ನೀವು ವಿವಾಹಿತರೇ? ನಿಮಗೂ ದೊರಕಬಹುದು ರೂ.18,500 | ಈ ಕೆಲಸ ಮಾಡಿ
ಪ್ರತಿಯೊಬ್ಬರು ಕೂಡ ಭವಿಷ್ಯದ ಬಗ್ಗೆ ಚಿಂತನೆ ನಡೆಸಿ ಉಳಿತಾಯ ಮಾಡುವ ಅಭ್ಯಾಸ ಇಟ್ಟುಕೊಳ್ಳುವುದು ಸಾಮಾನ್ಯ. ಕೆಲವರು ನಿಶ್ಚಿತ ಠೇವಣಿ ಮೂಲಕ ಬ್ಯಾಂಕ್, ಪೋಸ್ಟ್ ಆಫೀಸ್ ಇಲ್ಲವೇ ಹಣಕಾಸಿನ ವ್ಯವಹಾರ ನಡೆಸುವ ಅಂಗ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ಆರ್ಥಿಕ ಮುಗ್ಗಟ್ಟಿನ ಸಂದರ್ಭದಲ್ಲಿ ಪರಿಹಾರ ಪಡೆಯಲು ಸಾಧ್ಯವಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು 2020 ರಲ್ಲಿ PMVVY ಯೋಜನೆಯನ್ನು ತಿದ್ದುಪಡಿ ಮಾಡಿದ್ದು, 26 ಮೇ 2020 ರಂದು, ಪ್ರಧಾನ ಮಂತ್ರಿ ವಯ ವಂದನಾ ಯೋಜನೆ (LIC PMVVY) ಅನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಜಾರಿಗೆ ತಂದಿದೆ. ಪ್ರಧಾನ ಮಂತ್ರಿ ವಯ ವಂದನಾ ಯೋಜನೆಯು ಹಿರಿಯ ನಾಗರಿಕ ಹೂಡಿಕೆದಾರರನ್ನು ಕೇಂದ್ರೀಕರಿಸಿ ಅವರಿಗೆ ಪ್ರಯೋಜನ ನೀಡಲು ಸಿದ್ಧಪಡಿಸಲಾಗಿದೆ. ಪ್ರಧಾನ ಮಂತ್ರಿ ವಯ ವಂದನಾ ಯೋಜನೆಯನ್ನು ವಿಮಾ ಕಂಪನಿ LIC ನಿರ್ವಹಿಸಲಿದ್ದು ಕೇಂದ್ರ ಸರ್ಕಾರದಿಂದ ನಡೆಸಲಾಗುತ್ತದೆ. ಇದು 60 ವರ್ಷ ದಾಟಿದ ನಾಗರಿಕರಿಗೆ ನೆರವಾಗಲು ಯೋಜನೆ ರೂಪಿಸಲಾಗಿದೆ. ಇದರಲ್ಲಿ ಹೂಡಿಕೆ ಮಾಡುವ ಹಿರಿಯ ನಾಗರಿಕರಿಗೆ ಖಾತರಿಯ ಮಾಸಿಕ ಪಿಂಚಣಿ ದೊರೆಯಲಿದೆ.
ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಆರಂಭಿಸಿರುವ ಪ್ರಧಾನ ಮಂತ್ರಿ ವಯ ವಂದನಾ ಯೋಜನೆ LIC PMVVY (ಪ್ಲಾನ್ ಸಂಖ್ಯೆ 856) ಯಲ್ಲಿ ಹೂಡಿಕೆ ಮಾಡಲು ಮಾರ್ಚ್ 31, 2023 ಅಂತಿಮ ದಿನವಾಗಿದೆ. 2023 ರ ಬಜೆಟ್ನಲ್ಲಿ, LIC PMVVY ಯೋಜನೆಗೆ ಚಂದಾದಾರರಾಗಲು ಕೊನೆಯ ದಿನಾಂಕವನ್ನು ವಿಸ್ತರಿಸಲು ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡರೆ ಏಪ್ರಿಲ್ 1, 2023 ರಿಂದ ಪ್ರಾರಂಭವಾಗುವ ಹೊಸ ಹಣಕಾಸು ವರ್ಷದಲ್ಲಿ ಈ ಪಿಂಚಣಿ ಯೋಜನೆಯು ಚಂದಾದಾರರಾಗಲು ಸಾಧ್ಯವಾಗದು. ಹಿರಿಯ ನಾಗರಿಕರು ಮಾಸಿಕ ಪಿಂಚಣಿ ಪ್ರಯೋಜನ ಪಡೆಯಬಹುದು.PMVVY ಯೋಜನೆಯ ಪ್ರಮುಖ ವಿಷಯವೆಂದರೆ 10 ವರ್ಷಗಳ ನಂತರ ಹೂಡಿಕೆದಾರರಿಗೆ ಸಂಪೂರ್ಣ ಹೂಡಿಕೆಯ ಮೊತ್ತವನ್ನು ಮರಳಿ ದೊರೆಯಲಿದೆ.
