BSNL 4G : ಈ ದಿನ ಆರಂಭವಾಗಲಿದೆ ಎಂಬುದರ ಬಗ್ಗೆ ಕಂಪನಿ ನೀಡಿತು ಸ್ಷಷ್ಟ ಮಾಹಿತಿ
ಪ್ರಸ್ತುತ ದೇಶದಲ್ಲಿ ಹಲವಾರು ಟೆಲಿಕಾಂ ಕಂಪನಿಗಳಿವೆ. ಆದರೆ ಬಿಎಸ್‌ಎನ್‌ಎಲ್ ಒಂದು ಸರ್ಕಾರಿ ಟೆಲಿಕಾಂ ಕಂಪನಿಯಾಗಿದ್ದು ದೇಶದಲ್ಲಿ ಸಾಕಷ್ಟು ದೊಡ್ಡ ಪ್ರೈವೇಟ್ ಟೆಲಿಕಾಂ ಕಂಪನಿಗಳಿಗೆ ಪೈಪೋಟಿಯನ್ನು ನೀಡುತ್ತಾ ಬಂದಿದೆ.
ಈಗಾಗಲೇ ಭಾರತದಲ್ಲಿ 5ಜಿ ಪ್ರಾರಂಭವಾಗಿದೆ ಇದು ನಮಗೆ ಗೊತ್ತಿರುವ ವಿಚಾರ. ಸದ್ಯ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ಭಾರತದ 65 ಕ್ಕೂ ಹೆಚ್ಚು ನಗರಗಳಲ್ಲಿ ತಮ್ಮ 5G ಸೇವೆಯನ್ನು ಹೊರತಂದಿವೆ. ಜಿಯೋ , ಏರ್ ಟೆಲ್ ಮತ್ತು ವೊಡಾಫೋನ್ ಐಡಿಯಾ ನ 4G ಸೇವೆಯು ಈಗಾಗಲೇ ಭಾರತದಲ್ಲಿ ರೋಲ್‌ಔಟ್ ಆಗಿದೆ. ಆದರೆ ಬಿಎಸ್ ಎನ್ ಎಲ್ ಇನ್ನೂ 3G ಸೇವೆಯನ್ನು ನೀಡುತ್ತಿದೆ. ಶೀಘ್ರದಲ್ಲೇ ಬಿಎಸ್ ಎನ್ ಎಲ್ ಕೂಡಾ 4G ಸೇವೆಯನ್ನು ಪ್ರಾರಂಭಿಸಲಿದೆ. ಬಿಎಸ್ ಎನ್ ಎಲ್ 2023ರ ಆರಂಭದಲ್ಲಿ 4G ಸೇವೆಯನ್ನು ಆರಂಭಿಸಲಿದೆ ಎಂದು ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದರು. ಆದರೆ, 2023 ರ ದ್ವಿತೀಯಾರ್ಧದಲ್ಲಿ 4G ಸೇವೆ ಆರಂಭವಾಗಲಿದೆ ಎನ್ನುವುದನ್ನು ಬಿಎಸ್ ಎನ್ ಎಲ್ ಖಚಿತಪಡಿಸಿದೆ.
ಇನ್ನು ಬಿಎಸ್ ಎನ್ ಎಲ್ ನ 5G ಸೇವೆಯನ್ನು 2024 ರಲ್ಲಿ ಪ್ರಾರಂಭಿಸಲಾಗುವುದು ಎಂದು ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಅವರು ಈಗಾಗಲೇ ದೃಢಪಡಿಸಿದ್ದಾರೆ.
ಮುಖ್ಯವಾಗಿ ಬಿಎಸ್ ಎನ್ ಎಲ್ ಸ್ಥಳೀಯ 4G ಉಪಕರಣಗಳನ್ನು ಬಳಸುತ್ತದೆ. ಇದಕ್ಕಾಗಿ ಅದು ತೇಜಸ್ ನೆಟ್‌ವರ್ಕ್‌ನಿಂದ ಸಹಾಯ ಪಡೆಯುತ್ತಿದೆ. ಸಿಸ್ಟಮ್ ಇಂಟಿಗ್ರೇಟರ್ ಅನ್ನು ಟಿಸಿಎಸ್ ಮಾಡುತ್ತಿದೆ. ದೇಸಿ 4G ಅನ್ನು ಪ್ರಾರಂಭಿಸಲು C-DOT ಸಹ ಬಿಎಸ್ ಎನ್ ಎಲ್ ಗೆ ನೆರವಾಗುತ್ತಿದೆ ಎಂದು ಮಾಹಿತಿ ತಿಳಿಸಲಾಗಿದೆ.
4 ಜಿ ಸೇವೆ ಆರಂಭದಲ್ಲಿನ ವಿಳಂಬವು ಬಿಎಸ್ ಎನ್ ಎಲ್ ಗೆ ಭಾರೀ ನಷ್ಟವನ್ನು ಉಂಟುಮಾಡುವ ಸಾಧ್ಯತೆ ಇದೆ. ಜೊತೆಗೆ ಅಪಾರ ಗ್ರಾಹಕರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಇದೀಗ ಗ್ರಾಹಕರನ್ನು ಹೆಚ್ಚಿಸಲು ಕಂಪನಿ ಬಳಿ ಉತ್ತಮ ಅವಕಾಶವಿದೆ. ಏಕೆಂದರೆ ಅನೇಕ ಟೆಲಿಕಾಂ ಆಪರೇಟರ್‌ಗಳು ತಮ್ಮ ಗ್ರಾಹಕರನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಹೊತ್ತಿನಲ್ಲಿ ಬಿಎಸ್‌ಎನ್‌ಎಲ್ 4ಜಿ ಸೇವೆ ಆರಂಭಿಸುತ್ತಿದ್ದರೆ ಸಾಕಷ್ಟು ಲಾಭವಾಗುತ್ತಿತ್ತು.
ಈಗಾಗಲೇ 5ಜಿ ನೆಟ್ ವರ್ಕ್ ಇರುವಾಗ ಇನ್ನೂ ಸಹ 4ಜಿ ಸೇವೆ ಒದಗಿಸಲು ಬಿಎಸ್ ಎನ್ ಎಲ್ ಕಂಪನಿ ಮೀನಾ ಮೇಷ ಎಣಿಸುತ್ತಿರುವುದು ಗ್ರಾಹಕರ ತಾಳ್ಮೆ ಕೆಡಿಸುತ್ತಿದೆ ಎಂದರೆ ತಪ್ಪಾಗಲಾರದು.