Home Breaking Entertainment News Kannada ಈಕೆ ಬಾಲಿವುಡ್ ನಟನೊಬ್ಬನ ಎಷ್ಟು ದೊಡ್ಡ ಅಭಿಮಾನಿ ಗೊತ್ತಾ! ತಾನು ಸಾಯುವ ಮುಂದೆ, ತನ್ನ 73...

ಈಕೆ ಬಾಲಿವುಡ್ ನಟನೊಬ್ಬನ ಎಷ್ಟು ದೊಡ್ಡ ಅಭಿಮಾನಿ ಗೊತ್ತಾ! ತಾನು ಸಾಯುವ ಮುಂದೆ, ತನ್ನ 73 ಕೋಟಿಯಷ್ಟು ಆಸ್ತಿಯನ್ನೂ ಆ ನಟನ ಹೆಸರಿಗೇ ಬರೆದಿದ್ದಳು!!

Hindu neighbor gifts plot of land

Hindu neighbour gifts land to Muslim journalist

ಈಕೆ ಬಾಲಿವುಡ್ ನಟನೊಬ್ಬನ ಹುಚ್ಚು ಅಭಿಮಾನಿ. ಆ ನಟ ಎಂದರೆ ಏನೋ ಒಂದು ತರದ ಪ್ರೀತಿ, ಅಭಿಮಾನ. ಅವರ ನಟನೆಯ ಎಲ್ಲಾ ಸಿನಿಮಗಳನ್ನೂ ತಪ್ಪದೇ ನೋಡಿ ಸಂತೋಷಪಡುತ್ತಿದ್ದಳು. ಜೊತೆಗೆ ಈ ಮಹಿಳೆ ಕೂಡ ಸಾಮಾನ್ಯಳಲ್ಲ. ಕೋಟಿ ಗಟ್ಟಲೆ ಆಸ್ತಿ ಇರುವ ಕೋಟ್ಯಾದೀಶ್ವರಿ. ಇಂತದ್ರಲ್ಲೂ ಆ ನಟ ಎಂದರೆ ಪ್ರಾಣಬಿಡುತ್ತಿದ್ಲು. ಆದ್ರೆ ದುರದೃಷ್ಟವಶಾತ್ ಇಂದು ಈ ಮಹಿಳೆ ನಮೊಂದಿಗಿಲ್ಲ. ಆಶ್ಚರ್ಯವೇನಂದ್ರೆ ಈಕೆ ಸಾಯೋ ಮೊದಲು ತನ್ನ ನೆಚ್ಚಿನ ನಟನಿಗಾಗಿ ಏನು ಮಾಡಿದ್ಲು ಗೊತ್ತಾ?

ಭಾರತದಲ್ಲಿ ಸಿನಿಮಾ ನಟ-ನಟಿಯರನ್ನು ಕೆಲ ಅಭಿಮಾನಿಗಳು ದೇವರ ರೀತಿ ಆರಾಧಿಸುತ್ತಾರೆ. ಅವರಿಗಾಗಿ ಏನು ಬೇಕಾದರೂ ಮಾಡಲು ರೆಡಿ ಇರುತ್ತಾರೆ. ಇನ್ನೂ ಕೆಲವರು ಅಭಿಮಾನದಿಂದ ತಮ್ಮ ಮಕ್ಕಳಿಗೆ ಅವರ ಹೆಸರು ಇಡುವುದನ್ನೂ ನೋಡಿದ್ದೇವೆ. ಅಲ್ಲದೆ ತಮ್ಮ ನೆಚ್ಚಿನ ನಟ ಅಥವಾ ನಟಿಯರ ಹೆಸರನ್ನು ಅಚ್ಚೆ ಹಾಕಿಸಿಕೊಳ್ಳುತ್ತಾರೆ. ಅಷ್ಟೊಂದು ಅತೀವವಾಗಿ ಅವರನ್ನು ಹಚ್ಚಿಕೊಂಡಿರುತ್ತಾರೆ.
ಆದ್ರೆ ಮುಂಬೈನ ಮಲಬಾರಿನಲ್ಲಿರುವ ನಿಶಾ ಪಾಟೀಲ್ ಎಂಬ ಮಹಿಳಾ ಅಭಿಮಾನಿಯು ತಾನು ಯಾವುದಕ್ಕೂ ಮೊದಲು ತನ್ನ 73 ಕೋಟಿ ಆಸ್ತಿಯನ್ನು ತಮ್ಮ ನೆಚ್ಚಿನ ನಟನ ಹೆಸರಿಗೆ ಬರೆದಿದ್ದಾಳೆ!

