Jio 5G : ಮಂಗಳೂರು ಸೇರಿದಂತೆ ಈ ನಗರಗಳಲ್ಲಿ ಜಿಯೋ 5G ಪ್ರಾರಂಭ !
ದೇಶದ ನಂಬರ್ 1 ಟೆಲಿಕಾಂ ಕಂಪನಿಯಾಗಿರುವ ಜಿಯೋ ಮುಂದಿನ ದಿನಗಳಲ್ಲಿ ದೇಶವನ್ನು ಒಂದು ಡಿಜಿಟಲೈಸ್ ಮಾಡುವಲ್ಲಿ ಪ್ರಯತ್ನ ಮಾಡುತ್ತಿದೆ. ಇದರ ಜೊತೆಗೆ ತನ್ನ ಟೆಲಿಕಾಂನಲ್ಲಿ ಹಲವಾರು ಗ್ರಾಹಕರನ್ನು ಹೊಂದಿದ್ದು, ಗ್ರಾಹಕರಿಗಾಗಿ ಹಲವಾರು ಆಫರ್ಸ್ಗಳನ್ನು ಸಹ ನೀಡುತ್ತದೆ. ಈಗಾಗಲೇ ಭಾರತದ ಹಲವು ನಗರಗಳಲ್ಲಿ 5G ಸೇವೆ ಆರಂಭಗೊಂಡಿದೆ. ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ಜಿಯೋ ಇದೀಗ 2023ರ ಡಿಸೆಂಬರ್ ಒಳಗೆ ದೇಶದ ಮೂಲೆ ಮೂಲೆಯಲ್ಲೂ 5ಜಿ ನೆಟ್‌ವರ್ಕ್ ಅನ್ನು ಸ್ಥಾಪಿಸುವುದಾಗಿಯೂ ಭರವಸೆ ನೀಡಿದೆ.
ಜಿಯೋ ಟೆಲಿಕಾಂನ ಟ್ರೂ 5G ಸೇವೆಯು ಈಗಾಗಲೇ ದೆಹಲಿ,ಬೆಂಗಳೂರು, ಮುಂಬೈ, ವಾರಣಾಸಿ,ಕೋಲ್ಕತ್ತಾ,ಹೈದರಾಬಾದ್, ಚೆನ್ನೈ, ಘಾಜಿಯಾಬಾದ್, ನಾಥದ್ವಾರ, ಪುಣೆ,ಗುರುಗ್ರಾಮ, ನೋಯ್ಡಾ, ಘಾಜಿಯಾಬಾದ್, ಫರಿದಾಬಾದ್, ಗುಜರಾತ್‌ನ ಎಲ್ಲಾ 33 ಜಿಲ್ಲಾ ಕೇಂದ್ರ ಗಳಲ್ಲಿ ಲಭ್ಯವಿದೆ.
ಅದಲ್ಲದೆ 5G ಸಪೋರ್ಟ್ ಹೊಂದಿರುವ ಸ್ಮಾರ್ಟ್‌ಫೋನಿನಲ್ಲಿ 5G ನೆಟ್‌ವರ್ಕ್ ಸೆಟ್ಟಿಂಗ್ ಸಕ್ರೀಯವಾಗಿರುವ ಎಲ್ಲಾ ಜಿಯೋ ಪ್ರೀಪೇಡ್ ಮತ್ತು ಪೋಸ್ಟ್‌ಪೇಡ್ ಗ್ರಾಹಕರಿಗೆ ಅಂದರೆ ಕನಿಷ್ಠ 239 ರೂ. ರೀಚಾರ್ಜ್ ಮಾಡಿದ ಚಂದಾದಾರರಿಗೆ ಅನಿಯಮಿತ 5G ಡೇಟಾ ದೊರೆಯುತ್ತದೆ ಎಂದು ಜಿಯೋ ತಿಳಿಸಿದೆ.
ಇದೀಗ ರಿಲಯನ್ಸ್ ಜಿಯೋ ಕರ್ನಾಟಕದಲ್ಲಿ ಮತ್ತೆ ನಾಲ್ಕು ನಗರಗಳಲ್ಲಿ ‘ಜಿಯೋ ಟ್ರೂ 5ಜಿ’ ಸೇವೆಗಳನ್ನು ಆರಂಭಿಸುವ ಮೂಲಕ ರಾಜ್ಯದ ಜನತೆಗೆ ಭರ್ಜರಿ ಸಿಹಿಸುದ್ದಿ ನೀಡಿದೆ.
ಹೌದು ರಾಜ್ಯದ ಪ್ರಮುಖ ನಗರಗಳಾದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮಂಗಳೂರಿನಲ್ಲಿ 5ಜಿ ಸೇವೆಗಳನ್ನು ಆರಂಭಿಸಿರುವುದಾಗಿ ತಿಳಿಸಿದೆ. ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮಂಗಳೂರಿನ ಗ್ರಾಹಕರು ಇಂದಿನಿಂದ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾವನ್ನು ಬಳಸಬಹುದು. 2023ರ ಪ್ರಾರಂಭದೊಂದಿಗೆ ಜಿಯೋ ಟ್ರೂ 5ಜಿ ತಂತ್ರಜ್ಞಾನವನ್ನು ಆನಂದಿಸಬಹುದು ಎಂದು ಜಿಯೋ ಸಂಸ್ಥೆ ಹೇಳಿದೆ.
