ನಿಮಗಿದು ತಿಳಿದಿರಲಿ | ಈ 5G ಫೋನ್ ಗಳಲ್ಲಿ ಜಿಯೋ 5G ಸಪೋರ್ಟ್ ಆಗಲ್ಲ! ಯಾವ ಫೋನ್ ? ಇಲ್ಲಿದೆ ಲಿಸ್ಟ್

ಭಾರತದಲ್ಲಿ ಈಗಾಗಲೇ 5ಜಿ ಸೇವೆ ಆರಂಭಗೊಂಡಿದ್ದು, ಲಕ್ಷಾಂತರ ಜನರು ಬಳಸುತ್ತಿದ್ದಾರೆ. ಏರ್ಟೆಲ್ ಹಾಗೂ ರಿಲಯನ್ಸ್ ಜಿಯೋದಂತಹ ಪ್ರಮುಖ ಟೆಲಿಕಾಂ ಸಂಸ್ಥೆಗಳು 5ಜಿ ಸೇವೆಯ ಪ್ರಾಯೋಗಿಕ ಪ್ರಯೋಗವನ್ನು ಆರಂಭಿಸಿದ್ದು, ಇತ್ತೀಚೆಗೆ ಮೈಸೂರು, ದಾವಣಗೆರೆ, ಹೊಸಪೇಟೆ, ಶಿವಮೊಗ್ಗ, ಬೀದರ್ ಸೇರಿದಂತೆ 11 ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆಯ ಬಿಡುಗಡೆಯ ಸೂಚನೆ ನೀಡಿದೆ.

ಸದ್ಯ ಜಿಯೋ ತನ್ನ ಗ್ರಾಹಕರಿಗೆ ಮೈ ಜಿಯೋ ಅಪ್ಲಿಕೇಶನ್‌ನಲ್ಲಿ ವೆಲ್‌ಕಮ್‌ ಆಫರ್‌ ಅನ್ನು ನೀಡಲಿದ್ದು, ನೀವು ಜಿಯೋ 5G ಸಪೋರ್ಟ್‌ ಇರುವ ನಗರಗಳಲ್ಲಿ ಇದ್ದರೆ, ಮೈ ಜಿಯೋ ಅಪ್ಲಿಕೇಶನ್‌ನಲ್ಲಿ ವೆಲ್‌ಕಮ್‌ ಆಫರ್ ಪಡೆಯಬಹುದಾಗಿದೆ. ಆದರೆ ಕೆಲವು 5G ಸ್ಮಾರ್ಟ್​ಫೋನ್​ಗಳಲ್ಲಿ ಜಿಯೋ 5ಜಿ ಸಪೋರ್ಟ್ ಆಗಲ್ಲ. ಆ ಫೋನ್ ಯಾವುದು? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಟೆಲಿಕಾಂ ಟಾಕ್ ವರದಿ –

ಶವೋಮಿ ಕಂಪನಿ ಬಿಡುಗಡೆ ಮಾಡಿರುವ ಶವೋಮಿ ಎಂಐ 10 ಮತ್ತು ಎಂಐ 10i ಸ್ಮಾರ್ಟ್​​ಫೋನ್​ಗಳಲ್ಲಿ ಜಿಯೋ 5ಜಿ ಸಪೋರ್ಟ್ ಆಗೋದಿಲ್ಲ. ಆದರೆ, ಶವೋಮಿ ಕಂಪನಿಯ ಸ್ಮಾರ್ಟ್ ಫೋನ್ಗಳಾದ ಎಂಐ 11 ಆಲ್ಟ್ರಾ 5G, ಶವೋಮಿ 12 ಪ್ರೊ 5G, ಶವೋಮಿ 11T ಪ್ರೊ 5G, ರೆಡ್ಮಿ ನೋಟ್ 11 ಪ್ರೊ 5G, ಶವೋಮಿ 11 Lite NE 5G, ರೆಡ್ಮಿ ನೋಟ್ 11T 5G, ರೆಡ್ಮಿ 11 ಪ್ರೈಮ್ 5G, ರೆಡ್ಮಿ ನೋಟ್ 10T 5G, ಎಂಐ 11X 5G, ಎಂಐ 11X ಪ್ರೊ 5G, ರೆಡ್ಮಿ K50i 5G, ಶವೋಮಿ 11i 5G ಮತ್ತು ಶವೋಮಿ 11i ಹೈಪರ್ ಚಾರ್ಜರ್ 5G ಫೋನ್​ಗಳಲ್ಲಿ ಜಿಯೋ 5ಜಿ ಬೆಂಬಲವಿದೆ ಎಂದು ವರದಿ ನೀಡಿದೆ.

