Home News ಈ ವಸ್ತುಗಳು ಯಾವುದೇ ಕಾರಣಕ್ಕೂ ಅಡುಗೆ ಮನೆಯಲ್ಲಿ ಖಾಲಿಯಾಗಬಾರದು ! ಲಕ್ಷ್ಮೀ ಕೋಪಗೊಳ್ಳುತ್ತಾಳೆ

ಈ ವಸ್ತುಗಳು ಯಾವುದೇ ಕಾರಣಕ್ಕೂ ಅಡುಗೆ ಮನೆಯಲ್ಲಿ ಖಾಲಿಯಾಗಬಾರದು ! ಲಕ್ಷ್ಮೀ ಕೋಪಗೊಳ್ಳುತ್ತಾಳೆ

Hindu neighbor gifts plot of land

Hindu neighbour gifts land to Muslim journalist

ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿನ ದೇವರ ಮನೆ, ಮಲಗುವ ಮನೆ, ಇರುವಂತೆಯೇ ಅಡುಗೆ ಮನೆ ಬಗ್ಗೆಯೂ ಕೆಲವು ವಿಷಯಗಳನ್ನು ಉಲ್ಲೇಖಿಸಲಾಗಿದೆ. ವಾಸ್ತು ಪ್ರಕಾರ, ಮನೆಯಲ್ಲಿ ಅಡುಗೆ ಕೋಣೆಯಲ್ಲಿರುವ ವಸ್ತುಗಳು ವ್ಯಕ್ತಿಯ ಅದೃಷ್ಟದ ಮೇಲೆ ಬಹಳ ಮಹತ್ವದ ಪರಿಣಾಮವನ್ನು ಬೀರುತ್ತದೆ ಎಂದು ಹೇಳಲಾಗುತ್ತದೆ. ವಾಸ್ತು ಪ್ರಕಾರ, ಅಡುಗೆ ಕೋಣೆಯಲ್ಲಿರುವ ವಸ್ತುಗಳು ವ್ಯಕ್ತಿಯ ಅದೃಷ್ಟದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ಇಲ್ಲಿ ತಿಳಿಸಲಾಗಿದೆ.

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಇಡುವ ಪ್ರತಿಯೊಂದು ವಸ್ತುವಿಗೆ ತನ್ನದೇ ಆದ ಮಹತ್ವವಿದೆ. ಈ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದಾಗ ಮಾತ್ರ ಮನೆಯಲ್ಲಿ ಧನಾತ್ಮಕ ಪರಿಣಾಮ ಬೀರುತ್ತದೆ. ವಾಸ್ತು ಪ್ರಕಾರ ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಇರಿಸಲಾದ ವಸ್ತುಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ನಾಶಮಾಡುತ್ತವೆ ಮತ್ತು ಧನಾತ್ಮಕ ಶಕ್ತಿಯು ಹರಡುತ್ತದೆ. ಅಡುಗೆಮನೆಗೆ ಸಂಬಂಧಿಸಿದಂತೆ ವಾಸ್ತು ಶಾಸ್ತ್ರದಲ್ಲಿ ಹಲವು ನಿಯಮಗಳನ್ನು ಉಲ್ಲೇಖಿಸಲಾಗಿದೆ.

ಹೌದು ಅಡುಗೆಮನೆಗೆ ಸಂಬಂಧಿಸಿದಂತೆ ವಾಸ್ತು ಶಾಸ್ತ್ರದಲ್ಲಿ ಹಲವು ನಿಯಮಗಳನ್ನು ಉಲ್ಲೇಖಿಸಲಾಗಿದೆ. ಅಡುಗೆಮನೆಯಲ್ಲಿ ಈ ವಸ್ತುಗಳು ಖಾಲಿಯಾದರೆ ಅಶುಭ ಪರಿಣಾಮ ಬೀರುತ್ತದೆ.

