ಇನ್ಮುಂದೆ ಇನ್ಸ್ಟಾಗ್ರಾಮ್ ನಲ್ಲಿಲ್ಲ DM ಮೆಸೇಜ್ | ಮೆಟಾ ಬಿಡುಗಡೆಗೊಳಿಸಿದೆ ಹೊಸ ಅಪ್ಡೇಟ್!

ಇನ್ಸ್ಟಾಗ್ರಾಮ್ ತನ್ನ ಗ್ರಾಹಕರನ್ನು ಹೆಚ್ಚಿಸುವ ಸಲುವಾಗಿ ಹೊಸ ಹೊಸ ಫೀಚರ್ ಗಳನ್ನು ಅಪ್ಡೇಟ್ ಮಾಡುತ್ತಲೇ ಬಂದಿದ್ದು, ಈ ಮೂಲಕ ಬಳಕೆದಾರರನ್ನು ತನ್ನತ್ತ ಸೆಳೆಯುತ್ತಿದೆ. ಇವಾಗ ಅಂತೂ ಯಾವುದೇ ಸೋಶಿಯಲ್ ಮೀಡಿಯಾಕ್ಕೂ ಕಮ್ಮಿ ಇಲ್ಲ ಎಂಬಂತೆ ಬಳಕೆದಾರರ ಭದ್ರತೆಯ ಜೊತೆಗೆ ಉತ್ತಮ ಫೀಚರ್ ಗಳನ್ನು ಜಾರಿಗೊಳಿಸಿದೆ.

ಇನ್ಸ್ಟಾಗ್ರಾಮ್ ಯಾವ ಸೋಶಿಯಲ್ ಮೀಡಿಯಾಕ್ಕೂ ಕಮ್ಮಿ ಇಲ್ಲ ಎಂಬಂತೆ ಬಳಕೆದಾರರನ್ನು ಒಳಗೊಂಡಿದೆ. ಇದೀಗ ಇನ್ಸ್ಟಾಗ್ರಾಮ್ ಮತ್ತೊಂದು ಹೊಸ ಅಪ್ಡೇಟ್ ಬಂದಿದ್ದು, Instagram ಮೆಟಾ ಬಳಕೆಯಲ್ಲಿ ಕ್ವೈಟ್ ಮೋಡ್ (Quiet mode) ಅನ್ನು ಅನಾವರಣಗೊಳಿಸಿದೆ.

ಮೆಟಾ ಹೊಸ ಫೀಚರ್, ಇನ್‌ಸ್ಟಾಗ್ರಾಮ್ ಬಳಕೆದಾರರು ರಜೆಯ ಸಮಯದಲ್ಲಿ ಪುಶ್ ನೋಟಿಫಿಕೇಷನ್ಸ್ ತಾತ್ಕಾಲಿಕವಾಗಿ ಆಫ್ ಮಾಡಲು ಅನುವು ಮಾಡಿಕೊಡುತ್ತದೆ. ಅಷ್ಟೇ ಅಲ್ಲದೆ ಈ ಹೊಸ ಫೀಚರ್ ನಿಮ್ಮ ಇನ್‌ಸ್ಟಾಗ್ರಾಮ್ ಫಾಲ್ಲೋರ್ಸ್ಗಳ ಯಾವುದೇ ಸಂದೇಶಗಳಿಗೆ ಸ್ವಯಂಚಾಲಿತವಾಗಿ ಪ್ರತ್ಯುತ್ತರಿಸುತ್ತದೆ. ಸ್ವಲ್ಪ ವಿರಾಮವನ್ನು ತೆಗೆದುಕೊಳ್ಳುವಾಗ ನಿಮಗೆ ಸಂದೇಶವನ್ನು ಕಳುಹಿಸಬೇಡಿ ಎಂದು ಅವರಿಗೆ ತಿಳಿಸುತ್ತದೆ.

