ನಟ ದರ್ಶನ್ ಫಾರ್ಮ್ ಹೌಸ್ ನಲ್ಲಿ ವಿದೇಶಿ ಹಕ್ಕಿಗಳ ಸೆರೆ | ಚಾಲೆಂಜಿಂಗ್ ಸ್ಟಾರ್ ದರ್ಶನ್ , ಪತ್ನಿ ವಿಜಯಲಕ್ಷ್ಮಿ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು!!!

ವನ್ಯಜೀವಿ ಸಂರಕ್ಷಣಾ ಮಂಡಳಿಯ ಸದಸ್ಯ ಕೂಡ ಆಗಿರುವ ನಟ ದರ್ಶನ್ ಫಾರ್ಮ್ ಹೌಸ್ ನಲ್ಲಿ ವಿದೇಶಿ ಹಕ್ಕಿಗಳ ಸೆರೆಯಾಗಿದ್ದು, ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪತ್ನಿ ವಿಜಯಲಕ್ಷ್ಮಿ ಹಾಗೂ ಮ್ಯಾನೇಜರ್ ನಾಗರಾಜ್ ವಿರುದ್ಧ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿರುವ ಘಟನೆ ನಡೆದಿದೆ.

ಶುಕ್ರವಾರ ರಾತ್ರಿ ಅರಣ್ಯ ಇಲಾಖೆ ಅಧಿಕಾರಿಗಳು ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿದ್ದು ಮಂಗೋಲಿಯಾ ಮೂಲದ ವಲಸೆ ಹಕ್ಕಿಗಳಾದ 4 ಪಟ್ಟೆ ತಲೆ ಹೆಬ್ಬಾತುಗಳನ್ನು ವಶ ಪಡಿಸಿಕೊಂಡಿದ್ದಾರೆ. ನಾಲ್ಕು ವಿದೇಶಿ ಹಕ್ಕಿಗಳನ್ನು ರಕ್ಷಣೆ ಮಾಡಲಾಗಿದ್ದು, ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಈ ಕುರಿತು ತನಿಖೆ ನಡೆಸಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಮೈಸೂರಿನ ಟಿ. ನರಸೀಪುರದಲ್ಲಿ ತಮ್ಮದೇ ಆದ ಫಾರ್ಮ್ ಹೌಸ್ ಹೊಂದಿರುವ ನಟ ದರ್ಶನ್ ಅವರಿಗೆ ಈಗ ದೊಡ್ಡ ಸಮಸ್ಯೆ ಎದುರಾಗಿದೆ. ನಗರದ ತಿ.ನರಸೀಪುರ ರಸ್ತೆಯಲ್ಲಿನ ನಟ ದರ್ಶನ್‌ ಅವರ ಫಾರ್ಮ್ ಹೌಸ್‌ ಮೇಲೆ ಶುಕ್ರವಾರ ರಾತ್ರಿ ದಾಳಿ ನಡೆಸಿದ ಅರಣ್ಯ ಸಂಚಾರ ದಳ ಸಿಬ್ಬಂದಿ, ಮಂಗೋಲಿಯಾ ಮೂಲದ ವಲಸೆ ಹಕ್ಕಿಗಳಾದ ನಾಲ್ಕು ಪಟ್ಟೆ ತಲೆ ಹೆಬ್ಬಾತು (ಬಾರ್‌ ಹೆಡ್ಡೆಡ್‌ ಗೂಸ್‌)ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಅವರ ಫಾರ್ಮ್ ಹೌಸ್ ಕುರಿತಾದ ಇತ್ತೀಚೆಗೆ ವಿಡಿಯೋ ಪ್ರಸಾರವಾಗಿದ್ದು ಅದರಲ್ಲಿ ವಿದೇಶಿ ಹಕ್ಕಿಗಳನ್ನು ಸೆರೆಹಿಡಿದಿರುವುದನ್ನು ಗಮನಿಸಿದ ಅರಣ್ಯಾಧಿಕಾರಿಗಳು ಇದೀಗ, ದರ್ಶನ್ ಅವರ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿದ ಘಟನೆ ನಿನ್ನೆ ನಡೆದಿದೆ. ಕಳೆದ ವರ್ಷವಷ್ಟೆ ದರ್ಶನ್ ಅವರು ವನ್ಯಜೀವಿ ಸಂರಕ್ಷಣಾ ಮಂಡಳಿಯ ಸದಸ್ಯರಾಗಿ ನೇಮಕಗೊಂಡಿದ್ದು, ಇದೀಗ, ಅವರ ಫಾರ್ಮ್ ಹೌಸ್ ಮೇಲೆಯೇ ರೈಡ್ ಆಗಿರುವ ಘಟನೆ ನಡೆದಿದೆ. ಸದ್ಯ ದರ್ಶನ್, ಫಾರ್ಮ್ ಹೌಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿರುವ ಕುರಿತು ಮಾಧ್ಯಮವೊಂದು ವರದಿ ಮಾಡಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸಂರಕ್ಷಿತ ಎಂದು ಗುರುತಿಸಲಾದ ಪಟ್ಟೆ ತಲೆ ಹೆಬ್ಬಾತುಗಳನ್ನು ಕೂಡಿಹಾಕಿ ಸಾಕಿದ ಆರೋಪದ ಮೇಲೆ ನಟ ದರ್ಶನ್, ಫಾರ್ಮ್ ಹೌಸ್ ಒಡತಿ ವಿಜಯಲಕ್ಷ್ಮಿ ಹಾಗೂ ಮ್ಯಾನೇಜರ್ ನಾಗರಾಜ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಎಲ್ಲೆಡೆ ಕಾಣ ಸಿಗಲು ಆಗದ ಜೊತೆಗೆ ವಿರಳವಾದ ಪಕ್ಷಿಗಳ ವರ್ಗವಾಗಿದೆ . ಖಜಕಿಸ್ತಾನ, ಮಂಗೋಲಿಯಾ ಭಾಗದಲ್ಲಿ ಹೆಚ್ಚಾಗಿ ಕಂಡುಬರಲಿದ್ದು, ಆ ಪ್ರದೇಶಗಳಲ್ಲಿ ಶೀತದ ವಾತಾವರಣ ಹೆಚ್ಚಿದಾಗ ರಕ್ಷಣೆಯ ನಿಟ್ಟಿನಲ್ಲಿ ಹಿಮಾಲಯ ದಾಟಿ ದಕ್ಷಿಣ ರಾಜ್ಯಗಳಿಗೆ ಹೆಚ್ಚಾಗಿ ಕಂಡುಬರುತ್ತವೆ. ಇವುಗಳನ್ನು ಸೆರೆಹಿಡಿದು ಸಾಕುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ ಅಪರಾಧವಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಲಾಗಿದೆ

Leave A Reply

Your email address will not be published.