UPI Payment: Good News : ಇನ್ನು ಮುಂದೆ ನೀವು ಬೇರೆ ದೇಶಗಳಲ್ಲಿ ಇದ್ರೂ ಭಾರತೀಯರು ನಿಮಗೆ ಯುಪಿಐ ಪೇಮೆಂಟ್ ಮಾಡಲು ಸಾಧ್ಯವಂತೆ

ಈಗ ಹೆಚ್ಚಿನ ವಹಿವಾಟು ನಡೆಯೋದು (Payment) ಆನ್ಲೈನ್​ನಲ್ಲಿಯೇ (Online) ಎಂದರೆ ತಪ್ಪಾಗದು. ಆದರೆ, ನೀವು ಬೇರೆ ದೇಶಗಳಲ್ಲಿ ಇದ್ದರೂ ಕೂಡ ಇನ್ನುಂದೆ ಭಾರತೀಯರು ನಿಮಗೆ ಯುಪಿಐ ಪೇಮೆಂಟ್ ಮಾಡಬಹುದು ಎಂದು ಕೇಳಿದರೆ ಅಚ್ಚರಿಯಾದರೂ ಸತ್ಯ.

ಇತ್ತೀಚೆಗೆ ಡಿಜಿಟಲ್ ಪೇಮೆಂಟ್ ಹೆಚ್ಚಿನ ಬಳಕೆಯಲ್ಲಿದ್ದು, ಈ ಯುಪಿಐ ಮೂಲಕ ಮನೆಯಲ್ಲಿಯೇ ಕುಳಿತು ಯಾವುದೇ ಬ್ಯಾಂಕಿನ ಹಣಕಾಸು ವ್ಯವಹಾರವನ್ನು ನಿರ್ವಹಿಸಬಹುದಾಗಿದೆ. ಸದ್ಯ ಭಾರತದಲ್ಲಿ ಯುಪಿಐ ಪಾವತಿ ಸೇವೆಯನ್ನು ಫೋನ್ ಪೇ ಗೂಗಲ್‌ ಪೇ (Google Pay), ಪೇಟಿಎಂ (Paytm) ನಂತಹ ಆ್ಯಪ್‌ಗಳು ನೀಡುತ್ತಿವೆ.
ಹೇಳಿ ಕೇಳಿ ಡಿಜಿಟಲ್ ಯುಗ.. ಎಲ್ಲದರಲ್ಲೂ ಬದಲಾವಣೆಯಾಗಿ ಹಿಂದಿನಂತೆ ಬ್ಯಾಂಕ್ಗಳ ಮುಂದೆ ಗಂಟೆಗಟ್ಟಲೆ ನಿಲ್ಲಬೇಕಾದ ಅನಿವಾರ್ಯತೆ ಈಗಿಲ್ಲ. ಮೊಬೈಲ್ ಎಂಬ ಮಾಯಾವಿ ಅನ್ವೇಷಣೆಯ ಬಳಿಕ ಎಲ್ಲ ಕೆಲಸಗಳು ಕ್ಷಣ ಮಾತ್ರದಲ್ಲಿ ನಡೆಯುತ್ತವೆ. ಬ್ಯಾಂಕ್ ವ್ಯವಹಾರಗಳನ್ನು ಸರಳವಾಗಿ ಸುಲಭವಾಗಿ ಮಾಡಲು ಅನುವು ಮಾಡಿಕೊಟ್ಟಿದೆ. ಇದೀಗ, ಬೇರೆ ದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರು ಕೂಡ ಯುಪಿಐ ಪೇಮೆಂಟ್ ಮಾಡಬಹುದು.

