ಇಂಟರ್ನೆಟ್ ಇಲ್ಲದೆಯೂ ಮಾಡಬಹುದು ವಾಟ್ಸಪ್ ಮೂಲಕ ಸಂವಹನ | ಇದರ ಸೆಟ್ಟಿಂಗ್ ಹೇಗೆ ಅನ್ನೋದು ಇಲ್ಲಿದೆ ನೋಡಿ..
ವಾಟ್ಸಪ್ ತನ್ನ ಗ್ರಾಹಕರನ್ನು ಹೆಚ್ಚಿಸುವ ಸಲುವಾಗಿ ಹೊಸ ಹೊಸ ಫೀಚರ್ ಗಳನ್ನು ಅಪ್ಡೇಟ್ ಮಾಡುತ್ತಲೇ ಬಂದಿದ್ದು, ಈ ಮೂಲಕ ಬಳಕೆದಾರರನ್ನು ತನ್ನತ್ತ ಸೆಳೆಯುತ್ತಿದೆ. ಇವಾಗ ಅಂತೂ ಯಾವುದೇ ಸೋಶಿಯಲ್ ಮೀಡಿಯಾಕ್ಕೂ ಕಮ್ಮಿ ಇಲ್ಲ ಎಂಬಂತೆ ಬಳಕೆದಾರರ ಭದ್ರತೆಯ ಜೊತೆಗೆ ಉತ್ತಮ ಫೀಚರ್ ಗಳನ್ನು ಜಾರಿಗೊಳಿಸಿದೆ.
ಅದರಂತೆ ಇದೀಗ ಮತ್ತೊಂದು ಅಪ್ಡೇಟ್ ಮಾಡಿದ್ದು, ಇನ್ಮುಂದೆ ಇಂಟರ್ನೆಟ್ ಇಲ್ಲದೆಯೂ ವಾಟ್ಸಪ್ ನಲ್ಲಿ ಸಂದೇಶ ರವಾನಿಸಬಹುದಾಗಿದೆ. ಹೌದು. ವಾಟ್ಸಾಪ್ ಇತ್ತೀಚೆಗೆ ಆಂಡ್ರಾಯ್ಡ್, ಐಓಎಸ್ ಮತ್ತು ಡೆಸ್ಕ್‌ಟಾಪ್ ಡಿವೈಸ್‌ಗಳಿಗೆ ಪ್ರಾಕ್ಸಿ (proxy feature) ಫೀಚರ್ ಅನ್ನು ಪ್ರಾರಂಭಿಸಿದೆ. ಈ ಆಯ್ಕೆಯು ಇಂಟರ್ನೆಟ್ ಇಲ್ಲದಿದ್ದಾಗಲೂ ಮೆಸೇಜ್ ಮಾಡಲು ಸಹಕರಿಸುತ್ತದೆ.
ವಾಟ್ಸಾಪ್‌ನ ಈ ಫೀಚರ್ ಬಳಕೆದಾರರು ತಮ್ಮ ಪ್ರದೇಶದಲ್ಲಿ ಇಂಟರ್ನೆಟ್ ಸಂಪರ್ಕವನ್ನು ನಿರ್ಬಂಧಿಸಿದರೂ ಸಹ ವಾಟ್ಸಾಪ್ ಆಕ್ಸಸ್ ಮಾಡಲು ಅನುಮತಿಸುತ್ತದೆ. ಅಧಿಕೃತ ಸಾಮಾಜಿಕ ಮಾಧ್ಯಮ ಮೂಲಗಳು ಅಥವಾ ಸರ್ಚ್ ಇಂಜಿನ್‌ಗಳ ಮೂಲಕ ಬಹು ಪ್ರಾಕ್ಸಿ ಸರ್ವರ್ ವಿಳಾಸಗಳನ್ನು ಸರ್ಚ್ ಮಾಡಬಹುದು ಹಾಗೂ ಸೇವ್ ಮಾಡಬಹುದು.
ಆಂಡ್ರಾಯ್ಡ್‌ನಲ್ಲಿ ವಾಟ್ಸಾಪ್ ಪ್ರಾಕ್ಸಿಗೆ ಕನೆಕ್ಟ್ ಮಾಡುವ ವಿಧಾನ:
*ನಿಮ್ಮ ವಾಟ್ಸಾಪ್ ಆಪ್ ಅನ್ನು ಇತ್ತೀಚಿನ ಆವೃತ್ತಿಯನ್ನು ಅಪ್‌ಡೇಟ್ ಮಾಡಿರಿ.
*ಬಳಿಕ ವಾಟ್ಸಾಪ್ > ಚಾಟ್ಸ್ ಟ್ಯಾಬ್ > ಸೆಟ್ಟಿಂಗ್‌ಗಳು > ಸಂಗ್ರಹಣೆ ಮತ್ತು ಡೇಟಾ > ಪ್ರಾಕ್ಸಿ ತೆರೆಯಿರಿ.
