Home News Gmail ಫುಲ್ ಆಗಿದೆಯೇ? ಒಂದೇ ಬಾರಿ ಮೇಲ್ ಡಿಲೀಟ್ ಮಾಡಲು ಈಜಿ಼ ಟ್ರಿಕ್ಸ್ ಫಾಲೋ ಮಾಡಿ

Gmail ಫುಲ್ ಆಗಿದೆಯೇ? ಒಂದೇ ಬಾರಿ ಮೇಲ್ ಡಿಲೀಟ್ ಮಾಡಲು ಈಜಿ಼ ಟ್ರಿಕ್ಸ್ ಫಾಲೋ ಮಾಡಿ

Hindu neighbor gifts plot of land

Hindu neighbour gifts land to Muslim journalist

Gmail ಅನ್ನು ದಿನಾಲೂ ಯಾರೂ ಡಿಲೀಟ್ ಮಾಡೋದಿಕ್ಕೆ ಹೋಗೋದಿಲ್ಲ. ಅದರ ಬಳಕೆ ಕಡಿಮೆ ಇರೋದ್ರಿಂದ ಅದರ ಕಡೆ ಗಮನ ಹರಿಸೋದು ವಿರಳ. ಕೆಲವೊಂದು ಬಾರಿ ಜಿ- ಮೇಲ್ ಓಪನ್ ಮಾಡಿದಾಗ ತಲೆಬಿಸಿ ಆಗುತ್ತದೆ. ಕಾರಣ ರಾಶಿ ಮೇಲ್ ಇರುತ್ತದೆ.
ಅದನ್ನ ಒಂದೊಂದಾಗಿ ಡಿಲೀಟ್ ಮಾಡುತ್ತಾ ಹೋಗುವುದು ತಲೆ ನೋವಿನ ಕೆಲಸ. ಈ ಅನಗತ್ಯ ಮೇಲ್‌ಗಳು ಮತ್ತು ಫೈಲ್‌ಗಳನ್ನು ಅಳಿಸಲು ಕಿರಿಕಿರಿ ಎನಿಸುವುದು ಸಹಜ. ಆದರೆ Gmail ಫುಲ್ ಆಗಿದ್ದರೆ, ಒಂದೇ ಬಾರಿ ಅಷ್ಟೂ ಮೇಲ್ ಡಿಲೀಟ್ ಮಾಡುವ ವಿಧಾನ ಇಲ್ಲಿದೆ.

ಗೂಗಲ್ ಪ್ರತಿ ಬಳಕೆದಾರರಿಗೆ 15GB ವರೆಗೆ ಸ್ಟೋರೇಜ್ ಅವಕಾಶವಿರುತ್ತದೆ. Gmail, Google Photos, Google Drive Roda Google ಸೇವೆಗಳು ಒಟ್ಟಾಗಿ 15GB ಮಾತ್ರ ಬಳಸಬಹುದು. ಸ್ಟೋರೇಜ್ ಫುಲ್ ಆದರೆ ಸ್ಪೇಸ್ ಕ್ಲಿಯರ್ ಮಾಡಲು ನೀವು ಅನಗತ್ಯ ಫೈಲ್‌ಗಳನ್ನು ಅಳಿಸಬಹುದು. ನೀವು ತಿಂಗಳಿಗೆ ರೂ.130 ಪ್ಲಾನ್ ತೆಗೆದುಕೊಂಡರೆ 100GB ಸ್ಟೋರೇಜ್ ಇರುತ್ತದೆ. ಹಾಗೇ ತಿಂಗಳಿಗೆ ರೂ.210 ಪ್ಲಾನ್ ತೆಗೆದುಕೊಂಡರೆ 200GB ಸ್ಟೋರೇಜ್ ಮತ್ತು ರೂ.650 ಪ್ಲಾನ್ ತೆಗೆದುಕೊಂಡರೆ 2TB ಸ್ಟೋರೇಜ್ ಸಹ ಪಡೆಯಬಹುದು.