ಪ್ರಸ್ತುತ ಯುಪಿಐ ಪಾವತಿಗಳನ್ನು ಎಲ್ಲ ಭಾರತೀಯರು ಭಾರತದಲ್ಲಿ ಮಾತ್ರ ಬಳಕೆ ಮಾಡುತ್ತಿದ್ದೇವೆ. ಆದರೆ, ಶೀಘ್ರದಲ್ಲಿಯೇ ಅನಿವಾಸಿ ಭಾರತೀಯರೂ ಕೂಡ ತಮ್ಮ ಅಂತರರಾಷ್ಟ್ರೀಯ ಮೊಬೈಲ್ ಸಂಖ್ಯೆಗಳನ್ನು ಮುಖಾಂತರ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಅನ್ನು ಪ್ರವೇಶಿಸಲು ಸಾಧ್ಯ ಎನ್ನಲಾಗುತ್ತಿದೆ.

10 ದೇಶಗಳಲ್ಲಿನ ಅನಿವಾಸಿ ಭಾರತೀಯರು (ಎನ್‌ಆರ್‌‌ಐಗಳು) ತಮ್ಮ ಭಾರತೀಯ ಫೋನ್ ಸಂಖ್ಯೆಯನ್ನು ಅವಲಂಬಿಸದೆ ವ್ಯವಹಾರಗಳಿಗಾಗಿ ಯುಪಿಐ ಸೇವೆಗಳ ಸೌಲಭ್ಯ ದೊರೆಯಲಿದೆ. ಅರೇ!!! ಹೌದಾ?? ಯಾವುದೆಲ್ಲ ದೇಶದಲ್ಲಿ ಈ ಪ್ರಯೋಜನ ಪಡೆಯಬಹುದು ಎಂದು ನೀವು ಆಲೋಚಿಸುತ್ತಿದ್ದರೆ, ಉತ್ತರ ನಾವು ಹೇಳ್ತೀವಿ ಕೇಳಿ!

ಸಿಂಗಾಪುರ್, ಯುಎಸ್, ಆಸ್ಟ್ರೇಲಿಯಾ, ಕೆನಡಾ, ಹಾಂಗ್‌ ಕಾಂಗ್, ಒಮನ್, ಕತಾರ್, ಸೌದಿ ಅರೇಬಿಯಾ, ಯುಎಇ ಮತ್ತು ಯುಕೆ ದೇಶಗಳಲ್ಲಿ ಇರುವ ಭಾರತೀಯರು ಈ ಪೇಮೆಂಟ್ ವಿಧಾನವನ್ನು ಬಳಕೆ ಮಾಡಬಹುದು. ಅಷ್ಟೆ ಅಲ್ಲದೆ, ಎನ್ಆರ್‌ಇ, ಎನ್ಆರ್‌ಒ ಖಾತೆಗಳು ಯುಪಿಐ ಬಳಸಿ ವಹಿವಾಟು ಮಾಡಬಹುದು ಎನ್ನಲಾಗುತ್ತಿದೆ.

