ಆಸ್ಕರ್ ಲಿಸ್ಟ್ ನಿಂದ ‘ಕಾಂತಾರ’ ರನ್ ಔಟ್! ‘RRR’ ಚಿತ್ರದ ನಾಟು ನಾಟು ಸಾಂಗ್ ಸೇರಿ ಭಾರತದ ಎರಡು ಕಿರು ಚಿತ್ರಗಳು ಮಾತ್ರ ನಾಮಿನೇಟ್!
ಅಂತೂ ಇಂತೂ ಎಲ್ಲರೂ ಕಾತುರದಿಂದ ಕಾಯ್ತಿದ್ದ ‘ಆಸ್ಕರ್ ನಾಮಿನೇಷನ್ಸ್ 2023’ (Oscars Nominations 2023) ಪ್ರಕಟಗೊಂಡಿದೆ. ಈ ವರ್ಷದ ಆಸ್ಕರ್ ಪ್ರಶಸ್ತಿಯ ಅಂತಿಮ ನಾಮಿನೇಷನ್ ಲಿಸ್ಟ್ ಇಂದು ಬಹಿರಂಗವಾಗಿದೆ. ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್ ನಲ್ಲಿ ಆಸ್ಕರ್ ಪ್ರಶಸ್ತಿಯ ನಾಮಿನೇಷನ್ ಲಿಸ್ಟ್ ಘೋಷಣೆ ಮಾಡಲಾಗಿದೆ. ಇದರಲ್ಲಿ ರಾಜಮೌಳಿ ನಿರ್ದೇಶನ ‘RRR’ ಸಿನಿಮಾದ ‘ನಾಟು ನಾಟು’ ಹಾಡು ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ ಗೆ ನಾಮನಿರ್ದೇಶನಗೊಂಡಿದೆ.
ಇತ್ತೀಚೆಗೆಷ್ಟೇ ‘RRR’ ಸಿನಿಮಾ ʻಗೋಲ್ಡನ್ ಗೋಬ್ಸ್ʼ ಅವಾರ್ಡ್ ಬಾಚಿಕೊಂಡಿತ್ತು. ಈ ಬೆನ್ನಲ್ಲೇ ಆಸ್ಕರ್ ಪ್ರಶಸ್ತಿಯ ನಾಮ ನಿರ್ದೇಶನ ಸಾಲಿನಲ್ಲೂ ಚಿತ್ರದ ನಾಟು ನಾಟು ಸಾಂಗ್ ಕೂಡ ಸೇರಿಕೊಂಡಿರುವುದು ಸಂತೋಷವನ್ನುಂಟುಮಾಡಿದೆ. ಲಿಸ್ಟ್ ಹೊರಬೀಳ್ತಿದ್ದಂತೆ ಚಿತ್ರತಂಡ ಕೂಡ ಫುಲ್ ಖುಷ್ ಆಗಿದೆ.
ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್ನಲ್ಲಿ ಇಂದು ಆಸ್ಕರ್ ಪ್ರಶಸ್ತಿಯ (Oscar 2023)ನಾಮ ನಿರ್ದೇಶನ ಘೋಷಣೆ ಕಾರ್ಯಕ್ರಮ ನಡೆದಿದೆ. ಭಾರತೀಯ ಕಾಲಮಾನದ ಪ್ರಕಾರ ಇಂದು ಸಂಜೆ 7 ಗಂಟೆಯ ಹೊತ್ತಿಗೆ ಈ ಪ್ರಕ್ರಿಯೆ ನಡೆದಿದೆ. ಯಾವೆಲ್ಲ ಸಿನಿಮಾಗಳು ನಾಮಿನೇಷನ್ ಆಗಲಿವೆ ಎನ್ನುವ ಕುತೂಹಲಕ್ಕೆ ಇದೀಗ ತೆರೆಬಿದ್ದಿದೆ.
RRR ಈಗ 95 ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ನಾಮನಿರ್ದೇಶನಗೊಂಡ ದಕ್ಷಿಣ ಭಾರತದ ಮೊದಲ ಚಿತ್ರ ಎಂಬ ದಾಖಲೆಯನ್ನು ಸೃಷ್ಟಿಸಿದೆ. ಮದರ್ ಇಂಡಿಯಾ (1957), ಸಲಾಮ್ ಬಾಂಬೆ (1988) ಮತ್ತು ಲಗಾನ್ (2001) ಆಸ್ಕರ್ ನಾಮನಿರ್ದೇಶನ ಹೊಂದಿರುವ ಇತರ ಭಾರತೀಯ ಚಲನಚಿತ್ರಗಳು. ಆರ್ಆರ್ಆರ್ನ ಈ ಅದ್ಭುತ ಸಾಧನೆಗೆ ನೆಟಿಜನ್ಗಳು ಆರ್ಆರ್ಆರ್ ತಂಡವನ್ನು ಅಭಿನಂದಿಸುತ್ತಿದ್ದಾರೆ. ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಗೆಲ್ಲಲಿ ಎಂದು ಶುಭಕೋರಿದ್ದಾರೆ.
ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದ ನಾಟು ನಾಟು.. ಹಾಡಿಗೆ ಎಂಎಂ ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಹಾಡಿಗೆ ರಾಮ್ ಚರಣ್ ಹಾಗೂ ಜೂನಿಯರ್ ಎನ್ಟಿಆರ್ ಸ್ಟೆಪ್ಸ್ ಹಾಕಿದ್ದಾರೆ. ಈ ಹಾಡಿಗೆ ಗೋಲ್ಡನ್ ಗ್ಲೋಬ್ 2023 ಅವಾರ್ಡ್ ಸಿಕ್ಕಿದ್ದು, ಈಗ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗಿರುವುದು ಸಿನಿ ಪ್ರಿಯರಲ್ಲಿ ಸಂತಸ ಮೂಡಿಸಿದೆ. ಈ ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಈ ಬಾರಿಯ ಪ್ರಶಸ್ತಿಗಾಗಿ ಒಟ್ಟು ಮುನ್ನೂರು ಸಿನಿಮಾಗಳನ್ನು ಆಯ್ಕೆ ಮಾಡಲಾಗಿತ್ತು. ಮುನ್ನೂರು ಸಿನಿಮಾಗಳಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಓರಿಜಿನಲ್ ಸಾಂಗ್ ನಾಮ ನಿರ್ದೇಶನದಲ್ಲಿ ಹಾಲಿವುಡ್ ಚಿತ್ರಗಳ ಜೊತೆ ರಾಜಮೌಳಿ ನಿರ್ದೇಶನದ ಆರ್ಆರ್ಆರ್’ ಚಿತ್ರದ ನಾಟು ನಾಟು ಸಾಂಗ್ ಕೂಡ ಸೇರಿಕೊಂಡಿದೆ. ತೆಲುಗಿನ
ನಾಟು ನಾಟು’ ಬೆಸ್ಟ್ ಓರಿಜಿನಲ್ ಸಾಂಗ್ ವಿಭಾಗದಲ್ಲಿ ನಾಮಿನೇಷನ್ ಆಗಿದೆ. ಇನ್ನೂ ಇದರ ಜೊತೆಗೆ ಭಾರತದ ಆಲ್ ದಟ್ ಬ್ರೀಥ್ಸ್’, ಮತ್ತು
ದಿ ಎಲೆಫೆಂಟ್ ವಿಸ್ಪರರ್ಸ್’ ಎಂಬು ಕಿರುಚಿತ್ರಗಳು ಕೂಡ ನಾಮಿನೇಟ್ ಆಗಿದೆ. ಈ ಮೂಲಕ ಭಾರತಕ್ಕೆ ಆಸ್ಕರ್ ಗೆಲ್ಲುವ ಅವಕಾಶ ಸಿಕ್ಕಿದೆ.
ಆದರೆ ಈ ವಿಷಯದಲ್ಲಿ ಕನ್ನಡಿಗರಿಗೆ ನಿರಾಶೆಯಾದದ್ದು ಮಾತ್ರ ಸತ್ಯ. ಯಾಕೆಂದ್ರೆ ಮೈ ನವಿರೇಳಿಸಿದ್ದ ಕಾಂತರ ಚಿತ್ರ ಈ ಬಾರಿ ಆಸ್ಕರ್ ಗೆ ನಾಮಿನೇಟ್ ಆಗೇ ಆಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಇದು ಅಭಿಮಾನಿಗಳಿಗೆ ಬೇಸರ ತಂದಿದೆ. ಆಸ್ಕರ್ ಪ್ರಶಸ್ತಿ ಸ್ಪರ್ಧೆಯಲ್ಲಿ ಈ ಬಾರಿ ವಿಶ್ವದ 300ಕ್ಕೂ ಅಧಿಕ ಸಿನಿಮಾಗಳು ಅರ್ಹತೆ ಪಡೆದಿದ್ದವು. ಆ ಪೈಕಿ ಕನ್ನಡದ ಸಿನಿಮಾಗಳಾದ ‘ಕಾಂತಾರ’, ‘ವಿಕ್ರಾಂತ್ ರೋಣ’ ಚಿತ್ರಗಳು ಕೂಡ ಇದ್ದವು. ಕಾಂತಾರ ಸಿನಿಮಾ ಬಗ್ಗೆ ಅನೇಕರಲ್ಲಿ ನಿರೀಕ್ಷೆಯಿತ್ತು ಯಾವುದಾದರೂ ವಿಭಾಗದಲ್ಲಿ ನಾಮಿನೇಟ್ ಆಗುತ್ತದೆ ಎಂದು ಕಾಯುತ್ತಿದ್ರು. ಆದ್ರೆ ನಿರೀಕ್ಷೆ ಹುಸಿಯಾಗಿದೆ.