ಭೀಕರ ಬೋಟ್‌ ಅಪಘಾತ | 145 ಮಂದಿ ಜಲಸಮಾಧಿ

ಭೀಕರ ಬೋಟ್‌ ಅಪಘಾತವೊಂದು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (DRC) ನಲ್ಲಿ ಸಂಭವಿಸಿದ್ದು, ಲುಲೋಂಗಾ ನದಿಯಲ್ಲಿ 200 ಪ್ರಯಾಣಿಕರಿದ್ದ ಮೋಟಾರ್ ಬೋಟ್ ಮುಳುಗಿ, 145 ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದೆ. ಇನ್ನುಳಿದಂತೆ 55 ಜನ ಬದುಕುಳಿದಿದ್ದಾರೆ ಎಂದು ವರದಿಯಾಗಿದೆ.

ಮೋಟಾರು ಬೋಟ್‌ ಓವರ್‌ಲೋಡ್‌ ಆದ ಕಾರಣ, ಹಡಗು ಮುಳುಗಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತದೆ. ಕಾಂಗೋ ದೇಶದ ಲುಲೋಂಗಾ ನದಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಇತ್ತೀಚೆಗಷ್ಟೇ ಕಾಂಗೋದಲ್ಲಿ ಚಂಡಮಾರುತದಿಂದ ಉಂಟಾದ ಭೂಕುಸಿತದಿಂದ ಅನೇಕ ಜನರು ಸಾವನ್ನಪ್ಪಿದ್ದರು. ಇದೀಗ 145 ಜನರ ಸಾವು ಕಾಂಗೋ ಜನರನ್ನು ಭಯ ಬೀತರನ್ನಾಗಿಸಿದೆ.

ಪ್ರಯಾಣಿಕರು ತಮ್ಮ ಸರಕು ಮತ್ತು ಜಾನುವಾರುಗಳೊಂದಿಗೆ ಮೋಟಾರು ದೋಣಿಯಲ್ಲಿ ಪ್ರಯಾಣಿಸುತ್ತಿದ್ದಾಗ ಬಸಂಕುಸು ಎಂಬ ಪಟ್ಟಣದ ಬಳಿ ಮಂಗಳವಾರ ರಾತ್ರಿ ಅಪಘಾತಕ್ಕೀಡಾಗಿತ್ತು. ದೋಣಿಯಲ್ಲಿ ಪ್ರಯಾಣಿಕರು, ಸರಕುಗಳು ಮತ್ತು ಜಾನುವಾರುಗಳು ಅಧಿಕವಾಗಿ ತುಂಬಿದ್ದದ್ದರು. ಇದರಿಂದಾಗಿ ದೋಣಿ ನದಿಯಲ್ಲಿ ಮುಳುಗಿತು. ಈಜು ಬಾರದವರು ನೀರಿನಲ್ಲಿ ಮುಳುಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈಜಲು ಬಂದವರೂ ಸಹ ಸಾವನ್ನಪ್ಪಿದ್ದಾರೆ. ಈ ಅವಘಡದಲ್ಲಿ 145 ಮಂದಿ ಜಲಸಮಾಧಿಯಾಗಿದ್ದಾರೆ. ಅದೃಷ್ಟವಶಾತ್‌ 55 ಮಂದಿ ಬದುಕುಳಿದಿದ್ದಾರೆ.

ಕಾಂಗೋದಲ್ಲಿ ರಸ್ತೆಗಳು ಇಲ್ಲದ ಕಾರಣ ಜನರು ಹೆಚ್ಚಾಗಿ ದೋಣಿಗಳಲ್ಲಿ ಪ್ರಯಾಣ ಮಾಡುತ್ತಾರೆ. ಹಾಗಾಗಿ ಡಿಆರ್‌ಸಿಯಲ್ಲಿ ಆಗಾಗ ದೋಣಿ ಅಪಘಾತ ನಡೆಯುತ್ತಿದೆ. ಜನರು ತಮ್ಮ ಜೀವನೋಪಾಯಕ್ಕಾಗಿ ಪ್ರತಿದಿನ ಬೇರೆಡೆಗೆ ಹೋಗುತ್ತಾರೆ. ಅಕ್ಟೋಬರ್ 2022 ರಲ್ಲಿ ಕಾಂಗೋ ನದಿಯಲ್ಲಿ ಇದೇ ರೀತಿಯ ಘಟನೆ ನಡೆಯಿತು. ದೋಣಿ ಮುಳುಗಿ 40 ಮಂದಿ ಸಾವನ್ನಪ್ಪಿದ್ದರು.

Leave A Reply

Your email address will not be published.