ಅನಿವಾಸಿ ಭಾರತೀಯರು ವಿದೇಶಿ ಆದಾಯವನ್ನು ಭಾರತಕ್ಕೆ ವರ್ಗಾವಣೆ ಮಾಡಲು ಎನ್ಆರ್‌ಇ ಖಾತೆಯು ನೆರವಾಗುತ್ತವೆ. ಆದರೆ ಎನ್ಆರ್‌ಒ ಖಾತೆಯು ಭಾರತದಲ್ಲಿ ಗಳಿಸಿದ ಆದಾಯವನ್ನು ನಿರ್ವಹಿಸಲು ನೆರವಾಗುತ್ತವೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಅನುಸಾರ, ಅಂತರರಾಷ್ಟ್ರೀಯ ಮೊಬೈಲ್ ಸಂಖ್ಯೆಗಳನ್ನು ಹೊಂದಿರುವ ಎನ್ಆರ್‌ಇ/ಎನ್ಆರ್‌ಒ ನಂತಹ ಖಾತೆಗಳು ಯುಪಿಐ ಬಳಸಿ ವಹಿವಾಟು ಮಾಡಬಹುದು. ಪಾವತಿ ನಿಗಮವು ಪಾಲುದಾರ ಬ್ಯಾಂಕುಗಳಿಗೆ ನಿರ್ದೇಶನಗಳನ್ನು ಅನುಸರಿಸಲು ಏಪ್ರಿಲ್ 30 ರವರೆಗೆ ಸಮಯಾವಕಾಶ ಕಲ್ಪಿಸಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಸಮಿತಿ ಇಂದು ರುಪೇ ಡೆಬಿಟ್ ಕಾರ್ಡ್ ಮತ್ತು ಕಡಿಮೆ ಮೌಲ್ಯದ ಭೀಮ್-ಯುಪಿಐ ವಹಿವಾಟುಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ 2,600 ಕೋಟಿ ಯೋಜನೆಗೆ ಅನುಮೋದನೆ ನೀಡಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ ನಿಬಂಧನೆಗಳ ಅನುಸಾರ ಈ ಖಾತೆಗಳನ್ನು ಅನುಮತಿ ನೀಡಿದೆಯೇ ಎಂದು ಬ್ಯಾಂಕುಗಳು ಖಾತ್ರಿ ಮಾಡಿಕೊಳ್ಳಬೇಕು. ಇದರ ಜೊತೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗಿದೆ. ಮನಿ ಲಾಂಡರಿಂಗ್ ಇಲ್ಲವೇ ಭಯೋತ್ಪಾದನೆಗೆ ಹಣಕಾಸು ಪೂರೈಕೆಯಾಗದ ರೀತಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು.

ಈ ದೊಡ್ಡ ಯುಪಿಐ ಕ್ರಮವು ಅಂತರರಾಷ್ಟ್ರೀಯ ವಿದ್ಯಾರ್ಥಿಗಳು, ವಿದೇಶದಲ್ಲಿ ವಾಸಿಸುವ ಕುಟುಂಬ ಮತ್ತು ಸ್ಥಳೀಯ ವ್ಯವಹಾರಗಳಿಗೆ ಸಹಾಯ ಮಾಡುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಈ ಯೋಜನೆಯಡಿ, ರುಪೇ ಮತ್ತು ಯುಪಿಐ ಬಳಸಿ ವಹಿವಾಟುಗಳನ್ನು ಉತ್ತೇಜಿಸಲು ಬ್ಯಾಂಕುಗಳಿಗೆ ಆರ್ಥಿಕವಾಗಿ ಪ್ರೋತ್ಸಾಹ ನೀಡಲಾಗುತ್ತದೆ. ಕೇವಲ ಆರು ವರ್ಷಗಳಲ್ಲಿ ಯುಪಿಐ ವಹಿವಾಟುಗಳಲ್ಲಿ ದೊಡ್ದ ಮಟ್ಟದ ಹೆಚ್ಚಳ ಕಂಡು ಬಂದಿದ್ದು, ಡಿಸೆಂಬರ್ ನಲ್ಲಿ 12 ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ ಯುಪಿಐ ವಹಿವಾಟುಗಳು ನಡೆಯುತ್ತವೆ. ಈ ಕುರಿತು, ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

“ರುಪೇ ಡೆಬಿಟ್ ಕಾರ್ಡ್‌ಗಳು ಮತ್ತು ಭೀಮ್-ಯುಪಿಐ ವಹಿವಾಟುಗಳನ್ನು ಉತ್ತೇಜಿಸುವ ಬಗ್ಗೆ ಇಂದಿನ ಕ್ಯಾಬಿನೆಟ್ ತೀರ್ಮಾನದಿಂದ ಡಿಜಿಟಲ್ ಪಾವತಿಗಳಲ್ಲಿ ಭಾರತದ ದಾಪುಗಾಲು ಮತ್ತಷ್ಟು ಸದೃಢಗೊಳ್ಳಲಿದೆ ಎಂದು ಟ್ವೀಟ್ ಮಾಡಿದ್ದಾರೆ.

Leave A Reply

Your email address will not be published.