Anti Ageing Foods For Younger Skin: ಸಣ್ಣ ಪ್ರಾಯದಲ್ಲೇ ಮುಖದ ಮೇಲೆ ಸುಕ್ಕು ಕಾಣುತ್ತಿದೆಯೇ ? ದಿನನಿತ್ಯದ ಆಹಾರದಲ್ಲಿ ಇದನ್ನು ಸೇವಿಸಿ, ಯಂಗ್‌ ಆಗಿರಿ

ನಮ್ಮ ದೇಹವು ಪ್ರತಿ ಸೆಕೆಂಡಿಗೆ ಬದಲಾವಣೆಯನ್ನು ಪಡೆಯುತ್ತಾ ಇರುತ್ತದೆ. ಸುಮಾರು ಅರವತ್ತನೆಯ ವಯಸ್ಸಿನಲ್ಲಿ ಈ ಬದಲಾವಣೆಗಳಿಗೊಂದು ಕೊನೆಂಬಂತೆ ವೃದ್ಧಾಪ್ಯದ ಚಿಹ್ನೆಗಳು ಗಾಢವಾಗತೊಡಗುತ್ತವೆ. ವಯಸ್ಸಾಗುತ್ತ ಹೋದಂತೆ ಮುಖದ ಮೇಲೆ ನೆರಿಗೆ ಬೀಳುವುದು, ಚರ್ಮ ಸುಕ್ಕುಗಟ್ಟುವುದು ಮಾಮೂಲಿ. 40 ವರ್ಷ ವಯಸ್ಸಿನ ನಂತರ ಈ ರೀತಿಯ ಸಮಸ್ಯೆ ಆಗುವುದು ಸಾಮಾನ್ಯ. ಆದರೆ, ಇತ್ತೀಚಿನ ದಿನಗಳಲ್ಲಿ 20 ರಿಂದ 30 ವರ್ಷಕ್ಕೆ ಚರ್ಮದ ಮೇಲೆ ನೆರಿಗೆಯಾಗುವುದು, ಸುಕ್ಕುಗಟ್ಟುವ ಸಮಸ್ಯೆಯು ಶುರುವಾಗಿದೆ. ಪ್ರೊಟಿನ್ ಸಮೂಹವಾಗಿರುವ ಕೊಲಾಜನ್ ದೇಹದಲ್ಲಿ ಕಡಿಮೆಯಾದರೆ ಇಂಥಹ ಸಮಸ್ಯೆ ಹೆಚ್ಚು ಕಾಡುತ್ತದೆ. ಮುಖದ ಮೇಲೆ ಕಾಣುವ ಸುಕ್ಕುಗಳನ್ನು ನಿವಾರಿಸಲು ದುಬಾರಿ ಸೌಂದರ್ಯವರ್ಧಕಗಳು ಮಾತ್ರವಲ್ಲ, ಆಂಟಿ ಏಜಿಂಗ್ ಆಹಾರಗಳ ಸೇವನೆಯಿಂದಲೂ ಕೂಡ ಸುಲಭವಾಗಿ ನಿವಾರಿಸಬಹುದು. ಹಾಗಾದರೆ ಬನ್ನಿ, ಮುಖದ ಸುಕ್ಕು ನಿವಾರಿಸಿ ಸದಾ ಯಂಗ್ ಲುಕ್ ನೀಡುವ ಆಹಾರಗಳ ಬಗ್ಗೆ ತಿಳಿದುಕೊಳ್ಳೋಣ.