ಮೆಟಾದ ಬ್ಲಾಗ್ ಪೋಸ್ಟ್‌ನ ಪ್ರಕಾರ ಕ್ವೈಟ್ ಮೋಡ್ ಎಂದು ಕರೆಯಲ್ಪಡುವ ಕಾರ್ಯವು ಪ್ಲಾಟ್‌ಫಾರ್ಮ್‌ನಲ್ಲಿ ನಿಮಗೆ ಸಂದೇಶ ಕಳುಹಿಸಲು ಪ್ರಯತ್ನಿಸುವ ಬಳಕೆದಾರರಿಗೆ ಸ್ವಯಂಚಾಲಿತ ಪ್ರತ್ಯುತ್ತರಗಳನ್ನು ಕಳುಹಿಸುತ್ತದೆ. ನಿಮಗೆ ಸೂಚನೆ ನೀಡಲಾಗಿಲ್ಲ ಎಂದು ಅವರಿಗೆ ತಿಳಿಸುತ್ತದೆ. ಬಳಕೆದಾರರು ತಮ್ಮ ವಿರಾಮದಿಂದ ಹಿಂತಿರುಗಿದಾಗ ಮತ್ತು ಅಪ್ಲಿಕೇಶನ್ ಅನ್ನು ಮತ್ತೆ ಬಳಸಲು ಪ್ರಾರಂಭಿಸಿದಾಗ ವಿರಾಮದ ಸಮಯದಲ್ಲಿ ತಪ್ಪಿಸಿಕೊಂಡ ಯಾವುದೇ ನೋಟಿಫಿಕೇಷನ್ ನ ತ್ವರಿತ ಸಾರಾಂಶವನ್ನು ಇನ್‌ಸ್ಟಾಗ್ರಾಮ್ ತೋರಿಸುತ್ತದೆ.

ಕ್ವೈಟ್ ಮೋಡ್ ಅನ್ನು ಆನ್ ಮಾಡಲು Instagram ಸೆಟ್ಟಿಂಗ್‌ಗಳು> ನೋಟಿಫಿಕೇಷನ್ಸ್> ಕ್ವೈಟ್ ಮೋಡ್‌ಗೆ ಹೋಗಿ. ಈ ಹೊಸ ಫೀಚರ್‌ ಹೆಚ್ಚು ಹದಿಹರೆಯದ ಬಳಕೆದಾರರ ಮೇಲೆ ಗಮನಹರಿಸುತ್ತದೆ. ಇದು ಅವರು ತಡರಾತ್ರಿ ಇನ್‌ಸ್ಟಾಗ್ರಾಮ್ ಅಲ್ಲಿ ನಿರ್ದಿಷ್ಟ ಸಮಯವನ್ನು ಕಳೆದ ನಂತರ ಕ್ವೈಟ್ ಮೋಡ್ ಅನ್ನು ಆನ್ ಮಾಡಲು ಅವರಿಗೆ ಸಲಹೆ ನೀಡುತ್ತದೆ. ಆದರೆ ಸದ್ಯಕ್ಕೆ ಯುಎಸ್, ಯುಕೆ, ಐರ್ಲೆಂಡ್, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿರುವ ಪ್ರತಿಯೊಬ್ಬರೂ ಪ್ರಸ್ತುತ ಈ ಫೀಚರ್‌ ಅನ್ನು ಬಳಸಬಹುದು ಮತ್ತು ಇದು ಶೀಘ್ರದಲ್ಲೇ ಭಾರತ ಸೇರಿದಂತೆ ಹೆಚ್ಚಿನ ದೇಶಗಳಲ್ಲಿ ಲಭ್ಯವಿರುತ್ತದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಕ್ವೈಟ್ ಮೋಡ್ ಅನ್ನು ಪರಿಚಯಿಸುವ ಮೂಲಕ ಜನರು ಗಮನಹರಿಸಲು ಸಹಾಯ ಮಾಡಲು ಮತ್ತು ಅವರ ಸ್ನೇಹಿತರು ಮತ್ತು ಫಾಲ್ಲೋರ್ಸ್ ಗಳೊಂದಿಗೆ ಮಿತಿಗಳನ್ನು ಹೊಂದಿಸಲು ಅವರನ್ನು ಪ್ರೋತ್ಸಾಹಿಸಲು ಬಯಸುತ್ತದೆ ಎಂದು ಮೆಟಾ ಹೇಳಿಕೊಂಡಿದೆ.

Leave A Reply

Your email address will not be published.