5ಜಿ ತಂತ್ರಜ್ಞಾನದ ವಿಶೇಷತೆ ?

5ಜಿ ತಂತ್ರಜ್ಞಾನ ತಡೆರಹಿತ ಕವರೇಜ್ ಮತ್ತು ಕೋಟ್ಯಾಂತರ ಡಿವೈಸ್​ಗಳನ್ನು ಸಂಪರ್ಕಿಸಲು ಸಹಕಾರಿಯಾಗಿದೆ. ಅಲ್ಲದೆ, ವಿಡಿಯೋ ಅಥವಾ ಚಲನಚಿತ್ರವನ್ನು ಸ್ಮಾರ್ಟ್ ಫೋನ್ ನಲ್ಲಿ ಕೆಲವೇ ಸೆಕೆಂಡುಗಳಲ್ಲಿ ಡೌನ್‌ಲೋಡ್ ಮಾಡಬಹುದು. ನೀವು ಜನಸಂದಣಿ ಇರುವ ಪ್ರದೇಶಗಳಲ್ಲಿ ಇದ್ದರೂ ಕೂಡ ಅತಿಬೇಗನೆ ವಿಡಿಯೋ ಡೌನ್ಲೋಡ್ ಮಾಡಬಹುದು. ಹಾಗೂ ಅಧಿಕ ವೇಗದಲ್ಲಿ ಅತ್ಯುತ್ತಮ ಗುಣಮಟ್ಟದ ವಿಡಿಯೋ ಕರೆ ಸೇವೆ ಕೂಡ ಲಭ್ಯವಿದೆ.

ನಿಮ್ಮ ಮೊಬೈಲ್‌ 5G ಸೇವೆಯನ್ನು ಬೆಂಬಲಿಸದಿದ್ದರೆ, ಇಂತಹ ಸಮಸ್ಯೆ ನೀವೂ ಎದುರಿಸುತ್ತಿದ್ದರೆ, ಆಗ ನೀವು ಹೊಸ ಮೊಬೈಲ್‌ನ್ನು ಖರೀದಿಸಬೇಕಾಗುತ್ತದೆ. ಇನ್ನೂ, ನಿಮ್ಮ ಫೋನ್​ 5G ಸೇವೆಯನ್ನು ಸಪೋರ್ಟ್​ ಮಾಡುತ್ತಿದೆಯೇ? ಎಂಬುದನ್ನು ಪರಿಶೀಲಿಸಬಹುದು. ಹೇಗೆ? ಇಲ್ಲಿದೆ ವಿವರ.

  • ನಿಮ್ಮ Android ಫೋನ್‌ನಲ್ಲಿ, ಸೆಟ್ಟಿಂಗ್‌ಗಳ ಅಪ್ಲಿಕೇಶನ್‌ಗೆ ಹೋಗಿ.
  • ಅಲ್ಲಿರುವ ‘Wi-Fi & Network’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ನಂತರ ‘SIM & Network’ ಆಯ್ಕೆಯನ್ನು ಕ್ಲಿಕ್ ಮಾಡಿ.
  • ಇದಾದ ಬಳಿಕ ಈಗ ನೀವು ‘ಆದ್ಯತೆಯ ನೆಟ್‌ವರ್ಕ್ ಪ್ರಕಾರ’ ಆಯ್ಕೆಯ ಅಡಿಯಲ್ಲಿ ಎಲ್ಲಾ ತಂತ್ರಜ್ಞಾನಗಳ ಪಟ್ಟಿಯನ್ನು ವೀಕ್ಷಿಸಬಹುದು.
  • ನಿಮ್ಮ ಫೋನ್ 5G ಅನ್ನು ಬೆಂಬಲಿಸಿದರೆ, ಆಗ 2G/3G/4G/5G ಎಂದು ಪಟ್ಟಿ ಮಾಡಲಾಗುತ್ತದೆ.
Leave A Reply

Your email address will not be published.