Bank Strike: ಸಾರ್ವಜನಿಕರೇ ಗಮನಿಸಿ, ಈ 2 ದಿನ ಎಲ್ಲಾ ಬ್ಯಾಂಕ್, ಎಟಿಎಂ ಜೊತೆಗೆ ಈ ಎಲ್ಲಾ ಸೇವೆಗಳು ಬಂದ್

ಯಾವುದೇ ವ್ಯವಹಾರ ನಡೆಸಲು ಬ್ಯಾಂಕಿಂಗ್ ಸೇವೆ ಬೇಕೇ ಬೇಕು. ಬ್ಯಾಂಕಿಂಗ್ ಸೇವೆಗಳು ಎಲ್ಲರಿಗೂ ಅತೀ ಮುಖ್ಯವಾದುದು. ಪ್ರತಿಯೊಂದು ವ್ಯವಹಾರಗಳು ಬ್ಯಾಂಕಿಂಗ್ ಸೇವೆಗಳಿಂದಲೇ ಆರಂಭವಾಗುವುದು ನಮಗೆ ಗೊತ್ತೇ ಇದೆ. ಈಗಾಗಲೇ ಬ್ಯಾಂಕಿಂಗ್ ವ್ಯವಸ್ಥೆ ಯ ವ್ಯತ್ಯಯ ಮತ್ತು ನಿಗೂಢ ಸಮಸ್ಯೆ, ಬೇಡಿಕೆಯನ್ನು ಈಡೇರಿಸುವ ಕುರಿತಾಗಿ ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್ ​​ಸದಸ್ಯರು ಮಹತ್ವದ ನಿರ್ಧಾರ ಒಂದನ್ನು ಕೈಗೊಂಡಿದ್ದಾರೆ.

ಸದ್ಯ ನೀವೂ ಒಂದು ವೇಳೆ ಈ ತಿಂಗಳ ಕೊನೆಯಲ್ಲಿ ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಹೊಂದಿದ್ದರೆ, ಅದನ್ನು ಸಮಯ ಇರುವಾಗಲೇ ಇತ್ಯರ್ಥಪಡಿಸಿಕೊಳ್ಳಿ. ಏಕೆಂದರೆ, ಜನವರಿ 28 ರಿಂದ ಜನವರಿ 31 ರವರೆಗೆ, ಬ್ಯಾಂಕಿಂಗ್ ಕೆಲಸವನ್ನು ನಿಭಾಯಿಸುವಲ್ಲಿ ನಿಮಗೆ ಅಡಚಣೆಗಳು ಎದುರಾಗುವ ಸಾಧ್ಯತೆ ಇದೆ. ಹೌದು ಬ್ಯಾಂಕ್ ಯೂನಿಯನ್ 2 ದಿನಗಳ ಕಾಲ ಮುಷ್ಕರ ನಡೆಸಲು ನಿರ್ಧರಿಸಿದೆ.

ಜನವರಿ 28 ರಂದು ತಿಂಗಳ ನಾಲ್ಕನೇ ಶನಿವಾರ, ಈ ಕಾರಣದಿಂದಾಗಿ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಇದರ ನಂತರ ಭಾನುವಾರದ ಕಾರಣ ಜನವರಿ 29 ರಂದು ದೇಶಾದ್ಯಂತ ಬ್ಯಾಂಕುಗಳಿಗೆ ಸಾರ್ವಜನಿಕ ರಜಾದಿನ ಇರಲಿದೆ. ಇದೆಲ್ಲದರ ಹೊರತಾಗಿ ಬ್ಯಾಂಕ್ ಯೂನಿಯನ್ ಜನವರಿ 30 ಮತ್ತು 31 ರಂದು ಮುಷ್ಕರವನ್ನು ಘೋಷಿಸಿದ್ದಾರೆ.

ಈಗಾಗಲೇ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ (ಯುಎಫ್‌ಬಿಯು) ಸಭೆ ಮುಂಬೈನಲ್ಲಿ ನಡೆದಿದ್ದು, ಎರಡು ದಿನಗಳ ಕಾಲ ಮುಷ್ಕರ ನಡೆಸಲು ಬ್ಯಾಂಕ್ ಒಕ್ಕೂಟಗಳು ನಿರ್ಧರಿಸಿವೆ. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಬ್ಯಾಂಕ್ ಒಕ್ಕೂಟಗಳು ಮುಷ್ಕರ ನಡೆಸುತ್ತಿವೆ.

ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ಅವರ ಪ್ರಕಾರ ಯುನೈಟೆಡ್ ಫೋರಂನ ಸಭೆ ನಡೆಸಲಾಗಿದ್ದು, 2 ದಿನಗಳ ಕಾಲ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. 5 ದಿನಗಳ ಕಾಲ ಬ್ಯಾಂಕಿಂಗ್ ಕೆಲಸ ಮಾಡಬೇಕು ಎಂಬುದು ಬ್ಯಾಂಕ್ ಒಕ್ಕೂಟಗಳ ಬೇಡಿಕೆಯಾಗಿದೆ ಎಂದು ತಿಳಿಸಿದರು. ಇದರೊಂದಿಗೆ ಪಿಂಚಣಿಯನ್ನೂ ಸಹ ನವೀಕರಿಸಬೇಕು ಎಂದು ಅವರು ತಿಳಿಸಿದ್ದಾರೆ.

ಒಟ್ಟಿನಲ್ಲಿ ಶನಿವಾರ ಮತ್ತು ಭಾನುವಾರ ಬ್ಯಾಂಕ್ ರಜೆ ಇದ್ದು, ಇದಾದ ನಂತರ ಸೋಮವಾರ ಮತ್ತು ಮಂಗಳವಾರ ಬ್ಯಾಂಕ್ ಮುಷ್ಕರ ನಡೆಯುತ್ತಿದ್ದು, ಗ್ರಾಹಕರು ಸಮಸ್ಯೆ ಎದುರಿಸಬೇಕಾಗಬಹುದು. ಎಟಿಎಂನಲ್ಲಿ ಹಣ ಖಾಲಿಯಾಗುವ ಸಮಸ್ಯೆ ತಲೆದೋರಬಹುದು. ಇದರೊಂದಿಗೆ, ಚೆಕ್ ಕ್ಲಿಯರೆನ್ಸ್ ಬಗ್ಗೆಯೂ ಸಮಸ್ಯೆಗಳಿರಬಹುದು ಎಂಬ ಮುನ್ಸೂಚನೆಯನ್ನು ಸಾರ್ವಜನಿಕರಿಗೆ ಈ ಮೂಲಕ ತಿಳಿಸಲಾಗಿದೆ.

Leave A Reply

Your email address will not be published.