ಜಿ-ಮೇಲ್ ನಲ್ಲಿ ಈ ಮೊದಲು ಅನಗತ್ಯ ಫೈಲ್‌ಗಳನ್ನು ಅಳಿಸಲು ಸ್ಮಾರ್ಟ್‌ಫೋನ್‌ನಲ್ಲಿ ಪ್ರತಿ ಮೇಲ್ ಅನ್ನು ಆಯ್ಕೆ ಮಾಡಿ ಅಳಿಸಬೇಕಾಗಿತ್ತು. ಆದರೆ ಈಗ ನೀವು ಸ್ಮಾರ್ಟ್‌ಫೋನ್‌ನಲ್ಲಿ ಮೇಲ್‌ಗಳನ್ನು ಒಂದೇ ಬಾರಿ ಡಿಲೀಟ್ ಮಾಡಬಹುದು. Gmail ನಲ್ಲಿ ಬರುವ ಅನಗತ್ಯ ಮೇಲ್‌ಗಳು ಮತ್ತು ಸ್ಪ್ಯಾಮ್ ಮೇಲ್ ಗಳಿಂದ ಮುಕ್ತರಾಗಲು ಹೀಗೆ ಮಾಡಿ.

  • ನಿಮ್ಮ ಸ್ಮಾರ್ಟ್ಫೋನ್ ಅಥವಾ ಡೆಸ್ಕ್‌ಟಾಪ್‌ನಲ್ಲಿ ಬ್ರೌಸರ್‌ನಲ್ಲಿ Gmail ಅನ್ನು ತೆರೆಯಿರಿ.
  • ನಂತರ ಇನ್‌ಬಾಕ್ಸ್ ವಿಭಾಗದಲ್ಲಿ ಕೆಳಗಿನ ಬಾಣದ ಗುರುತನ್ನು ಕ್ಲಿಕ್ ಮಾಡಿ. ನೀವು ಎಲ್ಲಾ ಮೇಲ್‌ಗಳನ್ನು ಆಯ್ಕೆ ಮಾಡಲು ಬಯಸಿದರೆ ಎಲ್ಲದರ ಆಯ್ಕೆಗೆ ಕ್ಲಿಕ್ ಮಾಡಿ.
  • ನಂತರ ಡಿಲೀಟ್ ಕ್ಲಿಕ್ ಮಾಡಿ. ಆ ಪುಟದಲ್ಲಿ ಇರುವ ಎಲ್ಲಾ ಮೇಲ್ ಡಿಲೀಟ್ ಆಗುತ್ತದೆ.
  • ಇನ್ನೂ, ನೀವು ಕ್ಯಾಟಗರಿಗೆ ಸಂಬಂಧಿಸಿದ ಮೇಲ್‌ಗಳನ್ನು ಅಳಿಸಬೇಕೆಂದಾದರೆ, ಆ ಕ್ಯಾಟಗರಿ ಆಯ್ಕೆಮಾಡಿ.
  • ಅದರಲ್ಲಿ ಪ್ರಾಥಮಿಕ, ಪ್ರಚಾರಗಳು, ಸಾಮಾಜಿಕ, ನವೀಕರಣಗಳಂತಹ ಹಲವು ಆಯ್ಕೆಗಳಿವೆ. ನಿಮಗೆ ಬೇಡವಾದದ್ದನ್ನು ಮಾತ್ರ ಡಿಲೀಟ್ ಮಾಡಬಹುದು.
  • ನೀವು Gmail, ಗೂಗಲ್ ಡ್ರೈವ್‌ನಲ್ಲಿ ಮುಖ್ಯವಾದ ಪೈಲ್‌ಗಳನ್ನು ಸ್ಟೋರ್ ಮಾಡಿದ್ದರೆ, ಬಹಳ ಎಚ್ಚರದಿಂದ ಕ್ಯಾಟಗರಿ ಸೆಲೆಕ್ಟ್ ಮಾಡಿ ನಂತರ ಡಿಲೀಟ್ ಮಾಡಿ.