UPSC Aspirants : ಯುಪಿಎಸ್‌ಸಿ ಎಕ್ಸಾಂನಲ್ಲಿ ಫೇಲ್‌ ಆಗಿದ್ದೀರಾ ?ಬೇಜಾರಾಗ್ಬೇಡಿ, ಈ ಉದ್ಯೋಗಗಳು ಇನ್ನೂ ಕೂಡಾ ನಿಮ್ಮ ಪಾಲಿಗೆ ಜೀವಂತ

ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವವರು ಬೆರಳೆಣಿಕೆಯಷ್ಟು ಜನ ಮಾತ್ರ. ಯಾಕಂದ್ರೆ ಯುಪಿಎಸ್ ಸಿ ಅತ್ಯಂತ ಕಠಿಣ ಪರೀಕ್ಷೆಯಾಗಿದೆ. ಪ್ರಪಂಚದಾದ್ಯಂತ IAS, IPS ಆಗಬೇಕೆಂದು ಕನಸು ಹೊತ್ತಿರುವ ಲಕ್ಷಾಂತರ ಅಭ್ಯರ್ಥಿಗಳಿದ್ದಾರೆ. ಅದರಲ್ಲಿ ಸಾಕಷ್ಟು ಜನರು ಯುಪಿಎಸ್ ಸಿ ಪರೀಕ್ಷೆ ಬರೆಯುತ್ತಾರೆ. ಆದರೆ ಕೆಲವೇ ಕೆಲವು ಅಭ್ಯರ್ಥಿಗಳು ಮಾತ್ರ ಪರೀಕ್ಷಾ ಪ್ರಕ್ರಿಯೆಯಲ್ಲಿ ಯಶಸ್ವಿಯಾಗುತ್ತಾರೆ. ಉಳಿದವರು ತಮ್ಮ ಪ್ರಯತ್ನ ಬಿಡದೆ ಹಲವಾರು ಬಾರಿ, ಕೊನೆಗೆ ವರ್ಷಗಟ್ಟಲೆ ಪ್ರಯತ್ನಿಸಿದವರೂ ಇದ್ದಾರೆ.

ಯುಪಿಎಸ್​ ಸಿ ಪರೀಕ್ಷೆಗೆ ಹಾಜರಾಗಲು ಕೆಲವು ಮಿತಿಗಳಿವೆ. ಇದರಲ್ಲಿ ನೀವು ವಯೋಮಿತಿ ಒಳಗೆ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು. ಯುಪಿಎಸ್​ ಸಿ ಪ್ರಿಲಿಮ್ಸ್​, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನದ ಹಂತಗಳಲ್ಲಿ ಯಶಸ್ವಿಯಾಗುವುದು ಸುಲಭದ ಮಾತಲ್ಲ. ಬಹಳ ಕಷ್ಟಕರವಾದದ್ದು, ಬಹಳಷ್ಟು ಅಭ್ಯರ್ಥಿಗಳಿಗೆ ಈ ಸಂದರ್ಶನದ ಹಂತದಲ್ಲಿ ಅವಕಾಶ ಕೈತಪ್ಪುತ್ತದೆ.

