Vastu Tips : ಮನೆಯ ಬಳಿ ಈ ಗಿಡ ನೆಟ್ಟರೆ ಐಶ್ವರ್ಯ, ಸಂಪತ್ತಿನ ಒಡೆಯ ನೀವಾಗುವಿರಿ
ಮನಿ ಪ್ಲಾಂಟ್ ಹೆಸರೇ ಸೂಚಿಸುವಂತೆ ಇದೊಂದು ಹಣದ ಗಿಡ. ಆದರೆ ಈ ಗಿಡದಲ್ಲಿ ಹಣ ಬೆಳೆಯದಿದ್ದರೂ, ಅದು ನಮ್ಮ ಆರ್ಥಿಕತೆ ಸ್ಥಿತಿಯನ್ನು ಸುಧಾರಿಸಬಹುದು ಎಂಬ ನಂಬಿಕೆ ಇದೆ. ಈ ಗಿಡ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುವ ಸಂಪೂರ್ಣ ಭರವಸೆ ಇದೆ . ಇತ್ತೀಚಿನ ದಿನಗಳಲ್ಲಿ ಹಲವು ಮನೆಗಳಲ್ಲಿ ಕಾಣಸಿಗುವ ಗಿಡಗಳಲ್ಲಿ ಮನಿ ಪ್ಲಾಂಟ್ ಕೂಡ ಒಂದು. ವಾಸ್ತು ಪ್ರಕಾರ ಇದನ್ನು ಮನೆಯಲ್ಲಿ ಬೆಳೆಸಿದರೆ ಒಳ್ಳೆಯ ಹಣ ಮತ್ತು ಅದೃಷ್ಟ ಬರುತ್ತದೆ ಎಂಬ ನಂಬಿಕೆ ಇದೆ.
ವಾಸ್ತು ತಜ್ಞರ ಪ್ರಕಾರ ಮನಿ ಪ್ಲಾಂಟ್ ನೆಟ್ಟ ಮನೆಯಲ್ಲಿ ವ್ಯಕ್ತಿ ಆರ್ಥಿಕ ಮುಗ್ಗಟ್ಟು ಎದುರಿಸಬೇಕಿಲ್ಲ ಎನ್ನುತ್ತಾರೆ. ಹಾಗೆಯೇ ಮನೆಯಲ್ಲಿ ತಾಯಿ ಲಕ್ಷ್ಮಿ ಸದಾ ನಿಮ್ಮೊಂದಿಗೆ ಇರುತ್ತಾಳೆ. ವಾಸ್ತು ಶಾಸ್ತ್ರದಲ್ಲಿ, ಇದನ್ನು ಸಂತೋಷ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದರೆ ಅನೇಕ ಬಾರಿ ಜನರು ಮನಿ ಪ್ಲಾಂಟ್ ನೆಡುವಾಗ ಕೆಲವು ತಪ್ಪುಗಳನ್ನು ಮಾಡುತ್ತಾರೆ, ಇದರಿಂದಾಗಿ ವ್ಯಕ್ತಿಯು ಪ್ರತಿಕೂಲ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
ಮನಿ ಪ್ಲಾಂಟ್ ನೆಡುವಾಗ ಅನುಸರಿಸಬೇಕಾದ ಕ್ರಮಗಳು :
- ಆಗ್ನೇಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ನೆಡುವುದರಿಂದ ವ್ಯಕ್ತಿಯ ಅದೃಷ್ಟ ಹೆಚ್ಚಾಗುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಈ ದಿಕ್ಕನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದನ್ನು ಮನೆಯಲ್ಲಿ ಧನಾತ್ಮಕ ಶಕ್ತಿಯ ಮೂಲವೆಂದು ಪರಿಗಣಿಸಲಾಗುತ್ತದೆ.
- ಮನಿ ಪ್ಲಾಂಟ್ಗೆ ನಿಯಮಿತವಾಗಿ ನೀರು ಹಾಕಬೇಕು. ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಇದು ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡುತ್ತದೆ.
- ಮನೆಯಲ್ಲಿ ಈಶಾನ್ಯ ದಿಕ್ಕಿನಲ್ಲಿ ಮನಿ ಪ್ಲಾಂಟ್ನ್ನು ಇಡಬಾರದು. ಹಾಗೆ ಇಟ್ಟುಕೊಂಡರೆ ಮನೆಯಲ್ಲಿದ್ದ ಹಣವೆಲ್ಲ ಹೊರ ಹೋಗುತ್ತದೆ. ಮನೆಯಲ್ಲಿರುವವರಲ್ಲಿ ಆರೋಗ್ಯ ಸಮಸ್ಯೆ ಉಂಟಾಗಬಹುದು.
