ಇ ರೂಪಾಯಿಯನ್ನು ನೇರವಾಗಿ ನಗದಾಗಿ ಪರಿವರ್ತಿಸಲು ಸದ್ಯದ ಮಟ್ಟಿಗೆ ಸಾಧ್ಯವಿಲ್ಲ

ಕಂಪನಿ ವ್ಯವಹಾರಗಳಿಗೆ ಡಿಜಿಟಲ್ ಕರೆನ್ಸಿ ಅತ್ಯಾವಶ್ಯಕ ಆಗಿದೆ. ಜನರು ಡಿಜಿಟಲ್ ಕರೆನ್ಸಿ ಮೂಲಕವೇ ಹೆಚ್ಚಿನ ವ್ಯವಹಾರ ನಡೆಸುತ್ತಿದ್ದೂ ಈ ಕಾರಣ ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಒಂದಾಗಿದೆ. ಆದರೆ ಇದೀಗ ಕೇಂದ್ರೀಯ ಬ್ಯಾಂಕ್​​ ಡಿಜಿಟಲ್ ಕರೆನ್ಸಿ (CBDC) ಅಥವಾ ಇ-ರೂಪಾಯಿಯನ್ನು (eRupee) ಸದ್ಯದ ಮಟ್ಟಿಗೆ ನೇರವಾಗಿ ನಗದಾಗಿ ಪರಿವರ್ತಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದೆ. ಬದಲಿಗೆ ಆರ್​ಬಿಐ (RBI) ಬ್ಯಾಂಕ್​ ಠೇವಣಿಗಳ ಮೇಲೆ ಮಾತ್ರ ಇ-ರೂಪಾಯಿಯನ್ನು ನೀಡುತ್ತಿದ್ದು, ಈ ರೀತಿಯ ಡಿಜಿಟಲ್ ಕರೆನ್ಸಿಯನ್ನು ನಗದಾಗಿ ಪರಿವರ್ತಿಸಲು ಅವಕಾಶ ನೀಡುತ್ತಿದೆ ಎಂದು ತಿಳಿಸಲಾಗಿದೆ.

ಸದ್ಯ ಬ್ಯಾಂಕ್​ ಗ್ರಾಹಕರಿಗೆ ಮಾತ್ರ ಡಿಜಿಟಲ್ ವಾಲೆಟ್ ಇನ್​ಸ್ಟಾಲ್ ಮಾಡಿಕೊಳ್ಳಲು ಸಾಧ್ಯವಿದೆ. ಇದೀಗ ಬ್ಯಾಂಕ್​ನಲ್ಲಿ ನೋಂದಾಯಿತ ಮೊಬೈಲ್​ ಸಂಖ್ಯೆಗೆ ಮಾತ್ರ ಇನ್​ಸ್ಟಾಲ್ ಅನುವು ಮಾಡಿಕೊಡಲಾಗಿದೆ. ಒಂದು ಬಾರಿ ವಾಲೆಟ್​ ಇನ್​ಸ್ಟಾಲ್ ಮಾಡಿಕೊಂಡರೆ ಅಂಥ ಗ್ರಾಹಕರು ಯಾವ ಬ್ಯಾಂಕ್​ನಿಂದ ಬೇಕಿದ್ದರೂ ವಾಲೆಟ್​ಗೆ ಇ-ರೂಪಾಯಿಯನ್ನು ಸೇರಿಸಿಕೊಳ್ಳಬಹುದಾಗಿದೆ.