ಅಭ್ಯರ್ಥಿಗಳು ಯುಪಿಎಸ್ ಸಿ ಪರೀಕ್ಷೆಗೆ ಸಾಕಷ್ಟು ತಯಾರಿ ನಡೆಸಿರುತ್ತಾರೆ. ಅಪಾರ ಜ್ಞಾನ ಗಳಿಸಿರುತ್ತಾರೆ. ಆದರೆ ಪರೀಕ್ಷೆಯಲ್ಲಿ ವಿಫಲವಾದರೆ ಈ ಎಲ್ಲಾ ತಯಾರಿ, ಗಳಿಸಿದೆ ಜ್ಞಾನ ಎಲ್ಲವೂ ವ್ಯರ್ಥವಾಗುತ್ತದೆ. ಹಲವರಿಗೆ ಇದೇ ಚಿಂತೆಯಾಗಿರುತ್ತದೆ. ಕಷ್ಟಪಟ್ಟು ಕಲಿತು ಪರೀಕ್ಷೆಯಲ್ಲಿ ತೇರ್ಗಡೆ ಹೊಂದದಿದ್ದರೆ ಕಲಿತದ್ದು ವ್ಯರ್ಥವಾಯಿತು ಅಂದುಕೊಳ್ಳುತ್ತಾರೆ. ಆದರೆ ಜ್ಞಾನ ಎಂದಿಗೂ ವ್ಯರ್ಥವಾಗಲ್ಲ ಅದು ಎಂದಿಗೂ ಉಪಯೋಗಕ್ಕೆ ಬರುತ್ತದೆ. ಯುಪಿಎಸ್ ಸಿ ಪರೀಕ್ಷೆಯಲ್ಲಿ ವಿಫಲವಾದರೆ ಚಿಂತೆ ಬೇಡ, ಈ ಉದ್ಯೋಗಗಳು ಸಿಗುತ್ತೆ. ವಿಫಲವಾದವರು ಮಾತ್ರವಲ್ಲ ಮತ್ತೆ ಪರೀಕ್ಷೆಗೆ ಪ್ರಯತ್ನಿಸುತ್ತಿರುವವರು ಕೂಡ ಈ ಉದ್ಯೋಗಗಳನ್ನು ಮಾಡಬಹುದು. ಯಾವುದು? ಇಲ್ಲಿದೆ ವಿವರ.

√ ಯುಪಿಎಸ್​ ಸಿ ಪರೀಕ್ಷೆಯಲ್ಲಿ ವಿಫಲರಾದವರು ಅಥವಾ ತಯಾರಿ ನಡೆಸಿದವರಿಗೆ ಅದಕ್ಕಿಂತ ಕಡಿಮೆ ಮಟ್ಟದ ಸರ್ಕಾರಿ ಉದ್ಯೋಗದ ಪರೀಕ್ಷೆಗಳು ಸುಲಭವಾಗಬಹುದು. ಯುಪಿಎಸ್ ಸಿ ಪರೀಕ್ಷೆಗೆ ಓದಿರುವ ಜ್ಞಾನ ಇರುತ್ತವೆ ಹಾಗಾಗಿ ಇದು ಸುಲಭವಾಗಬಹುದು. ನೀವು ಪ್ರಯತ್ನಿಸಿ ಸರ್ಕಾರಿ ಕೆಲಸ ಪಡೆಯಿರಿ.

√ ಅಲ್ಲದೆ, ಯುಪಿಎಸ್​ ಸಿ ಪರೀಕ್ಷಾ ತರಬೇತಿ ಕೇಂದ್ರವನ್ನು ತೆರೆಯಬಹುದು. ಇನ್ನೊಬ್ಬರಿಗೆ ಸ್ಪೂರ್ತಿಯಾಗಿ, ಮಾರ್ಗದರ್ಶಿಯಾಗಿ ನಿಮ್ಮ ಕನಸನ್ನು ಬೇರೆಯವರ ಮೂಲಕವೂ ಸಾಧಿಸಬಹುದು. ಅಲ್ಲದೆ ನಿಮ್ಮ ಜ್ಞಾನ ವ್ಯರ್ಥವಾಗೋದಿಲ್ಲ. ಇನ್ನೂ, ಈ ಟ್ರೈನಿಂಗ್ ಸೆಂಟರ್​ ನಿಂದ ಒಳ್ಳೆಯ ಆದಾಯವನ್ನೂ ಗಳಿಸಬಹುದು. ಟ್ರೈನಿಂಗ್ ನೀಡುತ್ತಾ ನಿಮ್ಮಲ್ಲಿ ಇನ್ನಷ್ಟು ಜ್ಞಾನ ವೃದ್ಧಿಯಾಗುತ್ತದೆ. ಪುನಃ ನೀವು ಯುಪಿಎಸ್ ಸಿ ಪರೀಕ್ಷೆ ಬರೆಯಬಹುದು.