- ನೀವು ಮನಿ ಪ್ಲಾಂಟ್ನ್ನು ಮನೆಯಲ್ಲಿ ಇಡಲು ಬಯಸಿದರೆ, ಅದನ್ನು ಮಡಕೆ ಅಥವಾ ಬಾಟಲಿಯಲ್ಲಿ ನೀರು ತುಂಬಿಸಿ ಇಡಿ. ಹೀಗೆ ಮಾಡುವುರಿಂದ ಮನೆಯಲ್ಲಿರುವವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.
- ಮನಿ ಪ್ಲಾಂಟ್ ನೆಡುವಾಗ ಅದರ ಎಲೆಗಳು ನೆಲಕ್ಕೆ ತಾಗದಂತೆ ವಿಶೇಷ ಕಾಳಜಿ ವಹಿಸಬೇಕು. ನೀವು ಈ ಬಗ್ಗೆ ಕಾಳಜಿ ವಹಿಸದಿದ್ದರೆ, ವ್ಯಕ್ತಿಗೆ ಹಣ ನಷ್ಟವಾಗುವ ಸಾಧ್ಯತೆಯಿದೆ.
- ವಾಸ್ತು ಪ್ರಕಾರ ಮನೆಯಲ್ಲಿ ನೆಟ್ಟ ಮನಿ ಪ್ಲಾಂಟ್ ಒಣಗಿದ್ದರೆ ಅಥವಾ ಹಳದಿ ಬಣ್ಣಕ್ಕೆ ತಿರುಗಿದ್ದರೆ, ತಕ್ಷಣ ಅದನ್ನು ಬದಲಾಯಿಸಿ. ಎಲೆಗಳು ಒಣಗುವುದು ಅಥವಾ ಬಿಳಿಯಾಗುವುದು ವಾಸ್ತು ಪ್ರಕಾರ ಅಶುಭ.
- ಮನೆಯಲ್ಲಿ ನೆಟ್ಟಿರುವ ಮನಿ ಪ್ಲಾಂಟ್ ಅನ್ನು ಯಾವತ್ತೂ ಬೇರೆಯವರಿಗೆ ನೀಡಬಾರದು ಅಥವಾ ಹೊರಗಿನವರು ಅದನ್ನು ಮುಟ್ಟಲು ಬಿಡಬಾರದು ಎಂದು ಹೇಳಲಾಗುತ್ತದೆ. ಇದರಿಂದ ವ್ಯಕ್ತಿಯ ಮನೆಯವರ ಆಶೀರ್ವಾದ ದೂರವಾಗುತ್ತದೆ. ಮತ್ತೊಂದೆಡೆ, ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯ ನಾಶವಾಗುತ್ತದೆ.
- ಮನೆಯಲ್ಲಿ ನೆಟ್ಟಿರುವ ಮನಿ ಪ್ಲಾಂಟ್ ನೆಲದ ಕಡೆಗೆ ಚಲಿಸಿದರೆ, ಹಣವನ್ನು ವ್ಯರ್ಥ ವಸ್ತುಗಳಿಗೆ ಖರ್ಚು ಮಾಡುತ್ತಾರೆ ಎಂದು ಅರ್ಥಮಾಡಿಕೊಳ್ಳಿ. ಇದಕ್ಕಾಗಿ, ಹಗ್ಗ ಅಥವಾ ಕಂಬದ ಸಹಾಯದಿಂದ ಮನಿ ಪ್ಲಾಂಟ್ ಅನ್ನು ಮೇಲಕ್ಕೆ ಕಟ್ಟಿಕೊಳ್ಳಿ, ಈ ರೀತಿ ಮಾಡುವುದರಿಂದ ಹಣ ಹೆಚ್ಚಾಗುತ್ತದೆ.
ಈ ರೀತಿಯಾಗಿ ವಾಸ್ತು ಪ್ರಕಾರ ಮನಿಪ್ಲಾಂಟ್ ಸಸ್ಯ ಬೆಳೆಸುವಾಗ ಬಹಳ ಜಾಗೃತವಾಗಿದ್ದು ಕ್ರಮ ಪ್ರಕಾರ ಬೆಳೆಸಿದರೆ ನಿಮ್ಮ ಆರ್ಥಿಕ ಸ್ಥಿತಿ ಗತಿ ಹೆಚ್ಚುತ್ತದೆ ಎಂದು ತಿಳಿಸಲಾಗಿದೆ .