ಮಾಸಿಕ ಪಿಂಚಣಿಯನ್ನು ಖಾತರಿಪಡಿಸುವ ಈ ವಿಶೇಷ ಯೋಜನೆಗೆ ಚಂದಾದಾರರಾಗಲು 31 ಮಾರ್ಚ್ 2023 ಕೊನೆಯ ದಿನವಾಗಿದ್ದು, ಈ ಯೋಜನೆಯ ಬಡ್ಡಿಯನ್ನು ವಾರ್ಷಿಕ ಶೇ.7.40ಕ್ಕೆ ನಿಗದಿ ಮಾಡಲಾಗಿದೆ. ಹೂಡಿಕೆ ಮೊತ್ತದ ಮೇಲಿನ ಬಡ್ಡಿ ಆದಾಯದ ಆಧಾರದ ಅನುಸಾರ, ಹೂಡಿಕೆದಾರರು ಮಾಸಿಕ ಪಿಂಚಣಿಯ ಪ್ರಯೋಜನ ಪಡೆಯಬಹುದಾಗಿದೆ. ಒಬ್ಬ ವ್ಯಕ್ತಿ ಈ ಯೋಜನೆಯಲ್ಲಿ 15 ಲಕ್ಷಗಳನ್ನು ಹೂಡಿಕೆ ಮಾಡಿದರೆ, ಅವನು ವಾರ್ಷಿಕವಾಗಿ ಸುಮಾರು 1,11,000 ರೂಪಾಯಿಗಳ ಹೂಡಿಕೆಯ ಮೇಲಿನ ಬಡ್ಡಿ ಆದಾಯದ ಲಾಭವನ್ನು ಗಳಿಸಬಹುದು. ಇದರ ಆಧಾರದ ಅನುಸಾರ, ವ್ಯಕ್ತಿಯು ಮಾಸಿಕ ಪಿಂಚಣಿ ರೂ.9250 ರೂಪದಲ್ಲಿ ಆದಾಯವನ್ನು ಗಳಿಸಬಹುದು.
ವಿವಾಹಿತ ದಂಪತಿಗಳು ಅಂದರೆ ಪತಿ ಮತ್ತು ಪತ್ನಿ ಇಬ್ಬರೂ 60 ವರ್ಷದ ನಂತರ ಈ LIC PMVVY ಯ ಲಾಭವನ್ನು ತಮ್ಮದಾಗಿಸಿಕೊಳ್ಳಬಹುದು. ಈ ಯೋಜನೆಯಲ್ಲಿ ಪತಿ ಮತ್ತು ಪತ್ನಿ ಇಬ್ಬರೂ ತಲಾ 15 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದ್ದಲ್ಲಿ ಅವರು ನಿಗದಿತ ಬಡ್ಡಿದರದಲ್ಲಿ 30 ಲಕ್ಷ ರೂ.ಗಳ ಮೇಲೆ ವಾರ್ಷಿಕ 2,22,000 ರೂ. ಪ್ರಯೋಜನ ಪಡೆಯಬಹುದು. ಇದರ ಆಧಾರದ ಮೇಲೆ ಅವರ ಮನೆಗೆ ಪ್ರತಿ ತಿಂಗಳು 18500 ರೂಪಾಯಿ ಮಾಸಿಕ ಪಿಂಚಣಿ ರೂಪದಲ್ಲಿ ದೊರೆಯಲಿದೆ.