√ ಹಾಗೇ ಯುಪಿಎಸ್​ ಸಿ ಪರೀಕ್ಷೆಯಲ್ಲಿ ಯಶಸ್ವಿಯಾದ ಆಧಾರದ ಮೇಲೆ ಖಾಸಗಿ ಕಂಪನಿಗಳು ಉದ್ಯೋಗ ನೀಡುತ್ತವೆ. UPSC ಸಂದರ್ಶನದಲ್ಲಿ ಸಫಲರಾಗದೇ ಇದ್ದರೂ, ಅಲ್ಲಿಯವರೆಗೂ ತಲುಪುವುದು ಸಹ ಉತ್ತಮ ಸಾಮರ್ಥ್ಯದ ವಿಷಯವಾಗಿದೆ. ಅಂತಹ ಅಭ್ಯರ್ಥಿಗಳನ್ನು ಸಾಕಷ್ಟು ಕಂಪನಿಗಳು ಬರಮಾಡಿಕೊಳ್ಳುತ್ತವೆ. ಇದಿಷ್ಟೇ ಅಲ್ಲದೆ, ನೀವು ಯುಪಿಎಸ್​ ಸಿಗೆ ಹೇಗೆ ತಯಾರಿ ನಡೆಸಿದ್ದೀರಿ ಎಂಬುದನ್ನು ಪುಸ್ತಕ ರೂಪದಲ್ಲಿ ಹೊರತರಬಹುದು. ನಿಮ್ಮ ಐಚ್ಛಿಕ ವಿಷಯದಲ್ಲಿ Phd ಮಾಡಬಹುದು.

√ ಶಾಲಾ-ಕಾಲೇಜು ಮಕ್ಕಳಿಗೆ ಟ್ಯೂಷನ್​ ನೀಡಬಹುದು. ವಿಧ್ಯಾರ್ಥಿಗಳಿಗೆ ಸಹಕಾರಿಯಾಗುತ್ತದೆ. ಆನ್​ ಲೈನ್​ ಮೂಲಕ ಶಿಕ್ಷಣವನ್ನು ಕೂಡ ನೀಡಬಹುದು. ಐಚ್ಛಿಕ ವಿಷಯದ ಮೇಲೆ ಕೆಲಸ ಮಾಡಬಹುದು. UPSC ಅಭ್ಯರ್ಥಿಯು ತನ್ನ ಐಚ್ಛಿಕ ವಿಷಯದ ಬಗ್ಗೆ ಸಾಕಷ್ಟು ಜ್ಞಾನವನ್ನು ಪಡೆದಿರುತ್ತಾರೆ. ಅಭ್ಯರ್ಥಿಯು ತನ್ನ ಐಚ್ಛಿಕ ವಿಷಯದಲ್ಲಿ ವಿಷಯ ರಚನೆ ಮತ್ತು ಟಿಪ್ಪಣಿಗಳನ್ನು ಮಾಡುವ ಕೆಲಸ ಮಾಡಬಹುದು. ಅಭ್ಯರ್ಥಿ ಟೆಸ್ಟ್ ಸರಣಿಯಲ್ಲಿ ಕೂಡ ಕೆಲಸ ಮಾಡಬಹುದು. ಒಂದು ಪರೀಕ್ಷೆಯಲ್ಲಿ ವಿಫಲವಾದರೆ ಜೀವನದ ಬಹುದೊಡ್ಡ ಸೋಲು ಆಗಿರಲ್ಲ. ಮುಂದೆ ಯಶಸ್ಸು ಬೇರೆ ರೀತಿಯಲ್ಲಿ ಸಿಗಬಹುದು.

Leave A Reply

Your email address will not be published.