Republic Day: ಈ ಬಾರಿ ಗಣರಾಜ್ಯೋತ್ಸವದಲ್ಲಿ ವಿವಿಐಪಿಗಳ ಆಸನದಲ್ಲಿ ರಿಕ್ಷಾ ಎಳೆಯುವವರಿಂದ ಹಿಡಿದು ತರಕಾರಿ ಮಾರುವವರಿಗೂ ಆದ್ಯತೆ | ವಿವಿಐಪಿಗಳಿಗೆ ಆದ್ಯತೆ ಕಡಿತ!!

2023ರ ಗಣರಾಜ್ಯೋತ್ಸವ (Republic Day) ಪರೇಡ್​ಗೆ ಜನಸಾಮಾನ್ಯರಿಗೆ ಅದ್ಭುತ ಅವಕಾಶ ಬಂದೊದಗಿದೆ. ಎಂತಹ ಅವಕಾಶ ಅಂದ್ರೆ ಜನರು ಮುಖ್ಯ ವೇದಿಕೆಯ ಮುಂಭಾಗದಲ್ಲಿ ಕುಳಿತುಕೊಳ್ಳುವ ಅವಕಾಶವಾಗಿದೆ. ಪ್ರತಿ ಜನಸಾಮಾನ್ಯರಿಗೆ ಗಣರಾಜ್ಯೋತ್ಸವದ ಪ್ರಯುಕ್ತ ವಿಶೇಷವಾಗಿ ಆಹ್ವಾನಿಸಲಾಗಿದೆ. ಈ ವರ್ಷ ಗಣರಾಜ್ಯೋತ್ಸವ ಆಚರಣೆ ಜನಸಾಮಾನ್ಯರ ಕಾರ್ಯಕ್ರಮವಾಗಿದೆ. ಹಾಗೂ ಈ ಬಾರಿಯ ಗಣರಾಜ್ಯೋತ್ಸವ ಸಮಾರಂಭದಲ್ಲಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಅಧ್ಯಕ್ಷರ ಜೊತೆಗೆ ಈಜಿಪ್ಟ್​ನಿಂದ 120 ಮಂದಿ ಕವಾಯತು ತಂಡ ಪರೇಡ್​​ನಲ್ಲಿ ಭಾಗವಹಿಸಲಿದೆ. ಇದು ಕರ್ತವ್ಯ ಪಥ್​​ನಲ್ಲಿ ನಡೆಯುತ್ತಿರುವ ಮೊದಲ ಗಣರಾಜ್ಯೋತ್ಸವ ಪರೇಡ್​ ಆಗಿದೆ. ಹಾಗೇ ಕಳೆದ ಬಾರಿಗಿಂತ ಈ ಸಲ ಪರೇಡ್‌ ಆಸನಗಳ ಸಂಖ್ಯೆ 45,000 ಕ್ಕೆ ಇಳಿಸಲಾಗಿದೆ. ಇದರಲ್ಲಿ 32,000 ಆಸನಗಳಿವೆ. ಉಳಿದ 10% ​ಸೀಟ್​​ಗಳು ಸಾರ್ವಜನಿಕರಿಗೆ ಮೀಸಲಿದ್ದು, ಆನ್‌ಲೈನ್ ಮೂಲಕ ಲಭ್ಯವಾಗಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ರಕ್ಷಣಾ ಸಚಿವಾಲಯದ ಜಂಟಿ ಕಾರ್ಯದರ್ಶಿ ರಾಜೇಶ್ ಅವರು, ನಾವು ಈ ಬಾರಿ ವಿವಿಐಪಿಗಳ ಆಮಂತ್ರಣ ಪತ್ರಗಳನ್ನು ಕಡಿತಗೊಳಿಸಿದ್ದೇವೆ. ಈ ಬಾರಿ ಜನಸಾಮಾನ್ಯರಿಗೆ ವಿಶೇಷ ಆದ್ಯತೆ ನೀಡುವುದಾಗಿದೆ. ಈ ಹಿಂದೆ ನಮಗೆ ಸುಮಾರು 50,000 ಆಹ್ವಾನಗಳು ಬಂದಿದ್ದು, ಅವುಗಳನ್ನು 12,000 ಕ್ಕೆ ಇಳಿಸಲಾಗಿದೆ ಎಂದು ಹೇಳಿದರು.

ಹಾಗೇ ಈ ವೇಳೆ ಬುಡಕಟ್ಟು ಸಂಸ್ಕೃತಿ, ರಕ್ಷಣಾ ಸಚಿವಾಲಯಗಳ ಕಾರ್ಯಕ್ರಮ ಹಾಗೂ ಕೆಂಪು ಕೋಟೆಯಲ್ಲಿ ಭಾರತ್ ಪರ್ವ್ ಸಂದರ್ಭದಲ್ಲಿ ವಿವಿಧ ರಾಜ್ಯಗಳ ಕಲಾ ಪ್ರಕಾರಗಳು ಮತ್ತು ಆಹಾರ ಪದಾರ್ಥಗಳ ಪ್ರದರ್ಶನಗಳು ಕೂಡ ಇರಲಿದ್ದು, ಫ್ಲೈಪಾಸ್ಟ್ 18 ಹೆಲಿಕಾಪ್ಟರ್‌ಗಳು, 8 ಟ್ರಾನ್ಸ್‌ಪೋರ್ಟರ್ ಏರ್‌ಕ್ರಾಫ್ಟ್‌ಗಳು ಮತ್ತು 23 ಫೈಟರ್‌ಗಳ ಪ್ರದರ್ಶನ ಕೂಡ ಇರಲಿದೆ ಎನ್ನಲಾಗಿದೆ.

ಕಳೆದ ಕೆಲವು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದುಕೊಂಡು ಬಂದಿರುವಂತಹ ಕೇಂದ್ರ ಸರ್ಕಾರದ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಜನಸಾಮಾನ್ಯರಿಗೆ ವಿಶೇಷವಾದ ಆದ್ಯತೆ ನೀಡಲು ಒತ್ತು ನೀಡಲಾಗುತ್ತಿದೆ. ಇದು ಮೊದಲ ಬಾರಿ ಅಲ್ಲದೆ, ಕಳೆದ ವರ್ಷದ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಕೂಡ ಆಟೋರಿಕ್ಷಾ ಚಾಲಕರು, ಕಟ್ಟಡ ಕಾರ್ಮಿಕರು, ನೈರ್ಮಲ್ಯ ಕಾರ್ಮಿಕರು ಮತ್ತು ಮುಂಚೂಣಿಯ ಕಾರ್ಮಿಕರಿಗೆ ರಾಷ್ಟ್ರೀಯ ಮಹಾ ಕಾರ್ಯಕ್ರಮಕ್ಕೆ ಹಾಜರಾಗಲು ಆಹ್ವಾನವನ್ನು ನೀಡಲಾಗಿತ್ತು ಎಂದು ಹೇಳಲಾಗಿದೆ. ಹಾಗೇ ಈ ಬಾರಿಯೂ ಸಾಮಾನ್ಯ ಜನರಿಗೆ ಆದ್ಯತೆ ನೀಡಿದ್ದು, ಗಣರಾಜ್ಯೋತ್ಸವಕ್ಕೆ ಆಹ್ವಾನಿಸಲಾಗಿದೆ.

Leave A Reply

Your email address will not be published.