IRCTC : 20 ರೂಪಾಯಿಗೆ ಕೊಠಡಿಗಳು ಬಾಡಿಗೆಗೆ ಲಭ್ಯ

ರೈಲು ಪ್ರಯಾಣ ಮಾಡುವವರಿಗೆ ನಿರ್ದಿಷ್ಟವಾಗಿ ರೈಲು ಯಾವ ಸಮಯಕ್ಕೆ ಬರುತ್ತದೆ ಎಂದು ಊಹಿಸಲು ಜನರಿಗೆ ಸಾಧ್ಯ ಆಗುತ್ತಿರಲಿಲ್ಲ. ಅದಲ್ಲದೆ ದೇಶದಲ್ಲಿ ದೂರ ಪ್ರಯಾಣಕ್ಕಾಗಿ ರೈಲನ್ನು ಅವಲಂಬಿಸುವವರ ಸಂಖ್ಯೆ ಹೆಚ್ಚಿದೆ. ಹಾಗಾಗಿ ಟಿಕೆಟ್ ಸುಲಭವಾಗಿ ಸಿಗುವುದಿಲ್ಲ. ಇನ್ನು ತುರ್ತು ಪರಿಸ್ಥಿತಿ ಎದುರಾಗಿ ಕಡೆ ಕ್ಷಣದಲ್ಲಿ ಟಿಕೆಟ್ ಬುಕ್ ಮಾಡುವುದಾದರೆ ಸೀಟ್ ಸಿಗುವುದು ತೀರಾ ವಿರಳ. ಕೆಲವೊಮ್ಮೆ, ಮಂಜಿನಿಂದಾಗಿ ರೈಲುಗಳು ತಡವಾಗಿ ಅಥವಾ ರದ್ದುಗೊಳ್ಳುತ್ತವೆ. ಆಗ ಸಾರಿಗೆಯಲ್ಲಿ ಇರುವವರು ಸಾಮಾನ್ಯವಾಗಿ ದಣಿದಿರುತ್ತಾರೆ. ಹಾಗಾಗಿ ಭಾರತೀಯ ರೈಲ್ವೆಯು ತಮ್ಮ ಪ್ರಯಾಣಿಕರಿಗೆ ಕೇವಲ 20 ರೂಪಾಯಿಗೆ ಕೊಠಡಿಗಳನ್ನು ಬಾಡಿಗೆಗೆ ಒದಗಿಸುವ ಮೂಲಕ ಪ್ರಯೋಜನವನ್ನು ನೀಡುತ್ತಿದೆ.

ಭಾರತೀಯ ರೈಲ್ವೆಯ ಐಆರ್‌ಸಿಟಿಸಿಯು ದೆಹಲಿ, ಮುಂಬೈ ಮತ್ತು ಚೆನ್ನೈನಂತಹ ರೈಲು ನಿಲ್ದಾಣಗಳಲ್ಲಿ ಈಗ ಸಂಸ್ಥೆ 20ರಿಂದ 40 ರೂಪಾಯಿಗೆ ಬಾಡಿಗೆಗೆ ಕೊಠಡಿ ಪಡೆಯಬಹುದು ಎಂದು ತಿಳಿಸಿದೆ ಎಂದು ಡಿಎನ್‌ಎ ವರದಿ ಮಾಡಿದೆ.

ಕೆಲವೊಮ್ಮೆ ಪ್ರತಿಕೂಲ ಹವಾಮಾನದಿಂದಾಗಿ ರೈಲುಗಳು ಕೆಲವು ಗಂಟೆಗಳ ಕಾಲ ತಡವಾಗಿ ಬರುತ್ತವೆ. ತೀವ್ರ ಶೀತದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಅನೇಕರು ಯಾವಾಗಲೂ ಹೋಟೆಲ್ ಕೋಣೆಯನ್ನು ಪಡೆಯಲು ಸಾಧ್ಯವಿಲ್ಲರುವುದಿಲ್ಲ. ಹಾಗಾಗಿ ಈ ಅನುಕೂಲವನ್ನು ಜನರು ಪಡೆಯಬಹುದು.

ಸದ್ಯ 48 ಗಂಟೆಗಳವರೆಗೂ ಅಂದರೆ 2 ದಿನಗಳವರೆಗೂ ಇಲ್ಲಿ ಉಳಿಯಬಹುದು. ಆದಾಗ್ಯೂ ಇದಕ್ಕಾಗಿ ನೀವು ದೃಢೀಕೃತ ಟಿಕೆಟ್ ಮತ್ತು ಪಿಎನ್‌ಆರ್‌ ಸಂಖ್ಯೆಯನ್ನು ಹೊಂದಿರಬೇಕು ಎಂದು ತಿಳಿಸಲಾಗಿದೆ.

ದೆಹಲಿ, ಮುಂಬೈ ಮತ್ತು ಚೆನ್ನೈನಂತಹ ದೊಡ್ಡ ನಿಲ್ದಾಣಗಳಲ್ಲಿ ರೈಲ್ವೆ ವೆಬ್‌ಸೈಟ್‌ಗಳಲ್ಲಿ ಈ ಕೊಠಡಿಗಳನ್ನು ಬುಕ್ ಮಾಡಬಹುದಾಗಿದೆ. ಈ ಕೊಠಡಿಗಳನ್ನು ಬುಕ್ ಮಾಡಲು ನೀವು //www.rr.irctctourism.com/#/home ಗೆ ಭೇಟಿ ನೀಡಬೇಕು. ಆರ್‌ಎಸಿ ಟಿಕೆಟ್ ಹೊಂದಿರುವವರು ಸಹ ಮಾಡಬಹುದು. ಪ್ರತಿ ಪಿಎನ್‌ಆರ್‌ ಸಂಖ್ಯೆಗೆ ಒಂದು ಕೊಠಡಿಯನ್ನು ಮಾತ್ರ ಬುಕ್ ಮಾಡಬಹುದು. ಮೊದಲು ಬಂದವರಿಗೆ ಮೊದಲು ಸೇವೆಯ ಆಧಾರದ ಮೇಲೆ ಕೊಠಡಿಗಳನ್ನು ಹಂಚಲಾಗುತ್ತದೆ. ಬುಕಿಂಗ್ ಮಾಡಿದ ನಂತರ, ನಿಮ್ಮ ಗುರುತಿನ ದಾಖಲೆಗಳನ್ನು ಕೇಳಲಾಗುತ್ತದೆ.

ಹೌದು ಈ ಮೇಲಿನ ಪ್ರಯೋಜನವನ್ನು ಐಆರ್‌ಸಿಟಿಸಿಯು ದೆಹಲಿ, ಮುಂಬೈ ಮತ್ತು ಚೆನ್ನೈನಂತಹ ರೈಲು ನಿಲ್ದಾಣಗಳಲ್ಲಿ ಪಡೆಯಬಹುದಾಗಿದೆ ಎಂದು ಈ ಮೂಲಕ ತಿಳಿಸಲಾಗಿದೆ.

Leave A Reply

Your email address will not be published.