ಆರ್​ಬಿಐ ಪ್ರಕಾರ ಇ-ರೂಪಾಯಿಯ ಪ್ರಾಯೋಗಿಕ ಯೋಜನೆ ತೃಪ್ತಿಕರವಾಗಿ ಸಾಗುತ್ತಿದೆ. ನಿರ್ದಿಷ್ಟ ಗ್ರಾಹಕ ತಂಡಗಳ ನಡುವೆ ವಹಿವಾಟು ನಡೆಸಲಾಗುತ್ತಿದೆ. ಬಳಕೆದಾರರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ ಎಂದು ತಿಳಿಸಿದೆ. ಸಾಮಾನ್ಯ ಕರೆನ್ಸಿಗಳಂತೆಯೇ ಇ-ರೂಪಾಯಿ ಕೂಡ ಆಗಿರುವುದರಿಂದ ಅದರ ನಿರ್ವಹಣೆಗೆ ಸಂಬಂಧಿಸಿದ ವೆಚ್ಚವನ್ನು ಆರ್​ಬಿಐಯೇ ಭರಿಸಲಿದೆ. ಸಾರ್ವಜನಿಕ ಹಿತಕ್ಕಾಗಿ ಆರ್​ಬಿಐ ಇದರ ನಿರ್ವಹಣೆ ಮಾಡಲಿದೆ ಎಂದು ಕೇಂದ್ರೀಯ ಬ್ಯಾಂಕ್​ನ ಫಿನ್​ಟೆಕ್ ಡಿಪಾರ್ಟ್​​ಮೆಂಟ್​​ನ ಚೀಫ್ ಜನರಲ್ ಮ್ಯಾನೇಜರ್ ಅನುಜ್ ರಂಜನ್ ‘ಇಂಡಿಯನ್ ಮರ್ಚೆಂಟ್ಸ್ ಚೇಂಬರ್​’ನ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.

ಬ್ಯಾಂಕ್​ಗಳು ಈಗಾಗಲೇ ಗೂಗಲ್ ಪ್ಲೇ ಸ್ಟೋರ್​ ಮತ್ತು ಆ್ಯಪಲ್ ಆ್ಯಪ್ ಸ್ಟೋರ್​ಗಳಲ್ಲಿ ಡಿಜಿಟಲ್ ವಾಲೆಟ್​ ಲಭ್ಯವಾಗುವಂತೆ ಮಾಡಿವೆ ಎಂದು ಯೆಸ್​​ ಬ್ಯಾಂಕ್​​ನ ಟ್ರಾನ್ಸಾಕ್ಷನ್ ಬ್ಯಾಕಿಂಗ್ ಮುಖ್ಯಸ್ಥ ಅಜಯ್ ರಾಜನ್ ತಿಳಿಸಿದ್ದಾರೆ.

ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಇ-ರೂಪಾ ಬಳಕೆಯ ಪ್ರಯೋಗವನ್ನು ಬೆಂಗಳೂರು, ಮುಂಬೈ, ದೆಹಲಿ ನಗರಗಳಲ್ಲಿ ಆರ್​ಬಿಐ ಇತ್ತೀಚೆಗೆ ಆರಂಭಿಸಿತ್ತು. ಇದು ಶೀಘ್ರದಲ್ಲೇ ಇತರ ನಗರಗಳಿಗೂ ವಿಸ್ತರಣೆಯಾಗಲಿದೆ. ಪ್ರಯೋಗದ ಫಲಿತಾಂಶದ ಆಧಾರದಲ್ಲಿ ಇ-ರೂಪಾಯಿ ವಹಿವಾಟನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಲಾಗುವುದು ಎಂದು ಆರ್​ಬಿಐ ತಿಳಿಸಿದೆ.

ಅದಲ್ಲದೆ ನಗದು ನಿರ್ವಹಣೆ ಉಚಿತವಾದರೂ ವ್ಯಾಪಾರಿಗಳು ನಗದು ನಿರ್ವಹಣೆ ಕಂಪನಿಗಳಿಗೆ ಶುಲ್ಕ ನೀಡಬೇಕಾಗುತ್ತದೆ. ಇ-ರೂಪಾಯಿ ಮೂಲಕ ಪಾವತಿ ಸ್ವೀಕರಿಸುವ ಬಗ್ಗೆ ಅನೇಕ ಕಂಪನಿಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಇವುಗಳಲ್ಲಿ ರಿಲಯನ್ಸ್ ರಿಟೇಲ್ ಮತ್ತು ನ್ಯಾಚುರಲ್ ಐಸ್​ಕ್ರೀಮ್​ ಕೂಡ ಸೇರಿವೆ ಎಂದು ಮಾಹಿತಿ ತಿಳಿಸಲಾಗಿದೆ .

Leave A Reply

Your email address will not be published.