5ಜಿ ಸೇವೆಗಾಗಿ 5G ಸ್ಮಾರ್ಟ್‌ಫೋನ್ ಹೊಂದಿರುವ ಜಿಯೋ ಗ್ರಾಹಕರು 5G ನೆಟ್‌ವರ್ಕ್ ಸೆಟ್ಟಿಂಗ್ ಅನ್ನು ಸಕ್ರೀಯಗೊಳಿಸಲು ಕೋರಲಾಗಿದೆ. ಜಿಯೋ 5ಜಿ ಸೇವೆಯಲ್ಲಿ ಜಿಯೋ ಬಳಕೆದಾರರು ತಮ್ಮ ಜೊತೆ ಇರುವ ಸಿಮ್ ಕಾರ್ಡ್ ಅನ್ನು ಬದಲಿಸಿ 5ಜಿ ನೆಟ್‌ವರ್ಕ್ ಬಳಸಬಹುದು. ಆದರೆ, 5ಜಿ ಸೇವೆಯನ್ನು ಸ್ವಯಂಚಾಲಿತವಾಗಿ ಪಡೆಯಲು ಸಾಧ್ಯವಿಲ್ಲ. ಇದಕ್ಕಾಗಿ ನೀವು ನಿಮ್ಮ 5G ಸ್ಮಾರ್ಟ್‌ಫೋನಿನ ಸಾಫ್ಟ್‌ವೇರ್ ಅನ್ನು ಅಪ್‌ಡೇಟ್ ಮಾಡಿ ಎಂದು ಮಾಹಿತಿ ನೀಡಲಾಗಿದೆ.
ನಿಮ್ಮ ಸ್ಮಾರ್ಟ್‌ಫೋನಿನಲ್ಲಿ 5G ನೆಟ್‌ವರ್ಸ್ ಸೆಟ್ಟಿಂಗ್ ಸಕ್ರೀಯಗೊಳಿಸುವ ಮೂಲಕ 1Gbps + ವೇಗದಲ್ಲಿ 5G ಸೇವೆಗಳನ್ನು ಪಡೆಯಲು ಅವಕಾಶ ಸಿಗುತ್ತದೆ. ಈ ಬಗ್ಗೆ ಸುಲಭವಾಗಿ ಮಾಹಿತಿಯನ್ನು ಒದಗಿಸುವ ಸಲುವಾಗಿ, ಜಿಯೋ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊ ಒಂದನ್ನು ಬಿಡುಗಡೆ ಮಾಡಿದೆ.
ಸದ್ಯ 239 ರೂ.ಗಿಂತ ಹೆಚ್ಚಿನ ಬೆಲೆಯಜಿಯೋ ಯೋಜನೆಗೆ ಗ್ರಾಹಕರಾಗಿದ್ದರೆ ಅನಿಯಮಿತ 5G ಡೇಟಾ ದೊರೆಯಲಿದೆ. ಜಿಯೋ ಮುಂದಿನ ಪ್ರಕಟಣೆ ಹೊರಡಿಸುವವರೆಗೂ ಈ ಆಫರ್ ಇರುತ್ತದೆ ಎಂದು ಜಿಯೋ ಕಂಪನಿ ತಿಳಿಸಿದೆ. ಆದರೆ, ಇದು ಜಿಯೋ 5G ಸೇವೆಗಳನ್ನು ಪಡೆಯಬೇಕಾದ ನಿರ್ಧಿಷ್ಟ ಬೆಲೆಯಲ್ಲ. ಈ ಆಫರ್ ಮುಂದಿನ ಆರು ತಿಂಗಳಿನಿಂದ ಒಂದು ವರ್ಷವೇ ಇರಬಹುದು ಎಂದ ಜಿಯೋ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಮಂಗಳೂರು, ಹುಬ್ಬಳ್ಳಿ- ಧಾರವಾಡ, ಬೆಳಗಾವಿ ನಮ್ಮ ದೇಶದ ಪ್ರಮುಖ ಪ್ರವಾಸೋದ್ಯಮ ಕೇಂದ್ರ ಮತ್ತು ಪ್ರಮುಖ ಶಿಕ್ಷಣ ಕೇಂದ್ರವಾಗಿದೆ. ಮಂಗಳೂರು, ಹುಬ್ಬಳ್ಳಿ- ಧಾರವಾಡ, ಬೆಳಗಾವಿ ನಗರದಲ್ಲಿ 5ಜಿ ಹೊರತರಲು ನಾವು ಹೆಮ್ಮೆಪಡುತ್ತೇವೆ. 5ಜಿ ಸೇವೆಗಳನ್ನು ಹೊರತರಲು ಪ್ರಾರಂಭಿಸಿದ ನಂತರ ನಮ್ಮ ಅತಿದೊಡ್ಡ ಅನಾವರಣದಲ್ಲಿ ಇದೂ ಒಂದಾಗಿದೆ ಎಂದು ಜಿಯೋ ಸಂಸ್ಥೆ ತಿಳಿಸಿದೆ.