದು. ಆದ್ದರಿಂದ ಯಾರೇ ಆದರೂ ಅದರ ಸಂಪರ್ಕಕ್ಕೆ ಬಂದ ಕೂಡಲೇ ಸ್ನಾನ ಮಾಡಬೇಕು. ಆದರೆ ಹಲ್ಲಿ ದೇಹದ ಕೆಲವು ಭಾಗಗಳ ಮೇಲೆ ಬೀಳುವುದು ತುಂಬಾ ಶುಭ ಎಂದು ಪರಿಗಣಿಸಲಾಗುತ್ತದೆ. ಹಲ್ಲಿ ದೇಹದ ಕೆಲವು ಭಾಗಗಳ ಮೇಲೆ ಬೀಳುವುದು ಶುಭವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ, ಕೆಲವು ಭಾಗಗಳಲ್ಲಿ ಹಲ್ಲಿ ಬೀಳುವುದನ್ನು ಅಶುಭ ಎಂದು ಹೇಳಲಾಗುತ್ತದೆ.
ಕೆಲವು ಕಡೆ ಇದನ್ನು ಗೋಡೆ ಬ್ರಾಹ್ಮಣ ಎಂದು ಕೂಡ ಕರೆಯುತ್ತಾರೆ. ಹಲ್ಲಿ ಎಂದಾಕ್ಷಣ ಮೊದಲು ನೆನಪಿಗೆ ಬರುವುದೇ ಶಕುನ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಲ್ಲಿ ಕಾಣುವುದು ಹಲವು ವಿಷಯಗಳ ಸಂಕೇತ. ಒಂದೊಂದು ಸ್ಥಳದಲ್ಲಿ ಹಲ್ಲಿ ಕಾಣುವುದು ಒಂದೊಂದು ವಿಷಯದ ಮುನ್ಸೂಚನೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಮನೆ ಯ ಒಳಗಡೆ ಹಲ್ಲಿ ಕಾಣಿಸಿಕೊಂಡರೆ ಕೆಲವರು ಹೆದರುತ್ತಾರೆ, ಇನ್ನೂ ಕೆಲವರು ಇದನ್ನು ಮನೆಯಿಂದ ಹೊರಗೆ ಹಾಕುವ ಪ್ರಯತ್ನ ಮಾಡುತ್ತಾರೆ.
ಹಲ್ಲಿಗಳಿಗೆ ಸಂಬಂಧಿಸಿದ ಶುಭ ಮತ್ತು ಅಶುಭ ಚಿಹ್ನೆಗಳ ಬಗ್ಗೆ ತಿಳಿಯೋಣ. ಹಲ್ಲಿ ಮನೆಯ ನಿಶ್ಚಿತ ಪ್ರದೇಶಗಳಲ್ಲಿ ಕಾಣಿಸಿಕೊಂಡರೆ ಶುಭವಾಗುತ್ತೆ. ಕೆಲವು ಮಂದಿ ಇದನ್ನು ಲಕ್ಷ್ಮಿಯ ರೂಪದಲ್ಲಿ ಕೂಡ ಕಾಣುತ್ತಾರೆ. ಮನೆಯ ಮುಖ್ಯಬಾಗಿಲಿನಲ್ಲಿ ಕಾಣಿಸಿಕೊಳ್ಳುವ ಹಲ್ಲಿ ಅನೇಕ ರೀತಿಯ ಸಂಕೇತಗಳನ್ನು ನೀಡುತ್ತದೆ. ಹಲ್ಲಿ ಹೀಗೆ ಮುಖ್ಯ ಬಾಗಿಲಿನಲ್ಲಿ ಕಾಣಿಸಿಕೊಳ್ಳುವುದು ಮುಂದಿನ ದಿನಗಳ ಶುಭ ಮತ್ತು ಅಶುಭದ ಮುನ್ಸೂಚನೆಯಾಗಿದೆ.
- ಹೊಸ ಮನೆ ಪ್ರವೇಶಿಸುವಾಗ ಹಲ್ಲಿ ಕಂಡರೆ ಅದು ಒಳ್ಳೆಯ ಸಂಕೇತವಲ್ಲ. ಇದು ಹೊಸ ಮನೆಯಲ್ಲಿ ಏನೋ ಕೆಟ್ಟದಾಗುವುದರ ಮುನ್ಸೂಚನೆಯಾಗಿದೆ.
- ಮನೆಯ ಮುಖ್ಯ ಬಾಗಿಲಿನಿಂದ ಹಲ್ಲಿ ಬರುವುದು ನಿಮ್ಮ ಕಣ್ಣಿಗೆ ಬಿದ್ರೆ ಸದ್ಯದಲ್ಲಿಯೇ ನಿಮಗೆ ಧನಲಾಭವಾಗುತ್ತದೆ. ಯಾರೋ ನಿಮಗೆ ಕೊಡಬೇಕಾಗಿದ್ದ ಹಣ ಶೀಘ್ರವೇ ನಿಮ್ಮ ಕೈಸೇರುತ್ತದೆ. ಹಲ್ಲಿ ಹೀಗೆ ಕಾಣಿಸುವುದರಿಂದ ಮನೆಯ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ.