*ಆ ನಂತರ ಪ್ರಾಕ್ಸಿ ಬಳಸಿ ಟ್ಯಾಪ್ ಮಾಡಿ. ನಂತರ ನೀವು ಸಂಪರ್ಕಿಸಲು ಬಯಸುವ ಪ್ರಾಕ್ಸಿ ವಿಳಾಸವನ್ನು ನಮೂದಿಸಿ.
*ಸೇವ್ ಆಯ್ಕೆ ಮೇಲೆ ಟ್ಯಾಪ್ ಮಾಡಿ.
*ಸಂಪರ್ಕವು ಯಶಸ್ವಿಯಾದ ನಂತರ, ವಾಟ್ಸಾಪ್ ನಿಮಗೆ ಚೆಕ್‌ಮಾರ್ಕ್ ಅನ್ನು ತೋರಿಸುತ್ತದೆ.
ಐಫೋನ್‌ನಲ್ಲಿ ವಾಟ್ಸಾಪ್ ಪ್ರಾಕ್ಸಿಗೆ ಕನೆಕ್ಟ್ ಮಾಡುವ ವಿಧಾನ:
*ವಾಟ್ಸಾಪ್ ಸೆಟ್ಟಿಂಗ್ಸ್ > ಸಂಗ್ರಹಣೆ ಮತ್ತು ಡೇಟಾ > ಪ್ರಾಕ್ಸಿಗೆ ತೆರೆಯಿರಿ.
*ಪ್ರಾಕ್ಸಿ ಬಳಸಿ ಟ್ಯಾಪ್ ಮಾಡಿ.
*ಪ್ರಾಕ್ಸಿ ವಿಳಾಸವನ್ನು ನಮೂದಿಸಿ ಮತ್ತು ಸಂಪರ್ಕಿಸಲು ಸೇವ್ ಆಯ್ಕೆಯನ್ನು ಟ್ಯಾಪ್ ಮಾಡಿ.
ನಿಮ್ಮ ನಂಬರ್‌ಗೆ ನೀವೇ ಮೆಸೆಜ್ ಕಳುಹಿಸುವ ವಿಧಾನ:
*ನಿಮ್ಮ ಮುಖ್ಯ ಚಾಟ್ಸ್ ಟ್ಯಾಬ್‌ನಲ್ಲಿ ವಾಟ್ಸಾಪ್ ತೆರೆಯಿರಿ
- ಸ್ಕ್ರೀನ್ ಕೆಳಗಿನ ಬಲಭಾಗದಲ್ಲಿರುವ ಹೊಸ ಚಾಟ್ ಐಕಾನ್ ಅನ್ನು ಟ್ಯಾಪ್ ಮಾಡಿ.
- ಕಾಂಟ್ಯಾಕ್ಟ್ ಲಿಸ್ಟ್‌ನ ಮೇಲ್ಭಾಗದಲ್ಲಿ, ಟೆಕ್ಸ್ಟ್ ಮೆಸೆಜ್‌ನೊಂದಿಗೆ ನಿಮ್ಮ ಹೆಸರನ್ನು ಕೆಳ ಭಾಗದಲ್ಲಿ ಕಾಣುತ್ತೀರಿ.
- ಹೊಸ ಚಾಟ್ ತೆರೆಯಲು ನಿಮ್ಮ ಪ್ರೊಫೈಲ್ ಆಯ್ಕೆ (Message yourself) ಮಾಡಿ.
- ಬಳಿಕ ಸಾಮಾನ್ಯ ಚಾಟ್‌ನಂತೆ ಚಾಟ್ ವಿಂಡೋ ತೆರೆಯುತ್ತದೆ. ಅಲ್ಲಿ, ನಿಮಗೆ ನೀವೇ ಮೆಸೆಜ್ ಟೈಪ್ ಮಾಡಬಹುದು ಮತ್ತು ಕಳುಹಿಸಬಹುದು.
ಮುಖ್ಯವಾಗಿ ನೀವು ಬಹು ಪ್ರಾಕ್ಸಿ ಸರ್ವರ್ ವಿಳಾಸಗಳನ್ನು ಸೇವ್ ಮಾಡಿಕೊಳ್ಳಬೇಕು. ಏಕೆಂದರೆ ಆಗ್ಗಾಗೆ ಕೆಲವು ಸಮಯದ ನಂತರ ಅನೇಕ ಪ್ರಾಕ್ಸಿ ಸರ್ವರ್‌ಗಳನ್ನು ನಿರ್ಬಂಧಿಸಲಾಗುತ್ತದೆ. ಹೀಗಾಗಿ ಒಂದು ನೆಟ್‌ವರ್ಕ್‌ಗೆ ಕನೆಕ್ಟ್ ಮಾಡಲು ಸಾಧ್ಯವಾಗದಿದ್ದರೆ, ಬಳಕೆದಾರರು ಬೇರೊಂದು ಪ್ರಾಕ್ಸಿ ಸರ್ವರ್ ಅನ್ನು ನಮೂದಿಸಬಹುದು ಮತ್ತು ಸಂಪರ್ಕಿಸಬಹುದಾಗಿದೆ.