ಹೌದು, ಈ ಮಹಿಳಾ ಅಭಿಮಾನಿಯೊಬ್ಬರು ಇಲ್ಲಿಯವರೆಗೂ ಯಾವ ಅಭಿಮಾನಿಯೂ ಮಾಡಿದಂತಹ ದೊಡ್ಡ ಕೆಲಸವನ್ನು ಮಾಡಿದ್ದಾರೆ. ಇಂತಹ ದೊಡ್ಡ ಕೆಲಸವನ್ನು ಮಾಡಿ ಸಾವನ್ನಪ್ಪಿದ್ದಾರೆ. ಆದರೆ ಇಂತಹ ಅಭಿಮಾನಿಯನ್ನು ಪಡೆದ ಆ ನಟ ಯಾರೆಂಬ ಕುತೂಹಲವೇ? ಅವರು ಬೇರೆ ಯಾರೂ ಅಲ್ಲ ಕೆಜಿಎಫ್​ನ ಅಧೀರ, ಬಾಲಿವುಡ್ ಖ್ಯಾತ ನಟ ಸಂಜಯ್ ದತ್!

ನಟ ಸಂಜಯ್ ದತ್ ಅಂದ್ರೆ ನಿಶಾ ಪಾಟೀಲ್​ಗೆ ಅದೇನೋ ಪ್ರೀತಿ, ಅಭಿಮಾನವಿತ್ತು. ಆದ್ದರಿಂದ ತಾನು ಸಾಯುವುದಕ್ಕೂ ಮೊದಲು ತನ್ನ ನೆಚ್ಚಿನ ನಟನ ಹೆಸರಿನಲ್ಲಿ ಆಸ್ತಿ ಬರೆದು ಸತ್ತಿದ್ದರು. ತಮ್ಮೆಲ್ಲ ಆಸ್ತಿ ಹಣ ಬ್ಯಾಂಕ್ ನಲ್ಲಿ ಇರುವಂತಹ ಒಡವೆ ಎಲ್ಲವನ್ನು ಬಾಲಿವುಡ್ ನಟ ಸಂಜಯ್ ದತ್ ರವರ ಹೆಸರಿಗೆ ಬರೆದು ಪ್ರಾಣಬಿಟ್ಟಿದ್ದರು. ತನ್ನ ಸಹೋದರರ ಜೊತೆ ವಾಸವಾಗಿದ್ದ ನಿಶಾ ಪಾಟೀಲ್ ಆಸ್ತಿ ಒಟ್ಟು 73ಕೋಟಿ! ಇವರ ಮನೆಯೇ ಬೆಲೆ ಸುಮಾರು 10 ಕೋಟಿ ಬೆಲೆ ಬಾಳುತ್ತಿತ್ತು .

ಈ ಘಟನೆಯು 2108ರಲ್ಲಿ ನಡೆದಿದ್ದು, ಆಕೆಯ ಅಭಿಮಾನಕ್ಕೆ ಮನಸೋತಿದ್ದ ಸಂಜಯ್​ ದತ್​ ಕೊನೆಗೆ ನಿಶಾ ಪಾಟೀಲ್ ಮಕ್ಕಳಿಗೆ ಹಾಗೂ ಸಹೋದರರಿಗೆ ಆಸ್ತಿಯನ್ನು ಹಿಂದಿರುಗಿಸಿದ್ದರು. ಬ್ಯಾಂಕ್ ಲಾಕರ್ ನಲ್ಲೂ ಕೂಡ ನಿಶಾ ಪಾಟೀಲ್ ಬೆಲೆ ಬಾಳುವ ಆಭರಣಗಳನ್ನು ಇಟ್ಟಿದ್ದರು ಆಭರಣಗಳನ್ನು ಕೂಡ ಸಂಜಯ್ ದತ್ ಅವರ ಕುಟುಂಬಕ್ಕೆ ಹಿಂತಿರುಗಿಸಿದ್ದರು. ಅಭಿಮಾನ ಎಂದರೆ ಇಂದು ಬರೀ ಹೊಡೆದಾಟ ಗಲಾಟೆಗಳಿಂದ ಕೂಡಿರುವಾಗ, ಅಪರೂಪದಲ್ಲಿ ಅಪರೂಪವಾದಂತಹ ಇಂತಹ ಕೆಲವು ಅಭಿಮಾನಿಗಳು ಎಲ್ಲರಿಗೂ ಮಾದರಿಯಾಗುತ್ತಾರೆ.