- ನಿಮ್ಮ ಮನೆಯ ಬಾಗಿಲಲ್ಲಿ ಎರಡು ಹಲ್ಲಿಗಳು ಇರುವುದು ನಿಮಗೆ ಕಾಣಿಸಿದರೆ ಅದು ಕೂಡ ಶುಭ ಸಂಕೇತವಾಗಿದೆ. ಎರಡು ಹಲ್ಲಿಗಳು ಕಾಣಿಸುವುದು ಸುಖ ದಾಂಪತ್ಯದ ಮುನ್ಸೂಚನೆಯಾಗಿದೆ. ನಿಮ್ಮ ದಾಂಪತ್ಯದಲ್ಲಿ ಬಿರುಕು ಮೂಡಿದ್ದರೆ, ಅಂತಹ ಸಂಬಂಧಗಳು ಒಂದಾಗುತ್ತವೆ ಎಂಬುದು ಇದರ ಸೂಚನೆಯಾಗಿದೆ.
- ಮನೆಯ ಮುಖ್ಯ ಬಾಗಿಲಲ್ಲಿ ಹಲ್ಲಿ ಸಾಯುವುದು ಅಶುಭದ ಸಂಕೇತವಾಗಿದೆ. ಹೀಗೆ ಸತ್ತು ಬಿದ್ದ ಹಲ್ಲಿ ಕಾಣಿಸಿದರೆ ನಿಮ್ಮ ಮನೆಗೆ ಸದ್ಯದಲ್ಲಿಯೇ ಯಾವುದೋ ಕಷ್ಟ ಬರಲಿದೆ ಎಂದರ್ಥ. ನಿಮ್ಮ ಮನೆಯವರಿಗೆ ಅಥವಾ ನಿಮ್ಮ ಆಪ್ತರಿಗೆ ಅನಾರೋಗ್ಯ ಉಂಟಾಗುವ ಸೂಚನೆಯನ್ನು ಕೂಡ ಇದು ನೀಡುತ್ತದೆ.
- ನಿಮ್ಮ ಮನೆಯ ಮೇನ್ ಡೋರ್ ನಲ್ಲಿ ಹೀಗೆ ಬಾಲ ಕಳಚಿದ ಹಲ್ಲಿ ಕಾಣಿಸಿದರೆ ಅದು ಒಳ್ಳೆಯ ಸೂಚನೆಯಲ್ಲ. ಇದು ನಿಮ್ಮ ಶತ್ರುಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸುತ್ತಾರೆ ಎಂಬ ನಕಾರಾತ್ಮಕ ಸಂಕೇತವಾಗಿದೆ. ಇದರಿಂದ ನಿಮಗೆ ಧನಹಾನಿ ಕೂಡ ಆಗಬಹುದು.
- ಯಾತ್ರೆಗೆ ಹೊರಡುವ ಸಮಯದಲ್ಲಿ ಎಲ್ಲರೂ ಶುಭವನ್ನೇ ಹಾರೈಸುತ್ತಾರೆ. ಅಂತಹ ಸಮಯದಲ್ಲಿ ಹಲ್ಲಿ ಕಾಣಿಸಿಕೊಂಡರೆ ನೀವು ಭಯಪಡಬೇಕಾಗಿಲ್ಲ. ಏಕೆಂದರೆ ಇದರಿಂದ ಯಾತ್ರೆ ಸುಗಮವಾಗುತ್ತದೆ. ಆದರೆ ಯಾತ್ರೆಗೆ ಹೋಗುವಾಗ ಸತ್ತ ಹಲ್ಲಿಯನ್ನು ನೋಡಿದರೆ ಅದು ಅಶುಭವಾಗಿದೆ.
- ಹಲ್ಲಿಯು ಬಾಗಿಲ ಸಂಧಿಯಲ್ಲಿ ಸಿಕ್ಕಿ ಸತ್ತು ಹೋದರೆ, ಅದು ದುರದೃಷ್ಟದ ಸಮಯ ಎದುರಾಗುತ್ತಿರುವುದರ ಸೂಚನೆಯಾಗಿದೆ.
ಹೀಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಲ್ಲಿ ಕಾಣುವುದು ಹಲವು ವಿಷಯಗಳ ಸಂಕೇತವಾಗಿದ್ದು ಒಂದೊಂದು ಸ್ಥಳದಲ್ಲಿ ಹಲ್ಲಿ ಕಾಣುವುದು ಒಂದೊಂದು ವಿಷಯದ ಮುನ್ಸೂಚನೆ ಎಂದು ಜ್ಯೋತಿಷಿಗಳು ತಿಳಿಸಿದ್ದಾರೆ.