ಚೆರ್ರಿ ಹಣ್ಣು:- ಇವುಗಳಲ್ಲಿ ಆಂಟಿ ಆಕ್ಸಿಡೆಂಟುಗಳು ಉತ್ತಮ ಪ್ರಮಾಣದಲ್ಲಿವೆ ಹಾಗೂ ತ್ವಚೆಯ ಮೇಲೆ ಅದ್ಭುತವಾದ ಪರಿಣಾಮವನ್ನು ಉಂಟುಮಾಡುತ್ತವೆ. ಅಧ್ಯಯನದ ಪ್ರಕಾರ ಇದರಲ್ಲಿ ಹದಿನೇಳು ಬಗೆಯ ಆಂಟಿ ಆಕ್ಸಿಡೆಂಟುಗಳಿವೆ. ಇವು ಚರ್ಮಕ್ಕೆ ಹಾನಿ ಎಸಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ಧ ಹೋರಾಡುತ್ತವೆ ಹಾಗೂ ವಯಸ್ಸಿಗೂ ಮುನ್ನ ಚರ್ಮ ಸೆಳೆತ ಕಳೆದು ಕೊಳ್ಳುವುದನ್ನು ತಡೆಯುತ್ತದೆ. ಇದಕ್ಕಾಗಿ ತಾಜಾ ಚೆರ್‍ರಿ ಹಣ್ಣುಗಳ ರಸವನ್ನು ಮುಖಕ್ಕೆ ಹಚ್ಚಿಕೊಂಡು ಒಣಗಲು ಬಿಡಿ. ಜೊತೆಗೇ ಇದರ ರಸವನ್ನೂ ಆಗಾಗ ಸೇವಿಸುತ್ತಿರಿ.

ಪಪ್ಪಾಯ:- ಉತ್ಕರ್ಷಣ ನಿರೋಧಕ ಆಹಾರವಗಿರುವ ಪರಂಗಿ ಹಣ್ಣಿನಲ್ಲಿ ಸಾಕಷ್ಟು ಪ್ರಮಾಣದ ಖನಿಜಗಳು ಕಂಡು ಬರುತ್ತದೆ. ಪರಂಗಿ ಹಣ್ಣಿನಲ್ಲಿ ಸಹ ವಿಟಮಿನ್ ಎ ಅಂಶ ಹೆಚ್ಚಾಗಿ ಕಂಡುಬರುತ್ತದೆ. ಕಣ್ಣುಗಳಿಗೆ ಸಾಕಷ್ಟು ಸಹಕಾರಿ ಎಂದು ಪರಂಗಿಹಣ್ಣು ಹೆಸರು ಪಡೆದುಕೊಂಡಿದೆ. ಪರಂಗಿ ಹಣ್ಣಿನಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳು ಹೆಚ್ಚಾಗಿ ಸಿಗುವುದರಿಂದ ಚರ್ಮದ ಮೇಲೆ ಇದರ ಪ್ರಭಾವ ಸಾಕಷ್ಟಿರುತ್ತದೆ. ಸತ್ತ ಜೀವ ಕೋಶಗಳನ್ನು ತೆಗೆದು ಹಾಕುವ ಜೊತೆಗೆ ಚರ್ಮದ ಮೇಲಿನ ಹೊಳಪನ್ನು ಹೆಚ್ಚಿಸಿ ತುಂಬಾ ನಯವಾದ ತ್ವಚೆ ನಿಮ್ಮದಾಗುವಂತೆ ಮಾಡುತ್ತದೆ. ನಿತ್ಯ ಬೆಳಿಗ್ಗೆ ಬ್ರೇಕ್ ಫಾಸ್ಟ್ ಸಮಯದಲ್ಲಿ ಪರಂಗಿ ಹಣ್ಣಿನ ಸೇವನೆಯಿಂದ ನಿರೀಕ್ಷಿತ ಫಲಿತಾಂಶ ಪಡೆಯಬಹುದು.

ಬೇಳೆಕಾಳುಗಳು:- ಪ್ರೋಟೀನ್, ಖನಿಜಗಳು, ಫೈಟೊನ್ಯೂಟ್ರಿಯೆಂಟ್‌ಗಳು, ವಿಟಮಿನ್‌ಗಳು ಮತ್ತು ಫೈಬರ್‌ನಂತಹ ಪ್ರಮುಖ ಪೋಷಕಾಂಶಗಳು ಬೇಳೆಕಾಳುಗಳಲ್ಲಿ ಕಂಡುಬರುತ್ತವೆ. ಇದರ ಸೇವನೆಯಿಂದ ಚರ್ಮದ ಕೋಶಗಳು ಅಭಿವೃದ್ಧಿ ಹೊಂದುತ್ತವೆ. ಇದು ಮುಖದ ಸುಕ್ಕುಗಳನ್ನು ನಿವಾರಿಸಿ ಯಂಗ್ ಆಗಿ ಕಾಣುವಂತೆ ಮಾಡುತ್ತದೆ.