  • ವಾಸ್ತು ತಜ್ಞರ ಪ್ರಕಾರ ಅಡುಗೆಮನೆಯಲ್ಲಿ ಎಣ್ಣೆ ಖಾಲಿಯಾಗಲು ಬಿಡಬಾರದು. ಎಣ್ಣೆ ಶನಿ ದೇವರಿಗೆ ಸಂಬಂಧಿಸಿದ್ದಾಗಿದೆ. ಹೀಗಾಗಿ ಅಡುಗೆ ಮನೆಯಲ್ಲಿ ಎಣ್ಣೆ ಖಾಲಿಯಾದರೆ ಶನಿದೇವನ ಅಸಮಾಧಾನವನ್ನು ಎದುರಿಸಬೇಕಾಗುತ್ತದೆ.
  • ಮನೆಯಲ್ಲಿ ಉಪ್ಪು ಮುಗಿಯುವ ಮೊದಲೇ ಉಪ್ಪನ್ನು ಖರೀದಿಸಿ ತಂದಿಡಿ. ವಾಸ್ತುವಿನ ಪ್ರಕಾರ ಅಡುಗೆಮನೆಯಲ್ಲಿ ಉಪ್ಪು ಖಾಲಿಯಾಗುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಹೀಗಾದರೆ ನಕಾರಾತ್ಮಕ ಶಕ್ತಿಯ ಸಂವಹನ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ವಾಸ್ತು ಉಂಟಾದರೆ ಲಕ್ಷ್ಮೀ ದೇವಿ ಹೊರಟು ಹೋಗುತ್ತಾಳೆ.
  • ಹಿಂದೂ ಧರ್ಮದಲ್ಲಿ ಅರಿಶಿನಕ್ಕೆ ವಿಶೇಷ ಮಹತ್ವವಿದೆ. ಅರಿಶಿನವನ್ನು ಮಂಗಳಕರ ಮತ್ತು ಶುಭ ಕಾರ್ಯಗಳಲ್ಲಿ ಬಳಸಲಾಗುತ್ತದೆ. ಅರಿಶಿನದ ಬಗ್ಗೆ ವಾಸ್ತು ಶಾಸ್ತ್ರದಲ್ಲಿಯೂ ಉಲ್ಲೇಖಿಸಲಾಗಿದೆ. ಅಡುಗೆಮನೆಯಲ್ಲಿ ಅರಿಶಿನ ಕೂಡಾ ಖಾಲಿಯಾಗಬಾರದು. ಅರಿಶಿನ ಖಾಲಿಯಾದರೆ ಗುರುದೋಷ ಎದುರಾಗುತ್ತದೆ ಎನ್ನಲಾಗುತ್ತದೆ. ವಿಷ್ಣುವಿಗೆ ಹಳದಿ ಬಣ್ಣ ಮತ್ತು ಅರಿಶಿನ ಎಂದರೆ ತುಂಬಾ ಪ್ರಿಯ. ಈ ಕಾರಣದಿಂದಾಗಿ ಅಡುಗೆಮನೆಯಲ್ಲಿ ಅರಿಶಿನವನ್ನು ಖಾಲಿಯಾಗುವ, ಮೊದಲೇ ತಂದು ಇರಿಸಿಕೊಳ್ಳುವುದು ಮುಖ್ಯ.
  • ಹಿಂದೂ ಧರ್ಮದಲ್ಲಿ ಅಕ್ಕಿಯನ್ನು ಪೂಜೆ ಇತ್ಯಾದಿಗಳಲ್ಲಿ ಬಳಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಅಡುಗೆಮನೆಯಲ್ಲಿ ಅಕ್ಕಿ ಕೂಡಾ ಸಂಪೂರ್ಣವಾಗಿ ಖಾಲಿಯಾಗಲು ಬಿಡಬಾರದು. ಮನೆಯಲ್ಲಿ ಅಕ್ಕಿ ಖಾಲಿಯಾದರೆ ಶುಕ್ರ ದೋಷ ಎದುರಾಗುತ್ತದೆ.

ಈ ಮೇಲಿನಂತೆ ಅಡುಗೆ ಮನೆಯಲ್ಲಿ ಕೆಲವು ಆಹಾರ ಪದಾರ್ಥಗಳನ್ನು ಖಾಲಿಯಾಗದಂತೆ ನೋಡಿಕೊಳ್ಳುವುದರಿಂದ ಲಕ್ಷ್ಮೀ ಒಳಿಯುತ್ತಾಳೆ .