RBI rate hike!: ಆರ್ ಬಿಐ ನಿಂದ ಸಿಹಿ ಸುದ್ದಿ: ಸಾಲ ತೆಗೆದುಕೊಳ್ಳುವವರಿಗೆ ಟೆನ್ಶನ್ ಫ್ರೀ ನ್ಯೂಸ್!

ಪ್ರತಿಯೊಬ್ಬರು ಕೂಡ ಭವಿಷ್ಯದ ಬಗ್ಗೆ ಚಿಂತನೆ ನಡೆಸಿ ಉಳಿತಾಯ ಮಾಡುವ ಅಭ್ಯಾಸ ಇಟ್ಟುಕೊಳ್ಳುವುದು ಸಾಮಾನ್ಯ. ಕೆಲವರು ನಿಶ್ಚಿತ ಠೇವಣಿ ಮೂಲಕ ಬ್ಯಾಂಕ್, ಪೋಸ್ಟ್ ಆಫೀಸ್ ಇಲ್ಲವೇ ಹಣಕಾಸಿನ ವ್ಯವಹಾರ ನಡೆಸುವ ಅಂಗ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ಆರ್ಥಿಕ ಮುಗ್ಗಟ್ಟಿನ ಸಂದರ್ಭದಲ್ಲಿ ಪರಿಹಾರ ಪಡೆಯಲು ಸಾಧ್ಯವಾಗುತ್ತದೆ. ಅಕ್ಟೋಬರ್-ಡಿಸೆಂಬರ್ ಅವಧಿಯ ಭಾರತದ ಪ್ರಮುಖ ಹಣದುಬ್ಬರವು ಆರ್ಬಿಐನ ನಿರೀಕ್ಷೆಗಿಂತ ಕಡಿಮೆಯಾಗಿದೆ. ನಡೆಯುತ್ತಿರುವ ಜಾಗತಿಕ ಬೆಳವಣಿಗೆಯ ಕುಸಿತದ ನಡುವೆ ಕೇಂದ್ರೀಯ ಬ್ಯಾಂಕ್ ತನ್ನ ಕಾರ್ಯತಂತ್ರವನ್ನು ಮರುಮೌಲ್ಯಮಾಪನ ಮಾಡಬಹುದು ಎಂದು ಪಾಠಕ್ ಮಂಗಳವಾರ ಬ್ಲೂಮ್ಬರ್ಗ್ ಟೆಲಿವಿಷನ್ ಒಂದರಲ್ಲಿ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಡಿಎಸ್ಪಿ ಇನ್ವೆಸ್ಟ್ಮೆಂಟ್ ಮ್ಯಾನೇಜರ್ಸ್ ಪ್ರೈವೇಟ್ನ ಅರ್ಥಶಾಸ್ತ್ರಜ್ಞ ಅಂಕಿತಾ ಪಾಠಕ್ ಅನುಸಾರ, ಫೆಬ್ರವರಿಯಲ್ಲಿ ಮುಂದಿನ ಹಣಕಾಸು ನೀತಿಯ ತೀರ್ಮಾನದ ಮೊದಲೇ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ದರ ಏರಿಕೆ ಚಕ್ರಕ್ಕೆ ವಿರಾಮ ನೀಡುವ ಸಂಭವವಿದೆ ಎನ್ನಲಾಗುತ್ತಿದೆ. ಅಂಕಿಅಂಶ ಸಚಿವಾಲಯ ಬಿಡುಗಡೆ ಮಾಡಿದ ಮೊದಲ ಅಧಿಕೃತ ಅಂದಾಜಿನ ಅನುಸಾರ ಮಾರ್ಚ್ನಲ್ಲಿ ಕೊನೆಗೊಳ್ಳುವ ಆರ್ಥಿಕ ವರ್ಷದಲ್ಲಿ ಭಾರತದ ಒಟ್ಟು ಆಂತರಿಕ ಉತ್ಪನ್ನವು 7% ರಷ್ಟು ಬೆಳೆಯುತ್ತದೆ. ಇದು ಆರ್ಬಿಐನ 6.8% ಕ್ಕಿಂತ ಹೆಚ್ಚಾಗಿದೆ. ಭಾರತವು ಹಣಕಾಸಿನ ಬಲವರ್ಧನೆಯ ಪಥದಲ್ಲಿ ಸಾಗುತ್ತಿದ್ದು ಫೆ.1 ರಂದು ಮಂಡಿಸಲಿರುವ FY24 ಬಜೆಟ್ನಲ್ಲಿ ಬಂಡವಾಳ ವೆಚ್ಚದ ಮೇಲೆ ಹೆಚ್ಚು ಗಮನಹರಿಸುತ್ತದೆ ಎಂದು ಪಾಠಕ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಜೆಟ್ ಸುಮಾರು 5% ರಿಂದ 6% ರಷ್ಟು ಬೆಳೆಯಬಹುದು ಎಂದು ಪಾಠಕ್ ಅವರು ಅಂದಾಜಿಸಿದ್ದು ಬಂಡವಾಳ ವೆಚ್ಚವು 15% ರಿಂದ 20% ವರೆಗೆ ಏರಿಕೆ ಕಂಡುಬರುತ್ತದೆ. ಆದಾಯ ವೆಚ್ಚವು 5% ರಿಂದ 7% ರಷ್ಟು ಹೆಚ್ಚಾಗುತ್ತದೆ ಎಂದು ಅವರು ಅಂದಾಜಿಸಿದ್ದಾರೆ. ಡಿಸೆಂಬರ್ ನಲ್ಲಿ ಹೆಚ್ಚಿನ ಸಾಲದ ವೆಚ್ಚಗಳು ಬೇಡಿಕೆಯನ್ನು ಕುಂಠಿತಗೊಳಿಸಿದ ಹಿನ್ನೆಲೆ ಭಾರತದ ಚಿಲ್ಲರೆ ಹಣದುಬ್ಬರವು ಸತತ ಮೂರನೇ ತಿಂಗಳಿಗೆ ಇಳಿಕೆ ಕಂಡಿದೆ ಎಂದು ಹೇಳಲಾಗಿದೆ. ಇದಲ್ಲದೆ, ಮುಂದಿನ ತಿಂಗಳು ಬಡ್ಡಿದರಗಳನ್ನು ಹೆಚ್ಚಿಸಲು ಆರ್ಬಿಐ ಮೇಲಿನ ಒತ್ತಡವನ್ನು ಕಡಿಮೆ ಮಾಡಿದ್ದು, ಬೆಲೆಗಳನ್ನು ನಿಯಂತ್ರಿಸಲು, ಸೆಂಟ್ರಲ್ ಬ್ಯಾಂಕ್ FY23 ನಲ್ಲಿ ಐದು ನೇರ ಹೆಚ್ಚಳವನ್ನು ತೆಗೆದುಕೊಳ್ಳುವ ಮೂಲಕ ನಾಲ್ಕು ವರ್ಷಗಳಲ್ಲೇ ಅತ್ಯಧಿಕ 6.25% ಗೆ ಬೆಂಚ್ ಮಾರ್ಕ್ ದರ ಏರಿಕೆ ಕಂಡಿದೆ.

Leave A Reply

Your email address will not be published.