ಆವಕಾಡೊ ಹಣ್ಣು:- ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಕೆ ಮತ್ತು ಪೊಟ್ಯಾಸಿಯಮ್ ಮುಂತಾದ ಪೋಷಕಾಂಶಗಳು ಕಂಡುಬರುತ್ತವೆ. ಇವು ಚರ್ಮದ ಆರೋಗ್ಯಕ್ಕೆ ಸಹಕಾರಿ ಆಗಿವೆ. ಆವಕಾಡೊ ಎಣ್ಣೆಯನ್ನು ದ್ರವ ಮೂಲ ಎಣ್ಣೆ ಎಂದು ವರ್ಗೀಕರಿಸಲಾಗಿದೆ. ಇದು ವಯಸ್ಸಾಗುವ ವಿರೋಧಿ ಗುಣಗಳನ್ನು ಹೊಂದಿದೆ. ಇದು ತನ್ನದೇ ಆದ ಕಾಲಜನ್ ಮತ್ತು ಎಲಾಸ್ಟಿನ್ ಅನ್ನು ಉತ್ಪಾದಿಸುತ್ತದೆ. ಇದಲ್ಲದೆ, ಎಣ್ಣೆಯನ್ನು ಹಾನಿಗೊಳಗಾದ ಚರ್ಮದ ಮೇಲೆ ಬಳಸಬಹುದು, ಏಕೆಂದರೆ ಇದು ಸಿಪ್ಪೆಸುಲಿಯುವುದು, ಮೈಕ್ರೊಕ್ರ್ಯಾಕ್ಗಳು, ಕಿರಿಕಿರಿಗಳು ಮತ್ತು ಉರಿಯೂತಗಳನ್ನು ತ್ವರಿತವಾಗಿ ತೊಡೆದುಹಾಕಲು ಸಹಾಯ ಮಾಡುತ್ತದೆ.

ಪಾಲಕ್ ಸೊಪ್ಪು:- ಆರೋಗ್ಯದ ಗಣಿ ಎಂದು ಪರಿಗಣಿಸಲಾಗಿರುವ ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಕೆ, ಮೆಗ್ನೀಸಿಯಮ್ ಮತ್ತು ಕಬ್ಬಿಣದಂತಹ ಪೋಷಕಾಂಶಗಳು ಹೇರಳವಾಗಿವೆ. ವಿಟಮಿನ್ ಎ ಚರ್ಮದ ಸೆಳೆತ ಮತ್ತು ಕಾಂತಿ ಹೆಚ್ಚಲು ನೆರವಾದರೆ ವಿಟಮಿಸ್ ಸಿ ಹೊಸ ಜೀವಕೋಶಗಳ ಹುಟ್ಟಿಗೆ ನೆರವಾಗುತ್ತದೆ. ಅಲ್ಲದೇ ವಿವಿಧ ಕಾರಣಗಳಿಂದ ಘಾಸಿಗೊಂಡಿದ್ದ ಚರ್ಮದ ಜೀವಕೋಶಗಳು ರಿಪೇರಿಗೊಳ್ಳುವ ಮೂಲಕ ಚರ್ಮ ತನ್ನ ಸಹಜ ರೂಪ ಪಡೆಯಲು ನೆರವಾಗುತ್ತದೆ. ಅಲ್ಲದೇ ಹಳೆಯ ಕಲೆಗಳಿಂದ ದಟ್ಟವಾಗಿದ್ದ ಭಾಗವೂ ತಿಳಿಯಾಗತೊಡಗುತ್ತದೆ.
ಪಾಲಕ್ ನಲ್ಲಿ ಬಹುಬೇಗನೆ ವಯಸ್ಸಾಗುವಂತೆ ಕಾಣಿಸುವ ಕಣಗಳನ್ನು ಹೊಡೆದೋಡಿಸುವ ಆಂಟಿ ಆಕ್ಸಿಡೆಂಟುಗಳು ಹೇರಳವಾಗಿದ್ದು ಚರ್ಮ ಬೇಗನೇ ನೆರಿಗೆಗೆ ಒಳಗಾಗದಂತೆ ತಡೆದು ವೃದ್ದಾಪ್ಯವನ್ನು ದೂರಾಗಿಸುತ್ತದೆ.

Leave A Reply

Your email address will not be published.